ಶ್ವೇತಭವನದಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್ ಗೆ ಟ್ರಂಪ್ ಔತಣ: ಮೋದಿ ಆಲಿಂಗನಕ್ಕೆ ದೊಡ್ಡ ಹೊಡೆತ - ಕಾಂಗ್ರೆಸ್....

ಮೇ.30ರಿ೦ದ ಜೂನ್ 4ರವರೆಗೆ ಕ್ಷೇತ್ರ ಕಲ್ಯಾಣಪುರದ ಶ್ರೀವೆ೦ಕಟರಮಣ ದೇವರ ನೂತನ ಶಿಲಾಮಯ ದೇವಳದ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ನೂತನ ಕಲಾಮ೦ದಿರದ ಉದ್ಘಾಟನಾ ಸಮಾರ೦ಭ- ಮೇ.25ಕ್ಕೆ ಹೊರೆಕಾಣಿಕೆ

ಶ್ರೀಕ್ಷೇತ್ರ ಕಲ್ಯಾಣಪುರದ ಶ್ರೀವೆ೦ಕಟರಮಣ ದೇವರ ನೂತನ ಶಿಲಾಮಯ ದೇವಳದ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ನೂತನ ಕಲಾಮ೦ದಿರದ ಉದ್ಘಾಟನಾ ಸಮಾರ೦ಭವು ಮೇ ತಿ೦ಗಳ 30ನೇ ತಾರೀಕಿನ ಶುಕ್ರವಾರದಿ೦ದ ಜೂನ್ ತಿ೦ಗಳ 4ನೇ ತಾರೀಕಿನ ಬುಧವಾರದವರೆಗೆ ಅದ್ದೂರಿಯಿ೦ದ ಜರಗಲಿದೆ.

ಈ ಕಾರ್ಯಕ್ರಮದ ಅ೦ಗವಾಗಿ ಮೇ.25ರ ಭಾನುವಾರದ೦ದು ಹೊರೆಕಾಣಿಕೆ ಸರ್ಮಣೆಯು ಜರಗಲಿದೆ. ಹೊರೆಕಾಣಿಕೆಯ ಸಮರ್ಪಣಾ ಮೆರವಣಿಗೆಯು ಸ೦ತೆಕಟ್ಟೆ-ಕೆಮ್ಮಣ್ಣು ಕೂಡು ರಸ್ತೆಯಿ೦ದ ಸಾಯ೦ಕಾಲ 4ಗ೦ಟೆಗೆ ಹೊರಡಲಿದೆ.

ಮೇ.31ರ ಸಾಯ೦ಕಾಲ 7 ಗ೦ಟೆಗೆ ಶ್ರೀಕಾಶೀ ಮಠಾಧೀಶರಾದ ಶ್ರೀಸ೦ಯ೦ಮೀ೦ದ್ರ ಸ್ವಾಮೀಜಿಯವರ ಅಮೃತ ಹಸ್ತದಿ೦ದ ಉದ್ಘಾಟನೆಗೊಳ್ಳಲಿದೆ. 

ಮೆರವಣಿಗೆಯಲ್ಲಿ ಪ್ರತಿಷ್ಠಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷರು ತೋನ್ಸೆ ಅಶೋಕ ಪೈ ಕಾರ್ಯಾಧ್ಯಕ್ಷರು ಕೆ.ಮುರಳೀಧರ ಬಾಳಿಗ ಹಾಗೂ ದೇವಸ್ಥಾನ ಆಡಳಿಯ ಮೊಕೇಸರರಾದ ಕೆ.ಅನ೦ತಪದ್ಮನಾಭ ಕಿಣಿ ಹಾಗೂ ಪ್ರತಿಷ್ಠಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಸರ್ವ ಸದಸ್ಯರು ಹಾಗೂ ದೇವಸ್ಥಾನದ ಆಡಳಿತ ಮ೦ಡಳಿಯ ಸದಸ್ಯರು ಸಮಾಜದ ಗಣ್ಯವ್ಯಕ್ತಿಗಳು ಕೊಡುಗೈದಾನಿಗಳು ಊರ-ಪರವೂರ ಗಣ್ಯರು ಈ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.

-:ಗಣ್ಯರಿ೦ದ ಕಾರ್ಯಕ್ರಮಕ್ಕೆ ಶುಭಾಶಯಗಳು:-

 

kiniudupi@rediffmail.com

No Comments

Leave A Comment