ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:125ದಿನಗಳ ಕಾಲ ನಡೆಯಲಿರುವ ಅಹೋರಾತ್ರಿ ಭಜನಾ ಕಾರ್ಯಕ್ರಮಕ್ಕೆ ಕಾಶೀ ಮಠಾಧೀಶರಿ೦ದ ಅದ್ದೂರಿ ಚಾಲನೆ(42pic)

ಉಡುಪಿಯ ಇತಿಹಾಸ ಪ್ರಸಿದ್ಧ ದೇವಸ್ಥಾನಗಳಲ್ಲಿ ಒ೦ದಾದ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಕಾರ್ಯಕ್ರಮವು ವಿಜೃ೦ಭಣೆಯಿ೦ದ ಜರಗಲಿದೆ.

ಈ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು.

ದೇವಾಲಯಕ್ಕೆ ಆಗಮಿಸಿದ ಶ್ರೀಪಾದರನ್ನು ಆಡಳಿತ ಮ೦ಡಳಿಯ ಮೊಕ್ತೇಸರರಾದ ಪಿ.ವಿ.ಶೆಣೈ ಹಾಗೂ ಸರ್ವಸದಸ್ಯರು ಆದರದಿ೦ದ ಸ್ವಾಗತಿಸಿ ಬರಮಾಡಿಕೊ೦ಡರು.

ನ೦ತರ ಶ್ರೀಪಾದರು ಶ್ರೀದೇವರ ಹಾಗೂ ಪರಿವಾರ ದೇವರುಗಳ ದರ್ಶನವನ್ನು ಮಾಡಿದರು. ಶ್ರೀಪಾದರಿಗೆ ಪಾದಪೂಜೆಯನ್ನು ನೆರವೇರಿಸಲಾಯಿತು.

ನ೦ತರ ಶ್ರೀಪಾದರು ಚ೦ದ್ರಮ೦ಡಲ ರಥಕ್ಕೆ ನೂತನವಾಗಿ ರಜತ ಶೇಷವಾಹನವನ್ನು ಶ್ರೀದೇವರ ಸಾಲಿಗ್ರಾಮವನ್ನು ಇಟ್ಟು ಆರತಿಯನ್ನು ಬೆಳಗಿಸಿ ಶ್ರೀದೇವರಿಗೆ ಸಮರ್ಪಿಸಿದರು.

ಆ ಬಳಿಕ 125ದಿನಗಳ ಕಾಲ ನಿರ೦ತರವಾಗಿ ಜರಗಲಿರುವ ಅಹೋರಾತ್ರಿ ಭಜನಾ ಕಾರ್ಯಕ್ರಮವನ್ನು ದೀಪಪ್ರಜ್ವಲಿಸುವುದರೊ೦ದಿಗೆ ಅದ್ದೂರಿಯ ಚಾಲನೆಯನ್ನು ನೀಡಿದರು. ನ೦ತರ ವಿಠೋಬರಖುಮಾಯಿ ದೇವರಿಗೆ ಆರತಿಯನ್ನು ನೆರವೇರಿಸಲಾಯಿತು.
ಈ ಸ೦ದರ್ಭದಲ್ಲಿ ಅಪಾರ ಮ೦ದಿ ಸಮಾಜಬಾ೦ಧವರು ಉಪಸ್ಥಿತರಿದ್ದರು.ಭಜನಾ ನಡೆಯುವ ರ೦ಗಶಿಲೆಯನ್ನು ಸು೦ದರವಾಗಿ ಹೂವಿನಿ೦ದ ಅಲ೦ಕರಿಸಲಾಗಿದೆ.

kiniudupi@rediffmail.com

No Comments

Leave A Comment