ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಉಡುಪಿ ಎತ್ತ ಸಾಗುತ್ತಿದೆ ಕಾನೂನು ಸುವ್ಯವಸ್ಥೆ ಜಾಮೀನಿನ ಮೇಲೆ ಬಿಡುಗಡೆಗೊಂಡ ಆರೋಪಿಗಳಿಂದ ಸಂತ್ರಸ್ತರ ಮನೆಗೆ ನುಗ್ಗಿ ದಾಂಧಲೆ

ಮಲ್ಪೆ ಬೀಚ್ ನಲ್ಲಿ ದಂಪತಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಈಡಾಗಿದ್ದು ಈ ಪ್ರಕರಣದಲ್ಲಿ ಪೊಲೀಸರ ನಡೆ ಸರಿಯಾಗಿ ದೂರುದಾರ ಪರವಾಗಿ ಇಲ್ಲದಿರುವುದೇ ಇಂದಿನ ಘಟನೆಗೆ ಕಾರಣವಾಗಿದೆ.

ಈ ಪ್ರಕರಣದಲ್ಲಿ ಆರೋಪಿತರು ಉಡುಪಿ ಕೋರ್ಟ್ ನ ಮುಖಾಂತರ ಜಾಮೀನು ಪಡೆದು ನಿನ್ನೆ ದಿನ ರಾತ್ರಿ ದೂರು ನೀಡಿದವರ ಮನೆಗೆ ನುಗ್ಗಿ ದಾಂದಲೆ ನಡೆಸಿದ ಘಟನೆ ನಿನ್ನೆ ನಡೆದಿದೆ

ಕೂಡಲೇ ಆರೋಪಿತರ ಜಾಮೀನನ್ನು ರದ್ದುಪಡಿಸಲು ಪರಿಸರ ಕೋರ್ಟಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಆರೋಪಿಗಳ ಜಾಮೀನು ರದ್ದುಗೊಳಿಸುವಂತೆ, ಕೂಡಲೇ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮಲ್ಪೆ ಬೀಚ್‌ ಬಳಿ ಅವತಾರ ಸೀ ವಿಲ್ಲಾದ ಎದುರು ಸಾಗರ್‌ , ಯಶವಂತ, ಚರಣ್‌, ಕಿಶೋರ್, ರಾಜ ಮತ್ತು ಇತರ ಇಬ್ಬರು ಸೇರಿ ದೂರುದಾರರಾದ ಶೇಖರ (59), ಕೊಡವೂರು ಗ್ರಾಮ ಮತ್ತು ಇವರ ಹೆಂಡತಿಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ನೀಡಿದ ದೂರಿನ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿದೆ.

ಒಬ್ಬ ಉದ್ಯಮಿ ಹಾಗೂ ರಾಜಕೀಯ ಪುಡಾರಿಗಳ ಕಪಿಮುಷ್ಠಿಯಲ್ಲಿರುವುದು ಈ ಪ್ರಕರಣದಲ್ಲಿ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ತುತ್ತಾಗಿದೆ. ಜಾಮೀನಿನ ಮೇಲೆ ಹೊರಗಡೆ ಬಂದಿರುವ ಆರೋಪಿಗಳು ಅದೇ ದಿನ ರಾತ್ರಿ ದೂರು ನೀಡಿದವರ ಮನೆಗೆ ನುಗ್ಗುವುದು ಎಂತ ವಿಪರ್ಯಾಸವೇ ಸರಿ

ಪೊಲೀಸ ಇಲಾಖೆ ಮೊದಲು ನೀಡಿದ ದೂರಿನ ಸಂದರ್ಭದಲ್ಲಿ ಆರೋಪಿಗಳಿಗೆ ನೀಡಿದ ರಾಜಾತಿಥ್ಯವೇ  ಈ ಘಟನೆಗೆ ಕಾರಣ ಎನ್ನಲಾಗಿದೆ. ಆರೋಪಿ ಸಾಗರ್ ಅಪರಾಧಿ ಹಿನ್ನೆಲೆಗಳ ವ್ಯಕ್ತಿಯಾಗಿದ್ದು ಇತರ ಮೇಲೆ  ಉಡುಪಿ ನಗರ ಠಾಣೆಯಲ್ಲಿ ಯುವತಿ ಗೆ  ಕಿರುಕುಳ ನೀಡಿ ಆತ್ಮಹತ್ಯೆಗೆ ಕಾರಣರಾದ ಪ್ರಕರಣ ಕೂಡ ದಾಖಲಾಗಿತ್ತು

ಯುವಕನೋರ್ವನಿಗೆ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣ ಕೂಡ ದಾಖಲಾಗಿತ್ತು ಈತನ ವಿರುದ್ಧ ಹಲವಾರು ಆರೋಪಗಳಿದ್ದರೂ ಕೂಡ ಈತನ ಬೆನ್ನೆಲುಬಾಗಿ ನಿಂತಿರುವ ಹೈಫೈ  ಪ್ರೈವೇಟ್ ಕಾರುಗಳನ್ನ ಮಾರುಕಟ್ಟೆಯಲ್ಲಿ ಬಾಡಿಗೆಗಾಗಿ ಪರಿವರ್ತಿಸಿ ನೀಡುತ್ತಿರುವ ಉದ್ಯಮಿ ಓರ್ವನ ಪೊಲೀಸ್ ಇಲಾಖೆಯಲ್ಲಿರುವ ಕೃಪಾಕಟಾಕ್ಷವೇ ಈತನನ್ನು ರಕ್ಷಿಸುತ್ತಿದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ .

ಮಲ್ಪೆ ಪೊಲೀಸ್ ಠಾಣೆ ಒಬ್ಬ ಉದ್ಯಮಿ ಹಾಗೂ ರಾಜಕೀಯ ಪುಡಾರಿಗಳ ಕಪಿಮುಷ್ಠಿಯಲ್ಲಿರುವುದು ಈ ಪ್ರಕರಣದ ನಂತರ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ತುತ್ತಾಗಿದೆ.

 ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಇರುವ ಸಾಗರ್‌ ಇವರು ಚರಣ್‌ ಮತ್ತು ವಿನೀತ್‌ ರವರೊಂದಿಗೆ ಬಂದು, ದೂರುದಾರರು ದೂರು ನೀಡಿರುವುದಕ್ಕೆ ದ್ವೇಷಗೊಂಡು, ದೂರುದಾರರನ್ನು ಕೊಲ್ಲುವ ಉದ್ದೇಶದಿಂದ ಮತ್ತು ಬೆದರಿಕೆಯನ್ನು ಒಡ್ಡುವ ಉದ್ದೇಶದಿಂದ ದೂರುದಾರರ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿ, ವಿಲ್ಲಾಗೆ ಅಳವಡಿಸಿದ ನೀರಿನ ಟ್ಯಾಪ್‌ ನ್ನು ಮುರಿದು ರೂಪಾಯಿ 5,000/- ನಷ್ಟವನ್ನುಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ   ಪ್ರಕರಣ ದಾಖಲಾಗಿರುತ್ತದೆ.”

kiniudupi@rediffmail.com

No Comments

Leave A Comment