ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮಕರಸ೦ಕ್ರಾ೦ತಿಯ ದಿನವಾದ ಇ೦ದು ಧರ್ನುಮಾಸದ ಭಜನಾ ಕಾರ್ಯಕ್ರಮ ಸ೦ಪನ್ನ…
ಉಡುಪಿಯ ರಥಬೀದಿಯಲ್ಲಿ ಧರ್ನುಮಾಸದ ಸ೦ಕ್ರಾ೦ತಿ ಯಿ೦ದ ಆರ೦ಭಗೊ೦ಡ ಭಜನಾ ಕಾರ್ಯಕ್ರಮವು ಮಕರಸ೦ಕ್ರಾ೦ತಿಯ ದಿನವಾದ ಇ೦ದು ಮ೦ಗಳವಾರದ೦ದು ಅದ್ದೂರಿಯಿ೦ದ ಸ೦ಪನ್ನಗೊ೦ಡಿತು.ಹಲವು ಮ೦ದಿ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.