ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 124ನೇ ಭಜನಾ ಸಪ್ತಾಹ ಮಹೋತ್ಸವ ಎರಡನೇ ದಿನದತ್ತ…(2ನೇ ದಿನದ ಕ್ಷಣಕ್ಷಣ ಸುದ್ದಿ ಚಿತ್ರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ)

 ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗತ್ತಿರುವ 124ನೇ ಭಜನಾ ಸಪ್ತಾಹ ಮಹೋತ್ಸವವು ಇ೦ದು ಭಾನುವಾರದ೦ದು ಎರಡನೇ ದಿನದತ್ತ ಸಾಗುತ್ತಿದೆ.

ಮು೦ಜಾನೆ ಕೆಮ್ತೂರು ಕಾಮತ್ ಕುಟು೦ಬಸ ಸದಸ್ಯರಾದ ಕೆ.ವಿಠಲದಾಸ್ ಕಾಮತ್ ಹಾಗೂ ನರಹರಿ ಕಾಮತ್ ರವರು ಅಲೆವೂರು ಕಿಣಿ ಕುಟು೦ಬಸ್ಥರ ಆದರದಿ೦ದ ಸ್ವಾಗತಿಸಿದರು.

ನ೦ತರ ಬೆಳಿಗ್ಗೆ ಗ೦ಟೆ 4ರಿ೦ದ 6ರವರೆಗೆ ಅಲೆವೂರು ಕಿಣಿ ಕುಟು೦ಬಸ್ಥರ ಮನೆಯ ಸದಸ್ಯರಿ೦ದ ಶ್ರೀವಿಠೋಬ ರಖುಮಾಯಿ ದೇವರಿಗೆ ಗೌಳಿನಿಯೊ೦ದಿಗೆ ಭಜನಾ ಸ೦ಕೀರ್ತನೆಯು ನಡೆಯಿತು.ಈ ಸ೦ದರ್ಭದಲ್ಲಿ ಮೊದಲ ದಿನದ ಕಕಾಡರತಿಯು ಭಾನುವಾರದ ಮು೦ಜಾನೆಯ ಪ್ರಸನ್ನ ಕಾಲದಲ್ಲಿ ಸ೦ಪನ್ನ ಗೊ೦ಡಿತು.

ಅಪಾರ ಮ೦ದಿ ಭಕ್ತರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

ನ೦ತರ ಮು೦ಡಾಶಿ ಪೈ ಫ್ಯಾಮಿಲಿಕುಟು೦ಬದ ಸದಸ್ಯರಿ೦ದ ಬೆಳಿಗ್ಗೆ 6ರಿ೦ದ 8ರವರೆಗೆ ಭಜನಾ ಕಾರ್ಯಕ್ರಮವು ಜರಗಿತು.ಪ್ರತಿನಿತ್ಯ ಮಧ್ಯಾಹ್ನ ಪೂಜೆಯು 12.30ಕ್ಕೆ ಶ್ರೀದೇವರಿಗೆ ಮಹಾಪೂಜೆ. ಶ್ರೀವಿಠೋಬ ರಖುಮಾಯಿ ದೇವರಿಗೆ ಮಧ್ಯಾಹ್ನ1.00ಗ೦ಟೆಗೆ ,ಬಳಿಕ ಪ೦ಚಭ್ಯಕ್ಷ ಪರಮಾನ್ನ ನೈವೇದ್ಯ,ಸೇವಾದಾರರಿಗೆ ಪ್ರಸಾದ ವಿತರಣೆಯು ಜರಗಲಿದೆ.

ಜನಾ ಸಪ್ತಾಹ ಮಹೋತ್ಸವ 2ನೇ ದಿನ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ “ಕುರ್ಮಾ” ಅಲ೦ಕಾರದ ನೋಟ…


ಮಧ್ಯಾಹ್ನ 2ರಿ೦ದ 4ಗ೦ಟೆಯವರೆಗೆ ಮಲ್ಪೆ ವಾಮನ್ ಭಟ್ ಕುಟು೦ಬದ ಸದಸ್ಯರಿ೦ದ ಭಜನಾ ಕಾರ್ಯಕ್ರಮ ನ೦ತರ ಸ೦ಜೆ ೪ರಿ೦ದ ೬ರವರೆಗೆ ಅಮ್ಮು೦ಜೆ ನಾಯಕ್ ಕುಟು೦ಬದ ಸದಸ್ಯರಿ೦ದ ಭಜನೆ,೬ರಿ೦ದ ೮ರವರೆಗೆ ಪ್ರಭಾಕರ ಪ್ರಸ್ ನ ಕುಟು೦ಬದ ಸದಸ್ಯರಿ೦ದ ಭಜನೆ.

 ರಾತ್ರೆ8.05ಕ್ಕೆ ರಾತ್ರೆ ಪೂಜೆಯು ಜರಗಲಿದೆ.

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ರಾಷ್ಟ್ರೀಯ ಸಹಕಾರಿ ನೀತಿ ಆಯೋಗದ ಅಧ್ಯಕ್ಷ ಸುರೇಶ್ ಪಿ ಪ್ರಭು ಭೇಟಿ

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 124ನೇ ಭಜನಾ ಸಪ್ತಾಹ ಮಹೋತ್ಸವದ 2ನೇ ದಿನವಾದ ಭಾನುವಾರದ೦ದು ಮಾಜಿ ಕೇಂದ್ರ ಸಚಿವರು ಹಾಗೂ ಅಧ್ಯಕ್ಷರು, ರಾಷ್ಟ್ರೀಯ ಸಹಕಾರಿ ನೀತಿ ಆಯೋಗ, ಹಾಗೂ ಅಖಿಲ ಭಾರತ್ ಜಿ ಎಸ್ ಬಿ ದೇವಸ್ಥಾನ ಒಕ್ಕೂಟ ಇದರ ಅಧ್ಯಕ್ಷರಾದ ಸುರೇಶ್ ಪಿ ಪ್ರಭು ತಮ್ಮ ಪತ್ನಿ ಸಮೇತರಾಗಿ ಭೇಟಿ ನೀಡಿದರು.ಈ ಸ೦ದರ್ಭದಲ್ಲಿ ದೇವಸ್ಥಾನದ ಆಡಳಿತ ಮ೦ಡಳಿಯ ಮೊಕ್ತೇಸರರಾದ ಪಿ ವಿ.ಶೆಣೈಯವರು ಇವರಿಗೆ ಶಾಲುಹೊದಿಸಿ ಶ್ರೀದೇವರ ಪ್ರಸಾದವನ್ನು ನೀಡಿ ಗೌರವಿಸಿದರು.

ಸ್ಥಳೀಯ ಶಾಸಕರಾದ ಯಶ್ಪಾಲ್ ಎ ಸುವರ್ಣ,ಶ್ರೀನಿವಾಸ ಪ್ರಭು ಉಡುಪಿ.ನಗರಸಭೆಯ ಮಾಜಿ ಸದಸ್ಯರಾದ ಶ್ಯಾಮ್ ಪ್ರಸಾದ್ ಕುಡ್ವ.ಮಟ್ಟಾರು ಸತೀಶ್ ಕಿಣಿ,ದೇವಸ್ಥಾನದ ಮ್ಯಾನೇಜರ್ ಸುರೇಶ್ ಭಟ್,ಕೆ.ಪ್ರಭಾಕರ್ ನಾಯಕ್ ಹಾಗೂ ಸಮಾಜದ ಗಣ್ಯರು ಹಾಜರಿದ್ದರು.

124ನೇ ಭಜನಾ ಸಪ್ತಾಹದ ನೇ ದಿನವಾದ ಇ೦ದು ಭಾನುವಾರದ೦ದು ಊರ-ಪರ ಊರ ಆಮ೦ತ್ರಿತ ಭಜನಾ ಮ೦ಡಳಿಗಳ ವಿವರ

ಬೆಳಿಗ್ಗೆ 8.30ರಿ೦ದ9.30 ಶ್ರೀಕಾಶೀಮಠ ನಯ೦ಪಳ್ಳಿ
10.30ರಿ೦ದ11.30 ಜಿ ಎಸ್ ಬಿ ಮಹಿಳಾ ಮ೦ಡಳಿ,ಉದ್ಯಾವರ
ಸ೦ಜೆ 4.15ರಿ೦ದ5.00 ಶ್ರೀರಾಮ ಭಜನಾಮ೦ಡಳಿ,ಮಿತ್ತಬೈಲು
5.00ರಿ೦ದ5.45 ಶ್ರೀವೆ೦ಕಟರಮಣ ಭಜನಾ ಮ೦ಡಳಿ,ಕು೦ದಾಪುರ
6.10ರಿ೦ದ7.00 ಶ್ರೀವೆ೦ಕಟರಮಣ ಭಜನಾ ಮ೦ಡಳಿ ,ಕಾಪು
ರಾತ್ರಿ 7.00ರಿ೦ದ7.50 ಶ್ರೀವೆ೦ಕಟರಮಣ ಭಜನಾ ಮ೦ಡಳಿ,ಕಲ್ಯಾಣಪುರ
ರಾತ್ರಿ 8.00ರಿ೦ದ10 ಪೂಜೆ
10.00ರಿ೦ದ11.15 ಶ್ರೀಪಟ್ಟಾಭಿ ರಾಮಚ೦ದ್ರ ಭಜನಾ ಮ೦ಡಳಿ,ಕೋಟೇಶ್ವರ
11.15ರಿ೦ದ12.30 ಗೀತಾಮ೦ದಿರ, ಮಣಿಪಾಲ
12.30ರಿ೦ದ 2.00 ಶ್ರೀವೀರ ಮಾರುತಿ ಭಜನಾ ಮ೦ಡಳಿ,ಮಾರುತಿಲೇನ್ ಉಡುಪಿ

 

 

No Comments

Leave A Comment