ಶ್ವೇತಭವನದಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್ ಗೆ ಟ್ರಂಪ್ ಔತಣ: ಮೋದಿ ಆಲಿಂಗನಕ್ಕೆ ದೊಡ್ಡ ಹೊಡೆತ - ಕಾಂಗ್ರೆಸ್....
ಹನಿಮೂನ್ಗೆಂದು ತೆರಳಿದ್ದ ದಂಪತಿ ಶಿಲ್ಲಾಂಗ್ನಲ್ಲಿ ನಾಪತ್ತೆ, ಸ್ಕೂಟರ್ ಪತ್ತೆ
ಶಿಲ್ಲಾಂಗ್:ಮೇ 28: ಹನಿಮೂನ್ ಗೆಂದು ಇಂದೋರ್ ನಿಂದ ಮೇಘಾಲಯದ ಶಿಲ್ಲಾಂಗ್ಗೆ ತೆರಳಿದ್ದ ದಂಪತಿ ನಾಪತ್ತೆಯಾಗಿದ್ದಾರೆ. ಕಾಡಿನ ಸಮೀಪ ಸ್ಕೂಟರ್ ಪತ್ತೆಯಾಗಿದೆ. ಈ ಘಟನೆಯು ಕುಟುಂಬ ಹಾಗೂ ಸ್ಥಳೀಯರಲ್ಲಿ ಆತಂಕ ಹುಟ್ಟುಹಾಕಿದೆ. ರಾಜಾ ರಘುವಂಶಿ ಎಂಬುವವರು ತಮ್ಮ ಪತ್ನಿ ಸೋನಮ್ ರಘುವಂಶಿ ಜತೆ ಶಿಲ್ಲಾಂಗ್ ತೆರಳಿದ್ದರು. ಮೇ 11ರಂದು ಅವರು ಸಪ್ತಪದಿ ತುಳಿದಿದ್ದರು.
ಓಸ್ರಾ ಹಿಲ್ಸ್ ಬಳಿ ಅವರ ಕೊನೆಯ ಲೊಕೇಷನ್ ತೋರಿಸುತ್ತಿದೆ. ಅವರು ಮೇ 20ರಂದು ಹನಿಮೂನ್ಗೆ ಹೊರಟಿದ್ದರು. ಅವರ ಕುಟುಂಬದವರು ನೀಡಿರುವ ಮಾಹಿತಿ ಪ್ರಕಾರ, ಮೊದಲನೆಯದಾಗಿ ಅವರು ಗುವಾಹಟಿ ಮೂಲಕ ಬೆಂಗಳೂರು ಹೋಗಿದ್ದರು. 23ರಂದು ಶಿಲ್ಲಾಂಗ್ಗೆ ಬಂದಿದ್ದರು. ಶಿಲ್ಲಾಂಗ್ನಲ್ಲಿ ಮಾ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ದಂಪತಿ ಓಸ್ರಾ ಬೆಟ್ಟಕ್ಕೆ ಹೋಗುವ ಮೊದಲು ಸ್ಥಳೀಯ ಏಜೆನ್ಸಿಯಿಂದ ಸ್ಕೂಟರ್ ಅನ್ನು ಬಾಡಿಗೆಗೆ ಪಡೆದಿದ್ದರು. ರಾಜಾ ಅವರನ್ನು ಸಂಪರ್ಕಿಸಲು ಸಾಧ್ಯವಾಗದ ನಂತರ, ಅವರ ಅಣ್ಣ ಸಚಿನ್ ರಘುವಂಶಿ ಮೊದಲು ನೆಟ್‌ವರ್ಕ್ ಸಮಸ್ಯೆ ಇರುತ್ತದೆ ಎಂದು ಊಹಿಸಿದ್ದರು. ಆದರೆ ನಂತರ, ಮೇ 24 ರಿಂದ ಅವರ ಎರಡೂ ಮೊಬೈಲ್‌ಗಳು ಸ್ವಿಚ್ ಆಫ್ ಆದಾಗ ಅವರು ಚಿಂತಿತರಾದರು.
ಹಲವಾರು ಪ್ರಯತ್ನಗಳ ನಂತರವೂ ಸಂಪರ್ಕ ಸಾಧ್ಯವಾಗದಿದ್ದಾಗ, ಸೋನಂ ಅವರ ಸಹೋದರ ಗೋವಿಂದ್ ಮತ್ತು ರಾಜಾ ಅವರ ಸಹೋದರ ವಿಪಿನ್ ತುರ್ತು ವಿಮಾನದ ಮೂಲಕ ಶಿಲ್ಲಾಂಗ್ ತಲುಪಿದರು. ಬಾಡಿಗೆ ಏಜೆನ್ಸಿಯನ್ನು ಸಂಪರ್ಕಿಸಿ ಫೋಟೋಗಳನ್ನು ಕಳುಹಿಸಿ ಮಾಹಿತಿ ಸಂಗ್ರಹಿಸಿದ ನಂತರ, ದಂಪತಿಗಳು ಆಕ್ಟಿವಾವನ್ನು ಅವರಿಂದ ಬಾಡಿಗೆಗೆ ಪಡೆದು ಒಸಾರಾ ಬೆಟ್ಟಕ್ಕೆ ತೆರಳಿದ್ದಾರೆ ಎಂದು ಏಜೆನ್ಸಿ ದೃಢಪಡಿಸಿತು.
ಈ ಪ್ರದೇಶದಲ್ಲಿ ಓರ್ಸಾ ಎಂಬ ಹೆಸರಿನ ರೆಸಾರ್ಟ್ ಕೂಡ ಇದೆ, ಕೊಲೆ ಪಾತಕಿಗಳು, ಅಪರಾಧಿಗಳು ಅಡಗಿರುವ ತಾಣ ಎಂದು ಪರಿಗಣಿಸಲಾಗುತ್ತದೆ ಮತ್ತು ಅಪರಾಧ ಚಟುವಟಿಕೆಗಳಿಗೆ ಕುಖ್ಯಾತವಾಗಿದೆ. ಹುಡುಕಾಟದ ಸಂದರ್ಭದಲ್ಲಿ ಭಾಷೆಯ ಸಮಸ್ಯೆ ಒಂದು ಅಡಚಣೆಯಾಗಿತ್ತು. ಸ್ಥಳೀಯ ಪೊಲೀಸರಿಂದ ಸಹಾಯ ಪಡೆಯುವಲ್ಲಿ ಭಾಷೆ ಅಡ್ಡಿಯಾಗಿದೆ ಎಂದು ರಾಜಾ ಅವರ ಸಹೋದರ ಸಚಿನ್ ರಘುವಂಶಿ ಹೇಳಿದ್ದಾರೆ. ಇದಾದ ನಂತರ, ಇಂದೋರ್ ಪೊಲೀಸ್ ಆಯುಕ್ತ ಸಂತೋಷ್ ಸಿಂಗ್ ಅವರನ್ನು ಸಂಪರ್ಕಿಸಲಾಯಿತು.
ಅವರು ಪ್ರಕರಣದ ಗಂಭೀರತೆಯನ್ನು ನೋಡಿ, ತನಿಖೆಗಾಗಿ ಅಪರಾಧ ವಿಭಾಗದ ಡಿಸಿಪಿ ರಾಜೇಶ್ ಕುಮಾರ್ ತ್ರಿಪಾಠಿ ಅವರನ್ನು ನಿಯೋಜಿಸಿದ್ದಾರೆ. ಅವರು ಶಿಲ್ಲಾಂಗ್ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಆ ಪ್ರದೇಶದಲ್ಲಿ ಈ ಹಿಂದೆಯೂ ದಂಪತಿ ಕಾಣೆಯಾಗಿದ್ದರು. ಪೊಲೀಸರು ಕೂಡ ಈ ಪ್ರದೇಶಕ್ಕೆ ಹೋಗಲು ಹಿಂಜರಿಯುತ್ತಾರೆ. ಪ್ರಸ್ತುತ, ಪೊಲೀಸರು ಮತ್ತು ಕುಟುಂಬದವರು ಇಬ್ಬರನ್ನೂ ಹುಡುಕುವಲ್ಲಿ ನಿರತರಾಗಿದ್ದಾರೆ.