ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್....ಮುಂದುವರೆದ ನಕ್ಸಲ್ ಕೂಂಬಿಂಗ್: ಶರಣಾಗತಿಗೆ ಸೂಚನೆ, ಪ್ಯಾಕೇಜ್ ನೀಡುತ್ತೇವೆ ಎಂದ ಪರಮೇಶ್ವರ್
ಜೈಲಿನಿಂದ ಹಗಲು-ರಾತ್ರಿ ನಿರ್ಮಾಪಕರಿಗೆ ಕರೆ ಮಾಡಿ ಜಾಮೀನಿಗೆ ಬೇಡಿಕೆ ಇಡುತ್ತಿರುವ ದರ್ಶನ್
ದೇಶಾದ್ಯಂತ ಸುದ್ದಿ ಆಗಿರುವ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲುವಾಸ ಅನುಭವಿಸುತ್ತಿದ್ದಾರೆ. ಅವರು ನ್ಯಾಯಾಂಗ ಬಂಧನಕ್ಕೆ ಒಳಗಾಗಿ 11 ದಿನ ಆಗಿದೆ. ಆದಷ್ಟು ಬೇಗ ಜಾಮೀನು ಪಡೆಯಬೇಕು ಎಂದು ದರ್ಶನ್ಪ್ರಯತ್ನಿಸುತ್ತಿದ್ದಾರೆ. ಜೈಲಿನಲ್ಲಿ ದಿನ ಕಳೆಯುವುದು ದರ್ಶನ್ಗೆ ಕಷ್ಟ ಆಗುತ್ತಿದೆ. ಅದಕ್ಕಾಗಿ ಅವರು ಚಿತ್ರರಂಗದಲ್ಲಿ ತಮಗೆ ಆಪ್ತರಾಗಿರುವ ಕೆಲವು ನಿರ್ಮಾಪಕರಿಗೆ ಕರೆ ಮಾಡಿ ಜಾಮೀನಿಗಾಗಿ ಒತ್ತಾಯ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಹಗಲು-ರಾತ್ರಿ ಕರೆ ಮಾಡಿ ಜಾಮೀನಿಗೆ ವ್ಯವಸ್ಥೆ ಮಾಡುವಂತೆ ದರ್ಶನ್ ಕೋರುತ್ತಿದ್ದಾರೆ.
ವಾರಕ್ಕೆ 3 ಬಾರಿ ಫೋನ್ ಕರೆ ಮಾಡಲು ಜೈಲಿನ ಸಿಬ್ಬಂದಿ ಅವಕಾಶ ಕೊಟ್ಟಿದ್ದಾರೆ. ಜೈಲಿನ ಫೋನ್ ಬೂತ್‌ನಿಂದ ದರ್ಶನ್ ಕರೆ ಮಾಡುತ್ತಿದ್ದಾರೆ. ಆದರೆ ಈವರೆಗೆ ಒಂದೇ ಒಂದು ಬಾರಿಯೂ ಅವರು ತಮ್ಮ ಕುಟುಂಬದವರಿಗೆ ಫೋನ್ ಮಾಡಿಲ್ಲ. ಬದಲಿಗೆ, ನಿರ್ಮಾಪಕರಿಗೆ ಮತ್ತು ನಿರ್ದೇಶಕರಿಗೆ ಕರೆ ಮಾಡಿ ಜಾಮೀನಿಗಾಗಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ರಾತ್ರಿಯಾದರೆ ಸಾಕು ದರ್ಶನ್ ಕಡೆಯಿಂದ ನಿರ್ಮಾಪಕರಿಗೆ ಫೋನ್ ಕರೆಗಳು ಹೋಗಲು ಶುರುವಾಗುತ್ತವೆ.
ಹೇಗಾದರೂ ಮಾಡಿ ತಮ್ಮನ್ನು ಜೈಲಿನಿಂದ ಹೊರಗೆ ತರುವಂತೆ ದರ್ಶನ್ ಒತ್ತಾಯ ಮಾಡುತ್ತಿದ್ದಾರೆ. ಅಕ್ಕ-ಪಕ್ಕದ ಖೈದಿಗಳಿಗೆ ಮೀಸಲಾಗಿದ್ದ ಫೋನ್ ಕರೆಗಳನ್ನು ಕೂಡ ದರ್ಶನ್ ಅವರೇ ಬಳಸಿಕೊಳ್ಳುತ್ತಿದ್ದಾರೆ. ಜಾಮೀನು ಪಡೆಯಬೇಕು ಎಂಬ ಹಂಬಲ ಅವರಲ್ಲಿ ಹೆಚ್ಚಾಗಿದೆ. ಸತತ 11 ದಿನಗಳಿಂದ ಜೈಲು ವಾಸದಲ್ಲಿ ಇರುವ ದರ್ಶನ್ ಅವರನ್ನು ನೋಡಲು ಪರಪ್ಪನ ಅಗ್ರಹಾರದ ಬಳಿ ಅನೇಕರು ಬರುತ್ತಿದ್ದಾರೆ.
ಹೇಗಿದೆ ದರ್ಶನ್ ಪರಿಸ್ಥಿತಿ?
ಪವಿತ್ರಾ ಗೌಡ ಜೊತೆ ದರ್ಶನ್ ಜೈಲು ಸೇರಿದ ಕೂಡಲೇ ನಟನ ಕುಟುಂಬದವರು ಭೇಟಿಯಾಗಲು ಬಂದಿರಲಿಲ್ಲ. ನಂತರ ಪತ್ನಿ ವಿಜಯಲಕ್ಷ್ಮಿ ಅವರು ಜೈಲಿಗೆ ಭೇಟಿ ನೀಡಿದರು. ಆ ಬಳಿಕ ಸಹೋದರ ದಿನಕರ್ ತೂಗುದೀಪ, ತಾಯಿ ಮೀನಾ ಕೂಡ ಪರಪ್ಪನ ಅಗ್ರಗಾರಕ್ಕೆ ಬಂದು ದರ್ಶನ್ ಅವರನ್ನು ಮಾತನಾಡಿಸಿದರು. ಕುಟುಂಬದರ ಭೇಟಿಯ ಬಳಿಕ ದರ್ಶನ್ ಅವರು ಸ್ವಲ್ಪ ರಿಲ್ಯಾಕ್ಸ್ ಆಗಿದ್ದಾರೆ.
ಜುಲೈ 1ರಂದು ತಾಯಿ, ತಮ್ಮ, ಪತ್ನಿ, ಅಕ್ಕ ಸೇರಿದಂತೆ ದರ್ಶನ್ ಕುಟುಂಬದ ಹಲವರು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದರು. ಇದರಿಂದ ದರ್ಶನ್ಗೆ ಸ್ವಲ್ಪ ಸಮಾಧಾನ ಆಗಿದೆ. ಹಾಗಾಗಿ, ರಾತ್ರಿ ಬೇಗನೇ ನಿದ್ರೆಗೆ ಜಾರಿದ್ದ ಅವರು ಇಂದು (ಜುಲೈ 2) ಬೆಳಿಗ್ಗೆ ಬೇಗ ಎದ್ದು ಸೆಲ್ನಲ್ಲೇ ಕೆಲವೊತ್ತು ವಾಕಿಂಗ್ ಮಾಡಿದ್ದಾರೆ. ಜೈಲ್ ಸಿಬ್ಬಂದಿ ಬಳಿ ಬಿಸಿನೀರು ಕೇಳಿ ಪಡೆದರು. ಜೈಲಿನ ಮೆನುವಿನಂತೆ ದರ್ಶನ್ಗೆ ಅವಲಕ್ಕಿ, ಉಪ್ಪಿಟ್ಟು ನೀಡಲಾಗಿದೆ.