ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಉಡುಪಿ ಕೋ – ಆಪರೇಟಿವ್ ಟೌನ್ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ಎಚ್. ಜಯಪ್ರಕಾಶ್ ಕೆದ್ಲಾಯರಿಗೆ ಭರ್ಜರಿ ಗೆಲುವು
ಉಡುಪಿ:ಉಡುಪಿ ಕೋ ಆಪರೇಟಿವ್ ಟೌನ್ ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆಗೆ ಈ ಹಿಂದಿನ ಅಧ್ಯಕ್ಷರಾಗಿದ್ದ ಎಚ್.ಜಯಪ್ರಕಾಶ್ ಕೆದ್ಲಾಯರ ತಂಡದ ಸದಸ್ಯರಾದ ಪ್ರಹ್ಲಾದ್ ಬಲ್ಲಾಳ್ ಎನ್ˌ ಭಾಸ್ಕರ ರಾವ್ ಕಿದಿಯೂರುˌ ಮುರಳೀಧರ ಭಟ್ ಕೆ, ರವೀಂದ್ರ ಪಿ.ಎನ್ˌ ಪಿ. ರಾಘವೇಂದ್ರ ಭಟ್ ˌ ಪಿ. ಶ್ರೀಪತಿ ರಾವ್ˌ ಸೀತಾರಾಮ ಕೇಕುಡˌ ಸೂರ್ಯಪ್ರಕಾಶ್ ರಾವ್ ಎನ್ˌ ಹಾಗೂ ಮಹಿಳಾ ಪ್ರಾತಿನಿಧ್ಯದಲ್ಲಿ ಮನೋರಮಾ ಎಸ್. ಹಾಗೂ ರೂಪ ಮೋಹನ್ ಭಾರಿ ಅಂತರದಿಂದ ಗೆಲುವು ಸಾಧಿಸಿರುತ್ತಾರೆ.
ಬ್ಯಾಂಕಿನ ಚುನಾವಣೆಯನ್ನು ನಡೆಸಿಕೊಟ್ಟ ಸಹಕಾರ ಸಂಘಗಳ ಉಪ ನಿಪಂಧಕರು ರಿರ್ಟನಿಂಗ್ ಅಧಿಕಾರಿ ಲಾವಣ್ಯ .ಕೆ.ಆರ್ˌ ಇವರು ಚುನಾವಣಾ ಫಲಿತಾಂಶವನ್ನು ಘೋಷಣೆ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಮತದಾನ ಚಲಾಯಿಸಿದ ಬ್ಯಾಂಕಿನ ಎಲ್ಲಾ ಮತದಾರ ಸದಸ್ಯರಿಗೆ ಜಯಪ್ರಕಾಶ್ ಕೆದ್ಲಾಯರು ಕ್ರತಜ್ಞತೆ ಸಲ್ಲಿಸಿದರು.