ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್....ಮುಂದುವರೆದ ನಕ್ಸಲ್ ಕೂಂಬಿಂಗ್: ಶರಣಾಗತಿಗೆ ಸೂಚನೆ, ಪ್ಯಾಕೇಜ್ ನೀಡುತ್ತೇವೆ ಎಂದ ಪರಮೇಶ್ವರ್
ಮಂಗಳೂರು: ಎಸಿ ಬೊಗಿಯೊಳಗೆ ನೀರು; ಪ್ರಯಾಣಿಕರ ಪರದಾಟ
ರೈಲಿನ ಎಸಿ ಬೋಗಿಯೊಳಗೆ ನೀರು ಹರಡಿದ ಘಟನೆ ಮಂಗಳೂರು – ಮನ್ಮಾಡ್ ಮಂಗಳದ್ವೀಪ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ನಡೆದಿದೆ. ಇದರಿಂದಾಗಿ ಮಂಗಳೂರಿನಿಂದ ಶಿರಡಿಗೆ ತೆರಳುತ್ತಿದ್ದ 95 ಮಂದಿ ಪ್ರಯಾಣಿಕರಿದ್ದ ಕೋಚ್ ಬಿ6 ಎಸಿ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷದಿಂದ ರೈಲಿನಲ್ಲಿ ಈ ಸಮಸ್ಯೆ ಉಂಟಾಗಿದೆ.
ತಾಂತ್ರಿಕ ದೋಷದಿಂದಾಗಿ ಕೋಚ್‌ನಲ್ಲಿ ಜಲಪಾತದಂತೆ ನೀರು ಸುರಿದಿದೆ. ಪರಿಣಾಮ ರೈಲಿನ ಒಳಭಾಗದಲ್ಲಿ ಪ್ರವಾಹ ಉಂಟಾಗಿದೆ. ನಿರಂತರ ನೀರು ಸೋರಿಕೆಯಿಂದ 60ಕ್ಕೂ ಹೆಚ್ಚು ಪ್ರಯಾಣಿಕರು ರಾತ್ರಿಯಿಡಿ ನಿದ್ದೆಯಿಲ್ಲದೆ ಪರದಾಡಿದ್ದಾರೆ.
ಈ ಕುರಿತು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಒಟ್ಟು 95 ಮಂದಿ ಜು.20, 21 ಮಂಗಳೂರಿನಿಂದ ಶಿರಡಿ ಕ್ಷೇತ್ರಕ್ಕೆ ಮಂಗಳ ಲಕ್ಷದ್ವೀಪ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದೇವೆ. ನಮ್ಮ ಜೊತೆಗಾರರು 12617 ಗಾಡಿಯ ಬಿ6 ಎ.ಸಿ.ಬೋಗಿಯಲ್ಲಿ ಪ್ರಯಾಣಿಸುತ್ತಿದ್ದೇವೆ. ರಾತ್ರಿ ಈ ಬೋಗಿಯ ಎ.ಸಿ. ಯ ತಾಂತ್ರಿಕ ದೋಷದಿಂದ ನೀರೆಲ್ಲ ಜಲಪಾತದಂತೆ ಸುರಿಯತೊಡಗಿ ಬೋಗಿಯ ಒಳಗೆ ನೀರು ಹರಡಿ ಬಹಳ ಸಮಸ್ಯೆಯಾಗಿದೆ. ರಾತ್ರಿ ಪೂರ್ತಿ ನೀರು ಹರಿದು ಬೋಗಿಯಲ್ಲಿದ್ದ 60 ಕ್ಕೂ ಹೆಚ್ಚು ಮಂದಿ ರಾತ್ರಿಯಿಡೀ ನಿದ್ದೆಯಿಲ್ಲದೆ ಕಳೆಯುವಂತಾಗಿದೆ. ಈ ವಿಚಾರವನ್ನು ರೈಲಿನಲ್ಲಿರುವ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.