ಶ್ವೇತಭವನದಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್ ಗೆ ಟ್ರಂಪ್ ಔತಣ: ಮೋದಿ ಆಲಿಂಗನಕ್ಕೆ ದೊಡ್ಡ ಹೊಡೆತ - ಕಾಂಗ್ರೆಸ್....

ಉಡುಪಿ ನಗರಸಭಾ ಅಧಿವೇಶನದಲ್ಲಿ ಅಕ್ರಮ ಕಟ್ಟಡಗಳ ಬಗ್ಗೆ ಮತ್ತೆ ಧ್ವನಿ ಎತ್ತಿದ:ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಹಲವಾರು ಅಕ್ರಮ ಕಟ್ಟಡಗಳು ನಿರ್ಮಾಣವಾಗುತ್ತಿದೆ. ಸರಿಯಾದ ಸೆಟ್ ಬ್ಯಾಕ್ ಇಲ್ಲದೆ ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ಬನ್ನಂಜೆ ಹಾಗೂ ಸಿರಿಬೀಡು ವಾರ್ಡ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 169A ಇದರ ಪಕ್ಕದಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತಿದೆ. ಇದಕ್ಕೆ ಸಮರ್ಪಕವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ . ಉಡುಪಿಯ ಹೆಗ್ಡೆ ಗ್ಯಾರೇಜ್ ಬಳಿ ಒಂದು 5 ಅಂತಸ್ತಿನ ಕಟ್ಟಡ ನಿರ್ಮಾಣವಾಗುತ್ತಿದೆ ಇದಕ್ಕೆ ಯಾವ ರೀತಿಯಲ್ಲಿ ಪರ್ಮಿಷನ್ ಆಗಿದೆ. ಕೊಟ್ಟವರು ಯಾರು. ಇಲ್ಲಿ ಒಂದು ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ಲಾಡ್ಜಿಂಗ್ ಆಗುತ್ತದೆ ಎಂಬ ಮಾಹಿತಿ ಇದೆ ಇದನ್ನು ಕೂಡಲೇ ನಿಲ್ಲಿಸಬೇಕು ಎ೦ದು ಸುರೇಶ್ ಶೆಟ್ಟಿ ಬನ್ನ೦ಜೆಯವರು ಏರುದ್ವನಿಯಲ್ಲಿ ಸಭೆಯಲ್ಲಿ ಪ್ರಶ್ನಿಸಿದರು.

ಮಾತ್ರವಲ್ಲದೇ ಅದೇ ರೀತಿಯಲ್ಲಿ ಸ್ಟೇಟ್ ಬ್ಯಾಂಕ್ ಎದುರು ಕಟ್ಟಡ ನಿರ್ಮಾಣವಾಗುತ್ತಿದೆ ಅದು ಕೂಡ ಸರಿಯಾದ ಸೆಟ್ ಬ್ಯಾಕ್ ಇಲ್ಲದೆ ನಿರ್ಮಾಣವಾಗುತ್ತಿದೆ ಮತ್ತು ಬನ್ನಂಜೆ ನಾರಾಯಣ ಗುರು ಮಂದಿರದ ಎದುರು ಬದಿಯಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದು ಸರಿಯಾದ ಸೆಟ್ ಬ್ಯಾಕ್. ಪಾರ್ಕಿಂಗ್ ವ್ಯವಸ್ಥೆ ಇಲ್ಲ ಇದಕ್ಕೆಲ್ಲ ಯಾವ ರೀತಿಯಲ್ಲಿ ಲೈಸೆನ್ಸ್ ನೀಡಲಾಗಿದೆ. ಒಂದು ಸಣ್ಣ ಮನೆ ನಿರ್ಮಾಣವಾದಾಗ ಅದಕ್ಕೆ ಮನೆ ನಂಬರ್ ನೀಡಲು ಹಲವಾರು ಪ್ರಶ್ನೆಗಳನ್ನು ಕೇಳುವ ಉಡುಪಿ ನಗರಸಭೆಯು ಅಕ್ರಮ ಕಟ್ಟಡಗಳ ಬಗ್ಗೆ ಏಕೆ ಸುಮ್ಮನೆ ಕುಳಿತಿದೆ ಎಂದು ನಗರಸಭಾ ಸದಸ್ಯರಾದ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ಅಧ್ಯಕ್ಷರನ್ನು ಹಾಗೂ ಶಾಸಕರು ಮತ್ತು ಪೌರಾಯುಕ್ತರನ್ನು ಅಧಿವೇಶನದಲ್ಲಿ ಪ್ರಶ್ನಿಸಿದರು.

kiniudupi@rediffmail.com

No Comments

Leave A Comment