ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಪರಮೇಶ್ವರ್ ತವರು ಕ್ಷೇತ್ರದಲ್ಲಿ ಯೋಧನ ಮೇಲೆ ಮದ್ಯದ ಬಾಟಲಿಯಿಂದ ಮಾರಣಾಂತಿಕ ಹಲ್ಲೆ
ತುಮಕೂರು, ಮೇ 24: ದಾರಿ ಬಿಡಿ ಎಂದಿದ್ದಕ್ಕೆ ಯೋಧನ ಮೇಲೆ ಪುಂಡರು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಕೊರಟಗೆರೆ ತಾಲೂಕಿನ ಬೈರೇನಹಳ್ಳಿ ಕ್ರಾಸ್ಬಳಿ ನಡೆದಿದೆ. ಗೋವಿಂದರಾಜು (30) ಹಲ್ಲೆಗೊಳಗಾದ ಯೋಧ. ಭರತ್, ಪುನೀತ್, ಗೌರಿಶಂಕರ, ಶಿವಾ, ದಿಲೀಪ್ ಎಂಬುವರಿಂದ ಹಲ್ಲೆ ಮಾಡಿದ ಪುಂಡರು.
ಯೋಧ ಗೋವಿಂದರಾಜು ಅವರು ಜಮ್ಮುಕಾಶ್ಮಿರದ ರಜೌರಿನಲ್ಲಿ ಭಾರತೀಯ ಭೂಸೇನೆ ಸಿಪಾಯಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಜೆಯ ಮೇಲೆ ಊರಿಗೆ ಬಂದಿದ್ದು, ಬೈರೇನಹಳ್ಳಿ ಕ್ರಾಸ್ಗೆ ಬರುತ್ತಿದ್ದರು. ಈ ವೇಳೆ ದಾರಿ ಮಧ್ಯೆ ನಿಂತಿದ್ದವರಿಗೆ ಯೋಧ ಗೋವಿಂದರಾಜು ಅವರು ದಾರಿ ಬಿಡಿ ಎಂದಿದ್ದಾರೆ.
ಈ ವೇಳೆ ಕುಡಿದ ಮತ್ತಲ್ಲಿ ಐವರು ಮದ್ಯದ ಬಾಟಲಿಯಿಂದ ಯೋಧ ಗೋವಿಂದರಾಜು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.