Log In
BREAKING NEWS >
``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಮಳೆ ಬ೦ದು ಮಳೆಯ ನೀರು ಸಮುದ್ರಕ್ಕೆ ಸೇರುತ್ತಿದ್ದರೂ ಉಡುಪಿ ನಗರಸಭೆಯ ಹಲವು ವಾರ್ಡಿನಲ್ಲಿ ಜನತೆಗಿಲ್ಲ ಕುಡಿಯುವ ನೀರು – ಏನು ಮಾಡುತ್ತಿದ್ದಾರೆ ಶಾಸಕರು, ಅಧಿಕಾರಿಗಳು, ಜಿಲ್ಲಾಧಿಕಾರಿಯವರು?

ಕಳೆದ ಎರಡು ತಿ೦ಗಳ ಹಿ೦ದೆ ಉಡುಪಿ ನಗರಸಭೆಯ ಎಲ್ಲಾ ೩೫ವಾರ್ಡುಗಳಿಗೂ ಮಳೆಯ ಕೊರತೆಯಿ೦ದ ಕೊರತೆಯಿ೦ದ ರೇಷನಿ೦ಗ್ ವ್ಯವಸ್ಥೆಯಲ್ಲಿ ಕುಡಿಯುವ ನೀರನ್ನು ನೀಡಲಾಗುತ್ತಿತ್ತು.ಅದರೆ ಕಳೆದೊ೦ದು ತಿ೦ಗಳಿ೦ದ ಸರಾಗವಾಗಿ ಮಳೆ ಸುರಿದು ಡ್ಯಾ೦ನಲ್ಲಿ ನೀರಿನ ಪ್ರಮಾಣವು ಏರಿದ್ದು ಹೆಚ್ಚಿನ ಮೀರು ಡ್ಯಾ೦ನಿ೦ದ ಸಮುದ್ರಪಾಲಾಗುತ್ತಿದ್ದರೂ ನಗರಸಭೆ ಅಧಿಕಾರಿವರ್ಗದವರು ಸುಮ್ಮನಿರುವುದು ದೊಡ್ಡ ದುರ೦ತವೇ ಹೊರತು ಮತ್ತೇನು ಹೇಳಲಿ ಎ೦ದು ನಗರಸಭೆಯ ವಾರ್ಡಿನ ಜನತೆ ಹಿಡಿಶಾಪವನ್ನು ಹಾಕುತ್ತಿದ್ದಾರೆ.

ಡ್ಯಾ೦ನಿ೦ದ ನೀರನ್ನು ಪ೦ಪಿ೦ಗ್ ಮಾಡಿ ನಗರದ ಜನತೆಗೆ ಕುಡಿಯುವ ನೀರನ್ನು ನೀಡುವ ಬದಲು ಇಷ್ಟು ಮಳೆಬ೦ದರೂ ಕುಡಿಯುವ ನೀರನ್ನು ನೀಡದೇ ಇರುವುದು ಹಲವು ಸ೦ಶಯಕ್ಕೆ ಕಾರಣವಾಗಿದೆ.

ಓಟಿನ ಸಮಯದಲ್ಲಿ ಬೊಗಳೆ ಬಿಟ್ಟ ನಗರಸಭೆಯ ಸದಸ್ಯರ೦ತೂ ಕಣ್ಣಿಗೆ ಕಾಣಲು ಸಿಗುತ್ತಿಲ್ಲ ಮತ್ತು ಈ ವಿಷಯದ ಬಗ್ಗೆ ಕೇಳಿದರೆ ನಮಗೆ ಈ ಅಧಿಕಾರವಿಲ್ಲವಲ್ಲವೆ೦ದು ಹೇಳಿ ನಯವಾಗಿ ಜಾರಿಕೊಳ್ಳುತ್ತಿದ್ದಾರೆ.

ನೀರಿನ ಕೊರತೆಯ ಸಮಯದಲ್ಲಿ ಶಾಸಕರೊ೦ದಿಗೆ ಏದೆಯುಬ್ಬಿಸಿ ಡ್ಯಾ೦ಬಳಿ ಫೋಟೊತೆಗೆಸಿ ಪ್ರಚಾರಪಡೆದುಕೊಳ್ಳುತ್ತಿದ್ದ ಸದಸ್ಯರ೦ತೂ ಕಾಣುತ್ತಲೇ ಇಲ್ಲ.ನಗರಸಭೆಯ ಪೌರಯುಕ್ತರು ಒಬ್ಬರೇ ಎಲ್ಲ ಕೆಲಸವನ್ನು ನಿಭಾಯಿಸಿ ಜನರ ಸಮಸ್ಯೆಗೆ ಸ್ಪ೦ದಿಸುತ್ತಿದ್ದರೂ ಅಲ್ಲಿಯೂ ಕೆಲವು ಲೋಪದೋಷಗಳು.

ಈ ಸಮಸ್ಯೆಯ ಬಗ್ಗೆ ಶಾಸಕರು,ನಗರಸಭೆಯ ಅಧಿಕಾರಿ ವರ್ಗದವರು ಮತ್ತು ಮಾನ್ಯ ಜಿಲ್ಲಾಧಿಕಾರಿ ತಕ್ಷಣವೇ ಪರಿಹಾರವನ್ನು ನೀಡಿ ಜನರಿಗೆ 24ಗ೦ಟೆಯೂ ಕುಡಿಯುವ ನೀರನ್ನು ನೀಡುವ೦ತೆ ನಗರದ ಜನತೆ ಆಗ್ರಹಿಸಿದ್ದಾರೆ.

ವಾರಾಹಿ ನೀರು ಜೋಡಣೆ ಹೇಳಿ ಮನೆ-ಮನೆಗೆ ಪೈಪು ಲೈನ್ ಜೋಡಣೆಮಾಡಿದರೂ ಅದರಲ್ಲಿ ಬರುತ್ತಿರುವುದು ಗಾಳಿ ಮಾತ್ರ ಮತ್ತು ಬಿಲ್ ಎ೦ದು ಜನರು ಆರೋಪಿಸಿದ್ದಾರೆ.ನೀರಿನ ದರವನ್ನು ಏರಿಕೆಮಾಡಿದ್ದರೂ ಮಳೆಯಿದ್ದರೂ ಉಡುಪಿ ನಗರಸಭೆಯಲ್ಲಿ ಜನತೆಗ೦ತೂ ಕುಡಿಯುವ ನೀರಿನ ಭಾಗ್ಯವಿಲ್ಲವೇ ಮಹಾನುಭಾವರೇ ನಿದ್ದೆಯಿದ್ದ ಏದ್ದು ಸಮಸ್ಯೆಗೆ ಪರಿಹಾರ ದೊರಕಿಸಿ ಎ೦ದು ಜನರು ಒತ್ತಾಯಿಸಿದ್ದಾರೆ.

No Comments

Leave A Comment