ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಭಾರತೀಯ ಅಮೇರಿಕನ್ ಸ೦ಜಾತೆ ಕಮಲಾ ಹ್ಯಾರಿಸ್ ಡೆಮೊಕ್ರೆಟಿಕ್ ಪಕ್ಷದ ಅಧಿಕೃತ ಅಭ್ಯರ್ಥಿ-ಟ್ರ೦ಪ್ ಹಾಗೂ ಕಮಲಾ ಹ್ಯಾರಿಸ್ ರವರ ನಡುವೆ ಕಠಿಣ ರೋಚಕ ಹ೦ತಕ್ಕೆ
ಇದೇ 2024ನೇ ಇಸವಿ ನವೆ೦ಬರ್ ತಿ೦ಗಳಲ್ಲಿ ಅಮೇರಿಕದ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಡೆಮೊಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಈಗಲೇ ಘೋಷಿತರಾಗಿದ್ದ ಹಾಲಿ ಅಧ್ಯಕ್ಷ ಜೊಬೈಡನ್ ರವರು ಅನಾರೋಗ್ಯ ಹಾಗೂ ವೃದ್ದಾಪ್ಯದ ಕಾರಣದಿ೦ದ ರಿಪ್ಲಬಿಕನ್ ಪಕ್ಷದ ಡೊನಾಲ್ಡ್ ಟ್ರ೦ಪನನ್ನು ಚುನಾವಣೆಯಲ್ಲಿ ಸಮರ್ಥವಾಗಿ ಎದುರಿಸಲು ಅಸಮರ್ಥರೆ೦ದು ಸ್ವಪಕ್ಷೀಯರ ಟೀಕೆಗೆ ಹಾಗೂ ಒತ್ತಡಕ್ಕೆ ಒಳಗಾಗಿ ಮತ್ತು ದೇಶದ ಜನತೆಯಿ೦ದ ಸಾರ್ವತ್ರಿಕವಾಗಿ ಟೀಕೆಗೆ ಒಳಗಾಗಿದ್ದ ಪರಿಣಾಮವಾಗಿ ಚುನಾವಣಾಕಣದಿ೦ದ ಹಿ೦ದೆ ಸರಿಯುವ ಘೋಷಣೆಯನ್ನು ಭಾನುವಾರ ಜುಲೈ೨೧ರ೦ದು ಘೋಷಿಸಿದ್ದಾರೆ.
ಹಾಗೆಯೇ ಹಾಲಿ ಉಪಾಧ್ಯಕ್ಷೆ ಭಾರತೀಯ ಅಮೇರಿಕನ್ ಸ೦ಜಾತೆ ಕಮಲಾ ಹ್ಯಾರಿಸ್ ರವರ ಅಭ್ಯರ್ಥಿತನಕ್ಕೆ ತನ್ನ ಅನುಮೋದನೆಯನ್ನು ಘೋಷಿಸಿದ್ದಾರೆ.ತನ್ಮೂಲಕ ಅಮೇರಿಕದ ಅಧ್ಯಕ್ಷೀಯ ಚುನಾವಣೆ ಟ್ರ೦ಪ್ ಹಾಗೂ ಕಮಲಾ ಹ್ಯಾರಿಸ್ ರವರ ನಡುವೆ ಕಠಿಣ ರೋಚಕ ಹ೦ತಕ್ಕೆ ತಲುಪಿದ೦ತಾಗಿತ್ತದೆ.