Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ರಾಜೀನಾಮೆ ಒತ್ತಾಯಿಸಿದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಕೂಡಲೇ ತಮ್ಮ ಸ್ಥಾನಕ್ಕೆರಾಜೀನಾಮೆ ನೀಡಲಿ –ಸುರೇಶ್ ಶೆಟ್ಟಿ ಬನ್ನಂಜೆ ಆಗ್ರಹ

ಉಡುಪಿ: ವಾಲ್ಮೀಕಿ ಹಾಗೂ ಮೈಸೂರು ಮೂಡಾ ಹಗರಣ ಆಗಿದೆ ಎಂದು ಸುಳ್ಳು ಸುಳ್ಳಾಗಿ ಪ್ರತಿಭಟನೆ ಮಾಡಿ ಕಾಂಗ್ರೆಸ್ ಪಕ್ಷದ ವಿರುದ್ಧ ನಮ್ಮ ರಾಜ್ಯದ ಜನರನ್ನು ದಾರಿ ತಪ್ಪಿಸುತ್ತಿರುವ ಈ ಬಿಜೆಪಿ ನಾಯಕರಿಗೆ ಅವರ ಆಡಳಿತದಲ್ಲಿ ಅವರು ಮಾಡಿದಂತಹ ಅಕ್ರಮ ಅವ್ಯವಹಾರಗಳನ್ನು ಯಾವ ಯಾವ ಇಲಾಖೆಯಲ್ಲಿ ಮಾಡಿದ್ದಾರೆ ಎಂಬುದನ್ನು ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಬಿಜೆಪಿ ಸರಕಾರ ಆಡಳಿತದಲ್ಲಿ ಯಾವ ಯಾವ ಸಚಿವರು ಯಾರು ಯಾರು ಮುಖ್ಯಮಂತ್ರಿ ಆಗಿದ್ದಾಗ ಎಷ್ಟೆಷ್ಟು ಅವ್ಯವಹಾರಗಳು ನಡೆದಿವೆ ಎಂಬುದನ್ನು ವಿಧಾನಸಭೆಯಲ್ಲಿ ತಿಳಿಸಿರುತ್ತಾರೆ.

ಅದರಲ್ಲಿ ಮಾನ್ಯ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಹಿಂದೆ ರಾಜ್ಯದಲ್ಲಿ ಸಚಿವರಾಗಿದ್ದಾಗ ಅವರ ಇಲಾಖೆಯಲ್ಲಿ ಎಷ್ಟು ಭ್ರಷ್ಟಾಚಾರ ಆಗಿದೆ ಎಂಬುದನ್ನು ಪಟ್ಟಿ ಮುಖಾಂತರ ತಿಳೆ ಸಿರುತ್ತಾರೆ ಬೋವಿ ಸಮಾಜದ ಅಭಿವೃದ್ಧಿ ನಿಗಮದಲ್ಲಿ 87 ಕೋಟಿ ಅವ್ಯವಹಾರವಾಗಿದ್ದು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ 430 ಕೋಟಿ ಹಗರಣ ನಡೆದಿದೆ ಇದು ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯವರು ಸಚಿವರಾಗಿದ್ದಾಗ ಅವರ ಇಲಾಖೆಯಲ್ಲಿ ನಡೆದ ಹಗರಣ ಈ ಬಗ್ಗೆ ಶ್ರೀನಿವಾಸ ಪೂಜಾರಿಯವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ತಾವು ಸಾಚ ಎಂದು ನಮ್ಮ ರಾಜ್ಯದ ಜನರನ್ನು ಇನ್ನು ಮೋಸಗೊಳಿಸುವ ಅಗತ್ಯ ಇಲ್ಲ ತಮ್ಮ ಇಲಾಖೆಯಲ್ಲಿ ನೂರು ಕೋಟಿ ಹಗರಣ ನಡೆದಿದೆ ಎಂಬುದನ್ನು ತಮ್ಮ ಪಕ್ಷದ ಮಾಜಿ ಶಾಸಕರೇ ಇತ್ತೀಚಿಗೆ ಪತ್ರಿಕಾ ಹೇಳಿಕೆ ನೀಡಿರುತ್ತಾರೆ.

ಹೀಗಿದ್ದುಕೊಂಡು ತಾವು ಮಾಡಿದ ಭ್ರಷ್ಟಾಚಾರವನ್ನು ಮರೆಮಾಚಲು ಪತ್ರಿಕಾಗೋಷ್ಠಿ ನಡೆಸಿ ಮುಖ್ಯಮಂತ್ರಿ ಅವರ ರಾಜೀನಾಮೆಗೆ ಒತ್ತಾಯಿಸಿರುವುದು ಎಷ್ಟು ಸರಿ ತಾವು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ತಾವು ನಿಷ್ಕಳಂಕರು ಎಂದು ಸಾಬೀತಾದರೆ ಮಾತ್ರ ನಮ್ಮ ನಾಯಕರ ಬಗ್ಗೆ ಮಾತನಾಡಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ ಶೆಟ್ಟಿ ಬನ್ನಂಜೆ ತಿಳಿಸಿರುತ್ತಾರೆ, ಹಾಗೂ ಕೋಟ ಶ್ರೀನಿವಾಸ್ ಪೂಜಾರಿ ಯವರ ರಾಜೀನಾಮೆ ಗೆ ಒತ್ತಾಯಿಸಿರುತ್ತಾರೆ.

No Comments

Leave A Comment