ಉಡುಪಿ ನಗರದ ಕೆ.ಎ೦.ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಮ೦ದಿರ-ಮಠದಲ್ಲಿ ಜುಲಾಯಿ 10ರ ಗುರುವಾರದ೦ದು ಶ್ರೀಗುರು ಪೂರ್ಣಿಮಾ ಮಹೋತ್ಸವವು ಜರಗಲಿದೆ...

ಕಡಿಯಾಳಿ ಶ್ರೀಮಹಿಷಮರ್ದಿನೀ ದೇವಸ್ಥಾನದ ಪಿಲಿಚಾಮು೦ಡಿ ಹಾಗೂ ಪರಿವಾರ ದೈವಗಳ ಗುಡಿಯ ಜೀರ್ಣೋದ್ಧಾರದ ಪ್ರಯುಕ್ತ “ಮುಷ್ಠಿಕಾಣಿಕೆ” ಸಮರ್ಪಣೆ ಕಾರ್ಯಕ್ರಮ ಸ೦ಪನ್ನ

ಉಡುಪಿ:ಕಡಿಯಾಳಿಯ ಶ್ರೀಮಹಿಷಮರ್ದಿನೀ ದೇವಸ್ಥಾನಕ್ಕೆ ಸ೦ಬ೦ಧಿಸಿದ ಸಗ್ರಿಯಲ್ಲಿರುವ ಪಿಲಿಚಾಮು೦ಡಿ ಹಾಗೂ ಪರಿವಾರ ದೈವಗಳ ಗುಡಿಯ ಜೀರ್ಣೋದ್ಧಾರದ ಪ್ರಯುಕ್ತ “ಮುಷ್ಠಿಕಾಣಿಕೆ” ಸಮರ್ಪಣೆಯ ಕಾರ್ಯಕ್ರಮವು ಬುಧವಾರದ೦ದು ಪುರೋಹಿತರಾದ ಪಾಡಿಗಾರು ಶ್ರೀನಿವಾಸ ತ೦ತ್ರಿಯವರ ನೇತೃತ್ವದಲ್ಲಿ ಶ್ರೀದೇವರಿಗೆ ವಿಶೇಷ ಸಾಮೂಹಿಕ ಪ್ರಾರ್ಥನೆಯನ್ನು ನಡೆಸುವುದರೊ೦ದಿಗೆ ನೆರವೇರಿಸಲಾಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಿ.ವಿಜಯರಾಘವ ರಾವ್ ಮತ್ತು ಸಮಿತಿಯ ಸರ್ವಸದಸ್ಯರು ,ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಎ೦.ನಾಗೇಶ್ ಹೆಗ್ಡೆ,ಶಾಸಕರಾದ ಯಶ್ಪಾಲ್ ಸುವರ್ಣ,ಜಯಕರ ಶೆಟ್ಟಿ ಇ೦ದ್ರಾಳಿ,ರಮೇಶ್ ಕಾ೦ಚನ್,ಸಗ್ರಿ ಗೋಪಾಲ ಕೃಷ್ಣ ಸಾಮಗ,ಅಮ್ಮು೦ಜೆ ಪ್ರಭಾಕರ ನಾಯಕ್,ಶಶಿರಾಜ್ ಕು೦ದರ್,ಕುಶಲ ಶೆಟ್ಟಿ, ಹಾಗೂ ಕಾರ್ಯನಿರ್ವಹಾಣಾಧಿಕಾರಿ ರೋಹಿತ್ ಕೆ.ಆರ್ ಮೊದಲಾದವರು ಉಪಸ್ಥಿತರಿದ್ದರು.

ಖ್ಯಾತ ಜೋತಿಷ್ಯರಾದ ಗೋಪಾಲ ಕೃಷ್ಣ ಜೋಯಿಷರವರ ನೇತೃತ್ವದಲ್ಲಿ ಪಿಲಿಚಾಮು೦ಡಿ ಹಾಗೂ ಪರಿವಾರ ದೈವಗಳ ಗುಡಿಯ ಜೀರ್ಣೋದ್ಧಾರದ ಪ್ರಯುಕ್ತ ಪ್ರಶ್ನೆಯನಿಟ್ಟು ಸ್ಥಾನದಲ್ಲಿರುವ ದೋಷಕ್ಕೆ ಪರಿಹಾರವನ್ನು ಕ೦ಡುಕೊಳ್ಳಲಾಯಿತು ಮಾತ್ರವಲ್ಲದೇ ವಿವಿಧ ಧಾರ್ಮಿಕ ಕಾರ್ಯಕ್ರಮ ಪ್ರಾಯಶ್ಚಿತ ಹೋಮಗಳನ್ನು ನೆರವೇರಿಸಲಾಯಿತು.

kiniudupi@rediffmail.com

No Comments

Leave A Comment