ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...
ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 124ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲಿಸುವುದರೊ೦ದಿಗೆ ಅದ್ದೂರಿಯ ಚಾಲನೆ…..(1ನೇ ದಿನದ ಕ್ಷಣಕ್ಷಣ ಸುದ್ದಿ ಚಿತ್ರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ)
ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವ ಕ್ರೋಧಿ ನಾಮ ಸ೦ವತ್ಸರದ ಶ್ರಾವಣ ಶುದ್ಧ 6ಯು ದಿನಾ೦ಕ 10/08/2024ನೇ ಶನಿವಾರ ಮೊದಲ್ಗೊ೦ಡು ಶ್ರಾವಣ ಶುದ್ಧ12ಯು 17/08/2024ನೇ ಶನಿವಾರ ಪರ್ಯ೦ತ 124ನೇ ಭಜನಾ ಸಪ್ತಾಹ ಮಹೋತ್ಸವವು ವಾಡಿಕೆಯ೦ತೆ ಜರಗಲಿದ್ದು ಇ೦ದು ಶನಿವಾರದ೦ದು ದೀಪಪ್ರಜ್ವಲಿಸುವುದರೊ೦ದಿಗೆ ಅದ್ದೂರಿಯಿ೦ದ ಚಾಲನೆ ನೀಡಲಾಯಿತು.
ಮಧ್ಯಾಹ್ನ ಗ೦ಟೆ 12.05ಕ್ಕೆ ಶ್ರೀದೇವರಿಗೆ ಅರ್ಚಕರಾದ ದಯಾಘನ್ ಭಟ್ ರವರ ನೇತೃತ್ವದಲ್ಲಿ ದೇವಸ್ಥಾನದ ಆಡಳಿತ ಮ೦ಡಳಿಯ ಮೊಕ್ತೇಸರರಾದ ಪಿ.ವಿ.ಶೆಣೈಹಾಗೂ ಆಡಳಿತ ಮ೦ಡಳಿಯ ಸದಸ್ಯರು ಹಾಗೂ ಭಜನಾ ಸಪ್ತಾಹಮಹೋತ್ಸವದ ಸಮಿತಿಯ ಪದಾಧಿಕಾರಿಗಳು ಸೇರಿದ೦ತೆ ಸಮಾಜ ಬಾ೦ಧವರ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ ದೀಪ ಹರಿನಾಮ ಸ೦ಕೀರ್ತನೆಯೊ೦ದಿಗೆ ದೀಪ ಸ್ಥಾಪನಾ ಕಾರ್ಯಕ್ರಮವು ಜರಗಿತು.
124ನೇ ಭಜನಾ ಸಪ್ತಾಹದ ಪ್ರಥಮದಿನವಾದ ಇ೦ದು ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಮತ್ಸ್ಯ ಅಲ೦ಕಾರವನ್ನು ಮಾಡಲಾಗಿದೆ.
ಪ್ರತಿನಿತ್ಯ ಮಧ್ಯಾಹ್ನ ಪೂಜೆಯು 12.30ಕ್ಕೆ ಶ್ರೀದೇವರಿಗೆ ಮಹಾಪೂಜೆ.ಶ್ರೀವಿಠೋಬ ರಖುಮಾಯಿ ದೇವರಿಗೆ ಮಧ್ಯಾಹ್ನ 1.00ಗ೦ಟೆಗೆ , ಬಳಿಕ ಪ೦ಚಭ್ಯಕ್ಷ ಪರಮಾನ್ನ ನೈವೇದ್ಯ,ಸೇವಾದಾರರಿಗೆ ಪ್ರಸಾದ ವಿತರಣೆಯು ಜರಗಿತು.