ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೊದಲ ಸೋಲು

ಫ್ರಾನ್ಸ್​ ರಾಜಧಾನಿ ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಮೊದಲ ದಿನವೇ ಭಾರತೀಯ ಸ್ಪರ್ಧಿಗಳಿಂದ ನೀರಸ ಪ್ರದರ್ಶನ ಮೂಡಿಬಂದಿದೆ. ಶನಿವಾರ ನಡೆದ 10 ಮೀಟರ್ ಏರ್ ರೈಫಲ್ ಶೂಟಿಂಗ್​ ಸ್ಪರ್ಧೆಯಲ್ಲಿ ಭಾರತದ ನಾಲ್ವರು ಶೂಟರ್​ಗಳು ಭಾಗವಹಿಸಿದ್ದರು. ಆದರೆ ಮಿಶ್ರ ಏರ್​ ರೈಫಲ್​ ವಿಭಾಗದಲ್ಲಿ ಪದಕದ ಸುತ್ತಿಗೆ ಪ್ರವೇಶಿಸುವಲ್ಲಿ ಭಾರತೀಯ ಶೂಟರ್​ಗಳು ವಿಫಲರಾಗಿದ್ದಾರೆ.

  • 10 ಮೀಟರ್ ಏರ್ ರೈಫಲ್ (ಮಿಶ್ರ) ಅರ್ಹತಾ ಸುತ್ತಿನಲ್ಲಿ ಸಂದೀಪ್ ಸಿಂಗ್, ಅರ್ಜುನ್ ಬಬೌತಾ, ರಮಿತಾ ಜಿಂದಾಲ್ ಮತ್ತು ಎಲವೆನಿಲ್ ವಲರಿವನ್ ಸ್ಪರ್ಧಿಸಿದ್ದರು.

  • 10 ಮೀಟರ್ ಏರ್ ರೈಫಲ್ (ಮಿಶ್ರ) ಸ್ಪರ್ಧೆಯಲ್ಲಿ ರಮಿತಾ ಮತ್ತು ಅರ್ಜುನ್ 6ನೇ ಸ್ಥಾನ ಪಡೆದರೆ, ಎಲವೆನಿಲ್ ಮತ್ತು ಸಂದೀಪ್ 12ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

  • 10 ಮೀಟರ್ ಏರ್ ರೈಫಲ್ (ಮಿಶ್ರ) ಶೂಟಿಂಗ್ ಸ್ಪರ್ಧೆಯಲ್ಲಿ ಟಾಪ್-4 ತಂಡಗಳು ಮಾತ್ರ ಪದಕ ಸುತ್ತಿಗೆ ಅರ್ಹತೆ ಪಡೆಯುತ್ತವೆ. ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್​ನ 10 ಮೀಟರ್ ಏರ್ ರೈಫಲ್ (ಮಿಶ್ರ) ಸ್ಪರ್ಧೆಯಲ್ಲಿ ಭಾರತ ಪದಕ ಗೆಲ್ಲುವ ಕನಸು ಕಮರಿದೆ.

  • ಚೀನಾ ಮತ್ತು ಕೊರಿಯಾ ದೇಶಗಳು 10 ಮೀಟರ್ ಏರ್ ರೈಫಲ್ (ಮಿಶ್ರ) ಶೂಟಿಂಗ್​ ಸ್ಪರ್ಧೆಯಲ್ಲಿ ಚಿನ್ನದ ಪದಕ ಸುತ್ತಿನಲ್ಲಿವೆ. ಹಾಗೆಯೇ ಕಜಕಿಸ್ತಾನ್ ಮತ್ತು ಜರ್ಮನಿ ಕಂಚಿನ ಪದಕ ಸುತ್ತಿನಲ್ಲಿವೆ.

ಭಾರತೀಯ ಶೂಟರ್​ಗಳು ಪಡೆದ ಅಂಕಗಳು:

  • ➡️ರಮಿತಾ ಮತ್ತು ಅರ್ಜುನ್- 6ನೇ ಸ್ಥಾನ (628.7 ಅಂಕಗಳು)

  • ➡️ಎಲವೆನಿಲ್ ಮತ್ತು ಸಂದೀಪ್- 12ನೇ ಸ್ಥಾನ (626.3 ಅಂಕಗಳು)

ಒಂದು ಅಂಕದಿಂದ ಕೈ ತಪ್ಪಿದ ಅವಕಾಶ:

ಶೂಟಿಂಗ್​ನಲ್ಲಿ ಕಂಚಿನ ಪದಕದ ಸ್ಪರ್ಧೆಗೆ ಅರ್ಹತೆ ಪಡೆಯಲು ಭಾರತೀಯರು ಕೇವಲ 1 ಅಂಕದಿಂದ ವಿಫಲರಾಗಿದ್ದಾರೆ. ಅಂದರೆ 4ನೇ ಸ್ಥಾನ ಪಡೆದಿರುವ ಜರ್ಮನಿಯು ಶೂಟರ್​ಗಳು ಒಟ್ಟು 629.7 ಅಂಕಗಳನ್ನು ಕಲೆಹಾಕಿ ಅರ್ಹತೆ ಪಡೆದುಕೊಂಡಿದ್ದಾರೆ. ಇದೇ ವೇಳೆ 6ನೇ ಸ್ಥಾನ ಪಡೆದ ರಮಿತಾ ಮತ್ತು ಅರ್ಜುನ್ 628.7 ಅಂಕಗಳನ್ನು ಕಲೆಹಾಕಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.

ರೋಯಿಂಗ್​ನಲ್ಲಿ ಮಿಂಚಿಂಗ್:

ಪುರುಷರ ಸಿಂಗಲ್ ಸ್ಕಲ್ಸ್ ಹೀಟ್ಸ್ ರೋಯಿಂಗ್ ಸ್ಪರ್ಧೆಯಲ್ಲಿ ಭಾರತದ ಬಲರಾಜ್ ಪನ್ವಾರ್ ಉತ್ತಮ ಪ್ರದರ್ಶನ ನೀಡಿದ್ದಾರೆ.  ಒಟ್ಟು 3 ನಿಮಿಷ 31 ಸೆಕೆಂಡುಗಳು ಮತ್ತು 24 ಮಿಲಿ ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಬಲರಾಜ್ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ನಾಳೆ ನಡೆಯಲಿರುವ ರೆಪೆಚೇಜ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದಾರೆ.

kiniudupi@rediffmail.com

No Comments

Leave A Comment