ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಉಡುಪಿ ಶ್ರೀಕಾಣಿಯೂರು ಮಠದಲ್ಲಿ ಸ೦ಭ್ರಮದ ಶ್ರೀನೃಸಿಂಹಜಯಂತಿ
ಉಡುಪಿ: ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀಕಾಣಿಯೂರು ಮಠದ ಮೂಲ ಯತಿಗಳಾದ ಶ್ರೀ ರಾಮತೀರ್ಥರಿಗೆ ಶ್ರೀಮನ್ಮಧ್ವಾಚಾರ್ಯರು ಪೂಜಿಸಿ ದಯಪಾಲಿಸಿದ ಪಟ್ಟದ ದೇವರಿಗೆ ವರ್ಷಂಪ್ರತಿ ನಡೆಯುವ ಶ್ರೀ ನೃಸಿಂಹಜಯಂತಿ ಮಹೋತ್ಸವ ಪ್ರಯುಕ್ತ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು ತಮ್ಮ ಉಪಾಸ್ಯ ಮೂರ್ತಿಗಳಾದ ಶ್ರೀ ಯೋಗಾರೂಢ ನೃಸಿಂಹದೇವರಿಗೆ,ಶ್ರೀ ಕರಾಳನೃಸಿಂಹ ದೇವರಿಗೆ ಹಾಗೂ ಮಧ್ವಾಚಾರ್ಯರ ಪೂರ್ವಾಶ್ರಮದ ಮನೆದೇವರಾದ ಪಾಜಕ ಕ್ಷೇತ್ರದಲ್ಲಿ ಇರುವ ಶ್ರೀಅನಂತಪದ್ಮನಾಭದೇವರಿಗೆ, ಗರುಡವಾಹನ ನೃಸಿಂಹ ದೇವರಿಗೆ, ಹಾಗೂ ಇನ್ನಿತರ ಪರಂಪರೆಯ ವಿಗ್ರಹಗಳಿಗೆ 108 ಸೀಯಾಳ ಸಹಿತ ಪಂಚಾಮೃತ ಅಭಿಷೇಕವನ್ನು ನೆರವೇರಿಸಿದರು.
ನಂತರ ಮಹಾಪೂಜೆ ನೆರವೇರಿಸಿದರು ನಂತರ ಜಗದ್ಗುರು ಮಧ್ವಾಚಾರ್ಯರಿಗೆ ವಿಶೇಷ ಪೂಜೆ ನೆರವೇರಿಸಿದರು.