ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.
ವಿಜಯ್ ಮಲ್ಯಗೆ ಬಿಗ್ ಶಾಕ್ ನೀಡಿದ ಸೆಬಿ, ಸೆಕ್ಯುರಿಟೀಸ್ ಮಾರುಕಟ್ಟೆಯಿಂದ 3 ವರ್ಷಗಳ ಕಾಲ ನಿಷೇಧ
ಮಾಜಿ ಮದ್ಯದ ದೊರೆ ವಿಜಯ್ ಮಲ್ಯಗೆ ಸೆಬಿ ಬಿಗ್ ಶಾಕ್ ನೀಡಿದೆ. ವಿಜಯ್ ಮಲ್ಯ ಯುಬಿಎಸ್ ಎಜಿ ಹೊಂದಿರುವ ದೇಶದ ಬೇರೆ ಬೇರೆ ಬ್ಯಾಂಕ್ ಖಾತೆಗಳ ಮೂಲಕ ಭಾರತೀಯ ಸೆಕ್ಯುರಿಟೀಸ್ ಮಾರುಕಟ್ಟೆಗೆ ಹಣವನ್ನು ರೂಟಿಂಗ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಮೂರು ವರ್ಷಗಳ ಕಾಲ ಸೆಬಿ, ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ನಿರ್ಬಂಧಿಸಿದೆ. ಮೂರು ವರ್ಷಗಳವರೆಗೆ ಸೆಬಿ ಪಟ್ಟಿ ಮಾಡಿರುವ ಸಂಸ್ಥೆಯೊಂದಿಗೆ ಯಾವುದೇ ವ್ಯವಹಾರ ನಡೆಸಬಾರದು ಎಂದು ಹೇಳಿದೆ.
ಈಗಾಗಲೇ ಕಿಂಗ್‌ಫಿಷರ್ ಏರ್‌ಲೈನ್ಸ್ ವಂಚನೆ ಆರೋಪವನ್ನು ಹೊತ್ತಿರುವ ಅವರು ಭಾರತದಿಂದ ಪರಾರಿಯಾಗಿ ಯುಕೆಯಲ್ಲಿ ನೆಲೆಸಿದ್ದಾರೆ. ಅವರನ್ನು ಯುಕೆಯಿಂದ ಗಡಿಪಾರು ಮಾಡುವಂತೆ ಭಾರತ ಸರ್ಕಾರ ಯುಕೆ ಸರ್ಕಾರಕ್ಕೆ ಮನವಿ ಮಾಡಿದೆ. 2016ರಿಂದ ಮಲ್ಯ ಅವರು ಯುಕೆಯಲ್ಲಿ ನೆಲೆಸಿದ್ದಾರೆ. ಇದೀಗ ಇದರ ಜತೆಗೆ ಈ ಆರೋಪವನ್ನು ಕೂಡ ಮಲ್ಯ ಹೊತ್ತುಕೊಂಡಿದ್ದಾರೆ.
ಜನವರಿ 2006 ರಿಂದ ಮಾರ್ಚ್ 2008 ರವರೆಗೆ ಸೆಬಿ ನಡೆಸಿದ ತನಿಖೆಯಲ್ಲಿ ಮಲ್ಯ ಅವರು ಮ್ಯಾಟರ್‌ಹಾರ್ನ್ ವೆಂಚರ್ಸ್, ವಿದೇಶಿ ಸಾಂಸ್ಥಿಕ ಹೂಡಿಕೆದಾರ (ಎಫ್‌ಐಐ)ರಿಗೆ ತಮ್ಮ ಕಂಪನಿಗಳಾದ ಹರ್ಬರ್ಟ್‌ಸನ್ಸ್ ಲಿಮಿಟೆಡ್ ಮತ್ತು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್‌ಎಲ್) ಗಳ ಷೇರುಗಳನ್ನು ರಹಸ್ಯವಾಗಿ ವ್ಯಾಪಾರ ಮಾಡಲು ಮುಂದಾಗಿದ್ದರು ಎಂದು ಸೆಬಿ ಹೇಳಿದೆ.
UBS AG ಯ ವಿವಿಧ ಖಾತೆಗಳ ಮೂಲಕ ಮ್ಯಾಟರ್‌ಹಾರ್ನ್ ವೆಂಚರ್ಸ್ ಅನ್ನು ಬಳಸಿಕೊಂಡು ಭಾರತೀಯ ಸೆಕ್ಯುರಿಟೀಸ್ ಮಾರುಕಟ್ಟೆಗೆ ಹಣವನ್ನು ರವಾನಿಸಿದರು. ಇದಕ್ಕಾಗಿ ತಮ್ಮ ಹೆಸರನ್ನು ಮರೆಮಾಚಿ ಬೇರೆ ಬೇರೆ ಖಾತೆಗಳಿಂದ ಹಣವನ್ನು ರವಾನಿಸಿದ್ದಾರೆ ಎಂದು ಹೇಳಿದೆ. ಮ್ಯಾಟರ್‌ಹಾರ್ನ್ ವೆಂಚರ್ಸ್ ಕಂಪನಿಯನ್ನು ಸಾರ್ವಜನಿಕ ಷೇರುದಾರ ಎಂದು ತಪ್ಪಾಗಿ ಗುರುತಿಸಲಾಗಿದೆ. ಆದರೂ ಅದರ 9.98 ಶೇಕಡಾ ಷೇರುಗಳು ಪ್ರವರ್ತಕ ವರ್ಗಕ್ಕೆ ಸೇರಿದೆ ಎಂಬುದನ್ನು ಸೆಬಿ ತನಿಖೆಯಲ್ಲಿ ಹೇಳಿದೆ.
ಸೆಬಿ ತನ್ನ 37 ಪುಟಗಳ ತನಿಖಾ ವರದಿಯಲ್ಲಿ ಈ ಬಗ್ಗೆ ತಿಳಿಸಲಾಗಿದೆ. ಇದೀಗ ಸೆಬಿ ಮುಖ್ಯ ಜನರಲ್ ಮ್ಯಾನೇಜರ್ ಅನಿತಾ ಅನೂಪ್ ಅವರು ಮಲ್ಯ ಅವರಿಗೆ ನೋಟಿಸ್ ನೀಡಿದ್ದಾರೆ. ಈ ನೋಟಿಸ್ನಲ್ಲಿ ತಮ್ಮ ವಹಿವಾಟುಗಳು / ನಿಧಿಯ ಹರಿವಿನ ಅಕ್ರಮವಾಗಿದ್ದು, ಷೇರುಗಳಲ್ಲಿ ಪರೋಕ್ಷವಾಗಿ ವ್ಯಾಪಾರ ಮಾಡುವ ಯೋಜನೆ ಹಾಕಿದ್ದು , ನಮ್ಮ ಮಾನದಂಡಗಳನ್ನು ಧಿಕ್ಕರಿಸಿ ಭಾರತೀಯ ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ಅಕ್ರಮವಾಗಿ ವ್ಯಾಪಾರ ಮಾಡಲು ಮುಂದಾಗಿದ್ದೀರಾ. ಈ ಕೃತ್ಯಗಳು ಮೋಸ ಮತ್ತು ವಂಚನೆ ಮಾತ್ರವಲ್ಲದೆ ಸೆಕ್ಯುರಿಟೀಸ್ ಮಾರುಕಟ್ಟೆಯ ಸಮಗ್ರತೆಗೆ ಬೆದರಿಕೆ ಎಂದು ಹೇಳಿದ್ದಾರೆ.
ಇದಕ್ಕಾಗಿ ಮಲ್ಯ ಅವರನ್ನು ಸೆಬಿಯು ಸೆಕ್ಯುರಿಟೀಸ್ ಮಾರುಕಟ್ಟೆಯನ್ನು ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ ಹಾಗೂ ಸೆಕ್ಯುರಿಟಿಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಖರೀದಿಸುವುದು, ಮಾರಾಟ ಮಾಡುವುದು ಅಥವಾ ಇತರ ರೀತಿಯಲ್ಲಿ ವ್ಯವಹಾರ ನಡೆಸುವುದು ಹಾಗೂ ಯಾವುದೇ ರೀತಿಯಲ್ಲಿ ಸೆಕ್ಯುರಿಟೀಸ್ ಮಾರುಕಟ್ಟೆಗೆ ಪ್ರವೇಶ ನಡೆಸದಂತೆ ನಿರ್ಬಂಧಿಸಲಾಗಿದೆ. ಇದರ ಜತೆಗೆ ಮಲ್ಯ ಅವರನ್ನು ತನಿಖೆ ಒಳಪಡಿಸುವಂತೆ ಆದೇಶ ನೀಡಲಾಗಿದೆ.