ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​

ಮಂಗಳೂರು ; ಎ.ಜೆ. ಇಂಜಿನೀಯರಿಂಗ್ ಕಾಲೇಜಿಗೆ ಸಂಪರ್ಕಿಸುವ ರಾಜಕಾಲುವೆ ರಸ್ತೆ ಕುಸಿತ

ಮಂಗಳೂರು ; ಕಳೆದ ವಾರ ಸುರಿದ ಧಾರಕಾರ ಮಳೆಗೆ ಜಿಲ್ಲೆಯಲ್ಲಿ 6 ಮಂದಿ ಸಾವನಪ್ಪಿದ್ದು ಹಲವು ಮನೆಗಳು ಧರೆಗುಳಿದ ಘಟನೆ ನಡೆದಿದೆ. ಜಿಲ್ಲಾಡಳಿತ ಮಳೆಗಾಲದಲ್ಲಿ ಸರಿಯಾಗಿ ತಯಾರಿ ನಡೆಸದ ಇರುವುದರಿಂದ ಇಂತಹ ಸಾವುನೋವುಗಳು ಸಂಭವಿಸಿದೆ ಎಂದು ಸಾರ್ವಜನಿಕರು ಅಕ್ರೋಶಹೊರಹಾಕಿದ್ದಾರೆ.

ಇನ್ನೂ ಮಳೆಯಿಂದ ಕುಸಿಯುವ ಭೀತಿ ಎದುರಿಸಿದ್ದ ರಸ್ತೆಯೊಂದು ಇಂದು ಸಂಪೂರ್ಣ ಕುಸಿದು ಹೋಗಿದೆ. ಬಂಗ್ರ ಕೂಳೂರು ವಾರ್ಡ್ನ ಬಳಿ ಉರುವ ಎ.ಜೆ. ಇಂಜಿನೀಯರಿಂಗ್ ಕಾಲೇಜಿನ ರಾಜಕಾಲುವೇ ಪಕ್ಕದ ರಸ್ತೆ ಈಗ ಸಂಪೂರ್ಣ ಕುಸಿದು ಹೋಗಿದೆ. ಸುಮಾರು ಹತ್ತು ಮನೆಗಳು ಈ ರಸ್ತೆಯನ್ನು ಅವಲಂಭಿಸಿದ್ದು, ಇಲ್ಲಿಗೆ ಸಂಪರ್ಕ ಕಲ್ಪಿಸುತ್ತಿದ್ದ ವಿದ್ಯುತ್ ಕಂಬಗಳನ್ನು ಶಿಫ್ಟ್ ಮಾಡಲಾಗಿತ್ತು. ಬಳಿಕ ಸ್ಯಾಂಡ್ ಬಾಗ್ ಇರಿಸಿ ರಸ್ತೆಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿತ್ತು. ರಾಜಕಾಲುವೆಗೆ ಕಟ್ಟಿದ್ದ ತಡೆಗೋಡಿ ಹಳೆಯದಾಗಿದ್ದ ಕಾರಣ ಈ ರಸ್ತೆ ಕುಸಿಯಲು ಕಾರಣವಾಗಿದೆ ಎನ್ನಲಾಗಿದೆ. ಸದ್ಯ ಇಲ್ಲಿನ ನಿವಾಸಿಗಳಿಗೆ ಸಂಚರಿಸಲು ಪರ್ಯಾಯ ರಸ್ತೆ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ. ಮಳೆ ಜೋರಾಗಿ ಬಂದಲ್ಲಿ ಸಂಪೂರ್ಣ ರಸ್ತೆ ರಾಜಕಾಲುವೆ ಸೇರಿ ಕಾಲುವೆ ಕೃತಕ ನೆರೆ ಉಂಟಾಗುವ ಸಾದ್ಯತೆ ಕೂಡಾ ಇದೆ ಎಂದು ಸ್ಥಳಿಯರು ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಈ ಬಾರಿ ಹೂಳೆತ್ತದೆ ಇರುವುದರಿಂದ ಈ ರೀತಿ ಕೃತಕ ನೆರೆ ಹಲವೆಡೆ ಸೃಷ್ಟಿ ಯಾಗಿದೆ ಎಂದು ನಿವಾಸಿಗಳು ದೂರಿದ್ದಾರೆ .ಒಟ್ಟಿನಲ್ಲಿ ರಾಜಾಕೀಯ ನಾಯಕರ ಗುದ್ದಾಟದಲ್ಲಿ ಜನಸಾಮಾನ್ಯರ ಜೀವನ ಭಯಬೀತವಾದಂತಾಗಿದೆ.

No Comments

Leave A Comment