ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ....ಚಿತ್ತಾಪುರದಲ್ಲಿ RSS ಪಥ ಸಂಚಲನ: ವಿವಿಧ ಸಂಘಟನೆಗಳಿಗೆ ಪ್ರತ್ಯೇಕ ದಿನಾಂಕ ನಿಗದಿಪಡಿಸುವಂತೆ ಹೈಕೋರ್ಟ್ ಆದೇಶ

ಮಂಗಳೂರು: ಮಸಾಜ್‌ ಸೆಂಟರ್‌ ಮೇಲೆ ನುಗ್ಗಿ ದಾಂಧಲೆ ಪ್ರಕರಣ: 14 ಮಂದಿ ಅರೆಸ್ಟ್‌

ಮಂಗಳೂರು:ಜ.23: ಮಸಾಜ್‌ ಸೆಂಟರ್‌ ಮೇಲೆ ದುಷ್ಕರ್ಮಿಗಳು ನುಗ್ಗಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಬಂಟ್ವಾಳ ತಾಲೂಕು ಪರಂಗಿಪೇಟೆಯ ಹರ್ಷರಾಜ್ @ ಹರ್ಷಿತ್, ವಾಮಂಜೂರು ಮೂಡುಶೆಡ್ಡೆಯ ಮೋಹನ್ ದಾಸ್ @ ರವಿ, ಕಾಸರಗೋಡು ಉಪ್ಪಳದ ಪುರಂದರ, ವಾಮಂಜೂರು ಅಂಬೇಡ್ಕರ್ ನಗರದ ಸಚಿನ್, ವಾಮಂಜೂರು ಉಳಾಯಿಬೆಟ್ಟು ರವೀಶ್, ಬಂಟ್ವಾಳ ತಾಲೂಕು ಬೆಂಜನಪದವಿನ ಸುಕೇತ್, ವಾಮಂಜೂರಿನ ಅಂಕಿತ್, , ವಾಮಂಜೂರು ಮೂಡುಶೆಡ್ಡೆ ಶಿವಾಜಿನಗರದ ದೀಪಕ್, ತಾರಿಗುಡ್ಡೆ, ಬೊಂಡಂತಿಲದ ವಿಘ್ನೇಶ್, ಮಂಗಳೂರು ಅಮರ್ ಆಳ್ವ ರಸ್ತೆ, ಮಂಕಿ ಸ್ಟ್ಯಾಂಡ್ನ ಶರಣ್ ರಾಜ್, ವಾಮಂಜೂರು ಮೂಡುಶೆಡ್ಡೆ ಶಿವಾಜಿನಗರದ ಪ್ರದೀಪ್ ಪೂಜಾರಿ,ನಿಡ್ಡಲೆ, ಗೋಕರ್ಣ ಪ್ರಸಾದ್ ಅತ್ತಾವರ ಎಂದ ಗುರುತಿಸಲಾಗಿದೆ.

ರಿಸುಮಾರು 11:50 ಕ್ಕೆ ಬೆಳಗ್ಗೆ ಬರ್ಕೆ ಪೊಲೀಸ್‌ನಲ್ಲಿ ವ್ಯಾಪ್ತಿಯ ಬಿಜೈ ಕೆಎಸ್‌ಆರ್‌ಟಿಸಿ ಬಳಿಯ ಆದಿತ್ಯ ಕಾಂಪ್ಲೆಕ್ಸ್‌ನಲ್ಲಿರುವ “ಕಲರ್ಸ್” ಯುನಿಸೆಕ್ಸ್ ಸಲೂನ್ ಮೇಲೆ 11 ಮಂದಿಯ ಗುಂಪು ಏಕಾಏಕಿ ನುಗ್ಗಿ ದಾಂದಲೆ ನಡೆಸಿದ್ದಾರೆ. ಮಸಾಜ್‌ ಸೆಂಟರ್‌ ಅನೈತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಮಹಿಳಾ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿದರು, ಸಲೂನ್ ಅನ್ನು ಧ್ವಂಸಗೊಳಿಸಿದರು.ಉಪಕರಣಗಳು, ಮತ್ತು ನೌಕರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಲೂನ್ ಮಾಲಕರಾದ ಸುಧೀರ್ ಶೆಟ್ಟಿ ದೂರು ನೀಡಿದರು.

ದೂರನ ಮೇರೆಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಪರಾಧ ಸಂಖ್ಯೆಃ 06/2025 ರಂತೆ ಠಾಣೆ. ಸೆಕ್ಷನ್ 329(2), 324(5), 74, BNS ನ 351(3), 115(2), 109, 352, ಮತ್ತು 190 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ನಿರ್ದಿಷ್ಟ ಪಾತ್ರಗಳು ಬಗ್ಗೆ , ಇತರರು ಶಾಮೀಲಾಗಿರುವ ಕುರಿತು ಮತ್ತಷ್ಟು ಪರಿಶೀಲನೆ ನಡೆಸಲಾಗುತ್ತಿದೆ.

No Comments

Leave A Comment