ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

ಉಡುಪಿ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಶ್ರೀ ಗೋಕರ್ಣ ಮಠಾಧೀಶರ ದಿವ್ಯ ಉಪಸ್ಥಿತಿಯಲ್ಲಿ ಬೃಹತ್ ರಾಮನಾಮ ಜಪ ಅಭಿಯಾನ

ಉಡುಪಿ:ಉಡುಪಿಯ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ 30 ಜೂನ್ ರಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠದ 550ನೇ ವರ್ಷದ ಪ್ರಯುಕ್ತ ವಿಶೇಷ ಬೃಹತ್ ರಾಮನಾಮ ಜಪ ಅಭಿಯಾನವು ನಡೆಯಿತು.

ಅಭಿಯಾನದಲ್ಲಿ ಶ್ರೀ ಗೋಕರ್ಣ ಮಠದ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ಶ್ರೀಪಾದ ಒಡೆಯರ್ ಸ್ವಾಮೀಜಿಯವರು ತಮ್ಮ ದಿವ್ಯ ಉಪಸ್ಥಿತಿಯಲ್ಲಿ ನೆರವೇರಿದ ಸರ್ವ ಜಾಪಕರನ್ನು ಅನುಗ್ರಹಿಸಿದರು. ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಈ ಅಭಿಯಾನದಲ್ಲಿ ಸಹಸ್ರಕ್ಕೂ ಅಧಿಕ ಜಾಪಕರು ಭಾಗವಹಿಸಿ ಸುಮಾರು 41 ಲಕ್ಷ ರಾಮ ನಾಮ ತಾರಕ ಮಹಾಮಂತ್ರದ ಜಪವು ಸ್ವಾಮೀಜಿಯವರ ಸಮ್ಮುಖದಲ್ಲಿ ನಡೆಯಿತು.

ಬೆಳಗ್ಗೆ 8:00ಕ್ಕೆ ಶ್ರೀ ಲಕ್ಷ್ಮಿ ವೆಂಕಟೇಶ ದೇವರ ದೇವಾಲಯದ ಆಡಳಿತ ಮಂಡಳಿ ಮತ್ತು ಭಕ್ತಾದಿಗಳು ಎಲ್ಲರೂ ಸೇರಿ ವಿಶೇಷ ಪ್ರಾರ್ಥನೆ ಮಾಡಿದರು ಮತ್ತು 1 ದಿನದ ಬೃಹತ್ ರಾಮನಾಮ ಜಪ ಅಭಿಯಾನವನ್ನು ಆರಂಭಿಸಿದರು. ಮಧ್ಯಾಹ್ನ3 ಗಂಟೆಗೆ ಕ್ಕೆ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರು ದೇವಳಕ್ಕೆ ಆಗಮಿಸಿದಾಗ ದೇವಳದ ವತಿಯಿಂದ ಶ್ರೀಪಾದರನ್ನು ಪೂರ್ಣ ಕುಂಭ ದೊಂದಿಗೆ ಸ್ವಾಗತಿಸಿ , ಪಾದ ಪೂಜೆ ನೆರವೇರಿಸಿ ಫಲ ಪುಷ್ಪ ಕಾಣಿಕೆ ಸಮರ್ಪಿಸಲಾಯಿತು.

ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಬೃಹತ್ ರಾಮನಾಮ ಜಪ ಅಭಿಯಾನ ನೆಡೆಯಿತು.

ಶ್ರೀಪಾದರು ಅನುಗ್ರಹ ಸಂದೇಶದಲ್ಲಿ ರಾಮನಾಮ ಜಪದ ಮಹತ್ವ ಹಾಗೂ ಅದರ ಪ್ರತಿಫಲದ ಬಗ್ಗೆ ನೆರದ ರಾಮ ಭಕ್ತರಿಗೆ ನಮ್ಮ ಹಿರಿಯರು ಮಾಡಿದ ಪುಣ್ಯಫಲ ದಿಂದ ನಮಗೆಸಮಾಜದಲ್ಲಿ ಸ್ಥಾನಮಾನ ಗೌರವ , ಕೀರ್ತಿ ಯಶ್ವಸ್ ಸಿಕ್ಕಿರುತ್ತದೆ.ಈಗ ನಾವು ಮಾಡಿದ ರಾಮಜಪದಿಂದ ನಿಮಗೆ ನಿಮ್ಮ ಸಂಸಾರಕ್ಕೆ ಕಲ್ಪವೃಕ್ಷಾ ದಂತಹ ಶ್ರೇಷ್ಠ ಫಲ ನಿರಂತರ ಸಿಗುತ್ತದೆ. ಮುಂದೆ ನೆಡೆಯುವ ಈ 550 ದಿನಗಳು ನಿರಂತರ ನಡೆಯುವ ಶ್ರೀರಾಮನಾಮ ಜಪ ಅಭಿಯಾನವು ನಮ್ಮ ಸಮಾಜದ ಜನರಿಗೆ ಸಿಕ್ಕಂತಹ ಅಭೂತಪೂರ್ವ ಅವಕಾಶ ಶ್ರೀ ರಾಮನಾಮ ಜಪವನ್ನು ಮಾಡಿದರೆ ಶ್ರೀದೇವರು ಖಂಡಿತವಾಗಿ ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಅನುಗ್ರಹಿಸಲಿದ್ದಾನೆ ನಾವು ದೇವರ ಮೇಲೆ ದೃಢವಾದ ನಂಬಿಕೆಯನಿಡಬೇಕು.ಇಂತಹ ಕಾರ್ಯ ದಿಂದ ಲೋಕಕಲ್ಯಾಣ ವಾಗುವುದು ಎಂದು ಅನುಗ್ರಹ ಸಂದೇಶ ನೀಡಿ ಹರಿಸಿದರು. ರಾಮನಾಮ ಜಪ ಅಭಿಯಾನದಲ್ಲಿ ಊರ ಪರಊರ ಭಕ್ತದಿಗಳಾದ ಶ್ರೀ ವೀರ ವಿಠಲ ದೇವಸ್ಥಾನ ಭದ್ರಗಿರಿ, ಶ್ರೀ ರಾಮ ಮಂದಿರ ಮಲ್ಪೆ , ತೋನ್ಸೆ ಪೈ ಕುಟುಂಬಸ್ಥರು, ಶ್ರೀ ವೆಂಕಟರಮಣ ದೇವಸ್ಥಾನ ಬ್ರಹ್ಮಾವರ, ಶ್ರೀ ರಾಮ್ ಮಂದಿರ ಸಾಲಿಗ್ರಾಮ ಭಾಗವಹಿಸಿದರು.

ಶ್ರೀ ರಾಮ ನಾಮ ಜಪ ಅಭಿಯಾನವನ್ನು ಹೊಸದಾಗಿ ಆರಂಭಿಸಲಿರುವ ಕೇಂದ್ರ ಮತ್ತು ಉಪ ಕೇಂದ್ರಗಳಾದ ಶ್ರೀ ವೆಂಕಟರಮಣ ದೇವಸ್ಥಾನ ಕಲ್ಯಾಣಪುರ,ಶ್ರೀ ವೀರ ವಿಠ್ಠಲ ದೇವಸ್ಥಾನ ಉದ್ಯಾವರ,ಶ್ರೀ ದುರ್ಗಾಂಬಾ ದೇವಸ್ಥಾನ ಮಣಿಪಾಲ್,ಶ್ರೀ ವಿಠೋಬ ದೇವಸ್ಥಾನ ಮುಂಡ್ಕೂರ್,ಶ್ರೀ ವೆಂಕಟರಮಣ ದೇವಸ್ಥಾನ ಕಾಪು,ಶ್ರೀ ರಾಮನಾಮ ಕಮಿಟಿ ಸದಸ್ಯರು ಬಂದು ಶ್ರೀಗಳ ಅವರಲ್ಲಿ ವಿಶೇಷ ವಿನಂತಿಸ್ವೀಕರಿಸಿ ಆಶೀರ್ವದಿಸಿದರು.

ಶ್ರೀರಾಮನಾಮ ಅಭಿಯಾನದ ನಂತರ ದೇವಳದ ಶ್ರೀ ಲಕ್ಷ್ಮಿ ವೆಂಕಟೇಶ ಸ್ವಾಮಿಗೆ ವಿಶೇಷ ರಾತ್ರಿ ಪೂಜೆಯನ್ನು ಶ್ರೀ ಗಳವರು ನೆರವೇರಿಸಿದರು. ಅನಂತ ವೈದಿಕ ಕೇಂದ್ರದ ಅರ್ಚಕರು ವೇದ ಮಂತ್ರ ಘೋಷ ದೊಂದಿಗೆ ಪ್ರಾರ್ಥನೆ ನೆಡೆಸಿಕೊಟ್ಟರು , ಜಗದೀಶ್ ಪೈ ವಿಶೇಷ ಸಹಕಾರ ನೀಡಿ ಸಹಕರಿಸಿದರು ದೇವಳದ ಧರ್ಮದರ್ಶಿ ಪಿ. ವಿ. ಶೆಣೈ ಸ್ವಾಗತಿಸಿದರು , ಪ್ರಾಸ್ತಾವಿಕ ಹಾಗೂ ಕಾರ್ಯಕ್ರಮದ ನಿರೂಪಣೆ ವೇ. ಮೂರ್ತಿ. ಚೇಂಪಿ ರಾಮಚಂದ್ರ ಭಟ್ ನೆಡೆಸಿಕೊಟ್ಟರು.

ದೇವಳದ ಆಡಳಿತ ಮಂಡಳಿಯ ಸದಸ್ಯರು,ಶ್ರೀ ರಾಮನಾಮ ಜಪ ಅಭಿಯಾನ ಸಮಿತಿ ಸದಸ್ಯರು ಜಿ ಎಸ್ ಬಿ ಯುವಕ ಮತ್ತು ಮಹಿಳಾ ಮಂಡಳಿ,ವಿವಿಧ ಭಜನಾ ಮಂಡಳಿ ಸದಸ್ಯರು, ಊರ- ಪರಊರ ಗಳಿಂದ ಜಿ ಎಸ್ ಬಿ ದೇವಳದ ಪ್ರತಿನಿಧಿಗಳು ಮತ್ತು ಸಾವಿರಾರು ಜಾಪಕರು ಈ ಅಭಿಯಾನದಲ್ಲಿ ಭಾಗವಹಿಸಿ ಧನ್ಯರಾದರು .

No Comments

Leave A Comment