ಶ್ವೇತಭವನದಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್ ಗೆ ಟ್ರಂಪ್ ಔತಣ: ಮೋದಿ ಆಲಿಂಗನಕ್ಕೆ ದೊಡ್ಡ ಹೊಡೆತ - ಕಾಂಗ್ರೆಸ್....

ಉಡುಪಿ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದ:125 ದಿನದ ಅಖಂಡ ಭಜನಾ ಮಹೋತ್ಸವಕ್ಕೆ ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶರ ಭೇಟಿ

ಉಡುಪಿ: ಉಡುಪಿಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 125 ಸಪ್ತಾಹ ಮಹೋತ್ಸವದ ಅಂಗವಾಗಿ, 125 ದಿನಗಳ ಅಖಂಡ ಭಜನಾಮಹೋತ್ಸವಕ್ಕೆ ಮೇ 22 ಗುರುವಾರದಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೆಯ ಸ್ವಾಮೀಜಿಯವರು ಶ್ರೀದೇವಳಕ್ಕೆ ಭೇಟಿ ನೀಡಿದರು.

ದೇವಳದ ವತಿಯಿಂದ ಪೂಜ್ಯ ಸ್ವಾಮೀಜಿಯವರನ್ನು ದೇವಾಲಯದ ದ್ವಾರದಲ್ಲಿ ವೇದಘೋಷ, ಪೂರ್ಣಕುಂಭ ಹಾಗೂ ಮಂಗಳವಾದ್ಯಗಳೊಂದಿಗೆ ಸ್ವಾಗತಸಲಾಯಿತು. ಬಳಿಕ ಶ್ರೀಗಳವರಿಂದ ದೇವಸ್ಥಾನದ ಪ್ರಧಾನ ದೇವರಾದ ಶ್ರೀ ಲಕ್ಷ್ಮಿ ವೆಂಕಟೇಶರ ದರ್ಶನ, ಭಜನಾ ಮಹೋತ್ಸವದ ಪ್ರಧಾನ ದೇವರಾದ ಶ್ರೀ ವಿಠೋಬ-ರುಕುಮಾಯಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.

ಶ್ರೀಗಳವರ ಪವಿತ್ರ ಉಪಸ್ಥಿತಿಯು, ನಿರಂತರವಾಗಿ ನಡೆಯುತ್ತಿರುವ ಭಜನಾ ಸೇವೆಗೆ ದಿವ್ಯತೆ ಮತ್ತು ಆಧ್ಯಾತ್ಮಿಕ ಶಕ್ತಿ ತುಂಬಿ ಮಹೋತ್ಸವದ ವೈಭವವನ್ನು ಇನ್ನಷ್ಟು ಹೆಚ್ಚಿಸಿತು. ಬಳಿಕ ದೇವಳದ ಹತ್ತು ಸಮಸ್ತರಿಂದ ಶ್ರೀಗಳವರಿಗೆ ವಿಶೇಷ ಪಾದ ಪೂಜೆಸಲ್ಲಿಸಿ , ಕಾಣಿಕೆ ಸಮರ್ಪಿಸಲಾಯಿತು

ಪರಮಪೂಜ್ಯ ಶ್ರೀಗಳವರು ಭಕ್ತಾದಿಗಳಿಗೆ ಆಶೀರ್ವದಿಸಿ, “ಶ್ರೀದೇವರಿಗೆ ಭಜನಾ-ಸಂಕೀರ್ತನೆ, ಜಪ ಮತ್ತು ಶ್ರದ್ಧಾ-ಭಕ್ತಿಯುತ ಪ್ರಾರ್ಥನೆಗಳ ಮೂಲಕ ಮತ್ತಷ್ಟು ಸಮರ್ಪಣೆ ಸಲ್ಲಿಸೋಣ. ಇಂತಹ ಅಖಂಡ ಭಜನಾ ಸೇವೆಗಳು ಊರ ಮತ್ತು ಪರವೂರಿನ ಸರ್ವ ಭಕ್ತಾದಿಮಾನಿಗಳಿಗೆ ಶ್ರೀ ದೇವರ ಸೇವೆಯನ್ನು ಇನ್ನಷ್ಟು ಮಾಡಲು ಸ್ಪೂರ್ತಿ ನೀಡಲಿ ಎಂದು ಆಶೀರ್ವಚನ ನೀಡಿದರು.

ದೇವಸ್ಥಾನದಲ್ಲಿ ನಿರಂತರ ನಡೆಯುತ್ತಿರುವ ಶ್ರೀರಾಮನಾಮ ಜಪ ಅಭಿಯಾನದ
ಕೇಂದ್ರವಾದ “ರಘುನಾಯಕ:” ಕೆ ಶ್ರೀಗಳವರು ಭೇಟಿ ನೀಡಿದರು, 401 ದಿನ ಪೂರೈಸಿದ ಈ ವೇಳೆ ಶ್ರೀ ಗಳವರ ಉಪಸ್ಥಿತಿಯಲ್ಲಿ ವಿಶೇಷ ಶ್ರೀರಾಮನಾಮ ಜಪ ನಡೆಯಿತು. ಬಳಿಕ ಶ್ರೀಗಳು ಶ್ರೀದೇವರಿಗೆ ಆರತಿ ಬೆಳೆಗಿಸಿ ಭಾಕ್ತಾದಿಗಳಿಗೆ ಪ್ರಸಾದ ನೀಡಿ ಹರಿಸಿದರು ,ಶ್ರೀಪಾದರು ತಮ್ಮ ಮುಂದಿನ ಮೊಕ್ಕ೦ಗೆ ತೆರಳಿದರು.

kiniudupi@rediffmail.com

No Comments

Leave A Comment