ಉಡುಪಿ ನಗರದ ಕೆ.ಎ೦.ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಮ೦ದಿರ-ಮಠದಲ್ಲಿ ಜುಲಾಯಿ 10ರ ಗುರುವಾರದ೦ದು ಶ್ರೀಗುರು ಪೂರ್ಣಿಮಾ ಮಹೋತ್ಸವವು ಜರಗಲಿದೆ...

ಕರ್ನಾಟಕ ಸರಕಾರದ ಏಕೈಕ ಕ್ಯಾಬಿನೆಟ್ ಸಚಿವೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯವರ ಬಗ್ಗೆ ಕೀಳಾಗಿ,ಕೆಟ್ಟದಾಗಿ ಸದನದಲ್ಲಿ ಮಾತಾಡಿದ ಸಿ.ಟಿ ರವಿಗೆ ಕಠಿಣ ಶಿಕ್ಷೆಯಾಗಲಿ- ಸುರೇಶ್ ಶೆಟ್ಟಿ ಬನ್ನಂಜೆ ಆಗ್ರಹ

ಉಡುಪಿ: ನಮ್ಮ ದೇಶದ ಬಿಜೆಪಿ ನಾಯಕರ ಬಾಯಿಯಲ್ಲಿ ಮಾತೆತ್ತಿದರೆ ಹಿಂದುತ್ವ.ಆದರೆ ಇವರ ನಡವಳಿಕೆ ಹಾಗೂ ಇವರ ಆಡುವ ಮಾತುಗಳು ಅದಕ್ಕೆ ತದ್ವಿರುದ್ಧ ಇಡೀ ನಮ್ಮ ಕರ್ನಾಟಕ ರಾಜ್ಯಕ್ಕೆ ರಾಜ್ಯದ ಗೃಹಿಣಿಯರಿಗೆ ಗೃಹಲಕ್ಷ್ಮಿಯ ಹಣವನ್ನು ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದಂತಹ ನಮ್ಮ ನೆಚ್ಚಿನ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇವರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸಿ.ಟಿ ರವಿ ಇವರನ್ನು ಸಮರ್ಥಿಸಿಕೊಳ್ಳುತ್ತಿರುವ ಈ ಬಿಜೆಪಿ ನಾಯಕರ ಕೊಳಕು ಬುದ್ಧಿ ಏನೆಂಬುದನ್ನು ನಮ್ಮ ರಾಜ್ಯದ ಜನರು ತಿಳಿದುಕೊಳ್ಳಬೇಕಾಗಿದೆ.

ಒಬ್ಬ ಮಹಿಳೆಯ ಬಗ್ಗೆ ಈ ರೀತಿ ಹೀನಾಯವಾಗಿ ಮಾತನಾಡಿದ ಸಿ.ಟಿ ರವಿಯನ್ನು ಸಮರ್ಥಿಸಿಕೊಳ್ಳುತ್ತಿರುವ ಈ ಬಿಜೆಪಿ ನಾಯಕರಿಗೆ ನಮ್ಮ ರಾಜ್ಯದ ಜನಸಾಮಾನ್ಯರು ಒಟ್ಟಾಗಿ ನಿಂತು ಇವರಿಗೆ ತಕ್ಕ ಪಾಠವನ್ನು ಕಲಿಸಬೇಕಾಗಿದೆ.

ಇಂತಹ ದುಷ್ಟ ಶಕ್ತಿಗಳಿಂದ ನಮ್ಮ ಸಮಾಜ ಹಾಳಾಗುತ್ತಿರುವುದಕ್ಕೆ ಇವರೇ ಕಾರಣ. ಈ ಕೂಡಲೇ ಸಿ.ಟಿ ರವಿ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕು .ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕ್ರಮ ಕೈಗೊಳ್ಳಬೇಕಾಗಿ ಉಡುಪಿ ಬ್ಲಾಕ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆಯವರು ಆಗ್ರಹಿಸಿದ್ದಾರೆ.

kiniudupi@rediffmail.com

No Comments

Leave A Comment