Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಪುತ್ತಿಗೆ ಪರ್ಯಾಯಕ್ಕೆ ರಾಷ್ಟ್ರಪತಿಗಳಿಗೆ ಆಹ್ವಾನ

ಉಡುಪಿ:ರಾಷ್ಟ್ರದ ರಾಷ್ಟ್ರಪತಿಗಳಾದ ಸನ್ಮಾನ್ಯ ದ್ರೌಪದಿ ಮುರ್ಮ ಇವರಿಗೆ ಭಾವಿ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥಶ್ರೀಪಾದಂಗಳವರ ಪ್ರಧಾನ ಯೋಜನೆಯಾದ ಕೋಟಿಗೀತಾ ಲೇಖನ ಯಜ್ಞದ ಅಭಿಯಾನ ವಿವರ ಹಾಗೂ ಭಗವದ್ಗೀತಾ ಪುಸ್ತಕವನ್ನು ಮತ್ತು ಪರ್ಯಾಯದ ಸಂದರ್ಭದಲ್ಲಿ ಉಡುಪಿಗೆ ಆಗಮಿಸಲು ಮನವಿ ಪತ್ರದೊಂದಿಗೆ ಶ್ರೀಕೃಷ್ಣ ಪ್ರಸಾದವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಭಾರತದ ವಿವಿಧ ಪ್ರದೇಶಗಳ ವಿದ್ವಾಂಸರು ಭಾಗವಹಿಸಿದ್ದರು.

ವಿದ್ವಾಂಸರ ಲೋಕಭಾಷಾ ಪ್ರಚಾರ ಸಮಿತಿಯ ರಾಷ್ಟ್ರಾಧ್ಯಕ್ಷರಾದ ಪ್ರೊ.ಸದಾನಂದ ದೀಕ್ಷಿತ್, ಸಂಸ್ಕೃತ ವಿದ್ವಾಂಸರಾದ
ಡಾ.ಬಿಪಿನವಿಹಾರಿ ಶತಪತಿ,(ಒರಿಸ್ಸಾ ). ರಾಜಸ್ಥಾನದ ಡಾ.ನಿರಂಜನ್ ಸಾಹು, ಅಸ್ಸಾಂ ನ ಡಾ.ಕುಶಲ ಕಲಿತಾ, ಉತ್ತರ ಪ್ರದೇಶದ ಡಾ.ರೀತಾ ತ್ರಿವಾರಿ, ನವ ದೆಹಲಿಯ ಡಾ.ಶ್ರೀವತ್ಸ ಶಾಸ್ತ್ರಿ. ಇವರು ಉಪಸ್ಥಿತರಿದ್ದರು.

No Comments

Leave A Comment