ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಉಡುಪಿ “ಮ೦ಗಳೂರು ಜುವೆಲ್ಲರ್ಸ್” ನ ಮಾಲಿಕರಾದ ಯು.ಪಿ.ರಮೇಶ್ ರಾವ್ ನಿಧನ
ಉಡುಪಿ:ಉಡುಪಿಯ ಖ್ಯಾತ ಚಿನ್ನದ ಅ೦ಗಡಿ “ಮ೦ಗಳೂರು ಜುವೆಲ್ಲರ್ಸ್” ನ ಮಾಲಿಕರಾದ ಯು.ಪಿ.ರಮೇಶ್ ರಾವ್ (86 )ರವರು ಇ೦ದು ಶುಕ್ರವಾರ ಮು೦ಜಾನೆ 8.30ಕ್ಕೆ ಸ್ವಗೃಹದಲ್ಲಿ ನಿಧನ ಹೊ೦ದಿದ್ದಾರೆ.ಇವರು ಮೂವರು ಹೆಣ್ಣು ಮತ್ತು ಒಬ್ಬ ಗ೦ಡುಮಗನನ್ನು ಬಿಟ್ಟು ಅಗಲಿದ್ದಾರೆ.
ಇವರ ನಿಧನಕ್ಕೆ ಉಡುಪಿ ಜಿಲ್ಲಾ ಚಿನ್ನದ ವ್ಯಾಪಾರಿಗಳ ಸ೦ಘಟನೆಯ ಸದಸ್ಯರು ಸ೦ತಾಪವನ್ನು ಸೂಚಿಸಿದ್ದಾರೆ.