ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

ಚಂದ್ರನಲ್ಲಿ ಹಗಲು: ನಿದ್ರೆಗೆ ಜಾರಿದ್ದ ಪ್ರಗ್ಯಾನ್ ರೋವರ್, ವಿಕ್ರಮ್ ಲ್ಯಾಂಡರ್ ಎಬ್ಬಿಸಲು ಇಸ್ರೋ ಸಜ್ಜು, ಇಂದು ಮತ್ತೊಂದು ಸಾಹಸ!

ಬೆಂಗಳೂರು: ಚಂದ್ರಯಾನ-3 ಅಭೂತಪೂರ್ವ ಯಶಸ್ಸಿನ ಬಳಿಕ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಂದು ಮತ್ತೊಂದು ಸಾಹಸಕ್ಕೆ ಮುಂದಾಗಿದ್ದು 15 ದಿನಗಳ ಹಿಂದೆ ಚಂದ್ರನಲ್ಲಿ ರಾತ್ರಿಯಾದ ಕಾರಣ ನಿದ್ರೆಗೆ ಜಾರಿಸಿದ್ದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಗಳನ್ನು ಎಬ್ಬಿಸುವ ಸಾಹಸಕ್ಕೆ ಇಸ್ರೋ ಮುಂದಾಗಿದೆ.

ಹೌದು.. ಈ ಹಿಂದೆ ಚಂದ್ರಯಾನ ನೌಕೆ ಅಂದರೆ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ್ದ ಇಸ್ರೋ ಅದು 14 ದಿನ ಕೆಲಸ ಮಾಡಬಹುದು ಎಂದು ಹೇಳಿತ್ತು. ಅದರಂತೆ 14 ದಿನಗಳ ಕಾಲ ರೋವರ್ ಮತ್ತು ಲ್ಯಾಂಡರ್ ಅಭೂತಪೂರ್ವವಾಗಿ ಕಾರ್ಯ ನಿರ್ವಹಿಸಿದ್ದವು. ಬಳಿಕ 15ನೇ ದಿನ ಉಭಯ ನೌಕೆಗಳನ್ನು ನಿದ್ರೆಗೆ ಜಾರಿಸಲಾಗಿತ್ತು. ಇದೀಗ ಮತ್ತೆ ಚಂದ್ರನಲ್ಲಿ ಮುಂಜಾನೆಯಾಗುತ್ತಿದ್ದು ಇದೇ ಕಾರಣಕ್ಕೆ ಇಸ್ರೋ ವಿಜ್ಞಾನಿಗಳು ನಿದ್ರೆಗೆ ಜಾರಿರುವ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ಗಳನ್ನು ಎಬ್ಬಿಸಲು ಹಗಲು ರಾತ್ರಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಒಂದು ವೇಳೆ ಈ ಸಾಹಸದಲ್ಲಿ ಇಸ್ರೋ ವಿಜ್ಞಾನಿಗಳು ಸಫಲವಾದರೆ ಲ್ಯಾಂಡರ್ ಮತ್ತು ರೋವರ್ ಪುನಃ ಎಚ್ಚರಗೊಂಡರೆ ಮುಂದಿನ 14 ದಿನಗಳವರೆಗೆ ಕೆಲಸ ಮಾಡಬಹುದು. ಸೌರಶಕ್ತಿ ಚಾಲಿತ ಚಂದ್ರಯಾನ-3 ಮಾಡ್ಯೂಲ್ ಮಿಷನ್‌ನ ವ್ಯಾಲಿಡಿಟಿ ಕೇವಲ ಒಂದು ಚಂದ್ರನ ದಿನವಾಗಿತ್ತು, ಅಂದರೆ ಭೂಮಿಯ ಮೇಲೆ ಸುಮಾರು 14 ದಿನಗಳಾಗಿತ್ತು.

ಲ್ಯಾಂಡರ್ ಮತ್ತು ರೋವರ್ ಮತ್ತೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಇಸ್ರೋಗೆ ಸ್ವಲ್ಪ ಭರವಸೆ ಇದೆ. ಸದ್ಯ ಲ್ಯಾಂಡರ್ ಮತ್ತು ರೋವರ್ ಸ್ಲೀಪ್ ಮೋಡ್‌ಗೆ ಹೋಗಿವೆ. ಸ್ಲೀಪ್ ಮೋಡ್‌ನಿಂದ ಎಚ್ಚೆತ್ತುಕೊಂಡು ಮತ್ತೆ ಕೆಲಸ ಮಾಡಲು ಪ್ರಾರಂಭಿಸಿದರೆ ಅದು ಇಸ್ರೋಗೆ ನಿಜಕ್ಕೂ ಸಂತಸ ತರಲಿದೆ. ಬುಧವಾರ ಚಂದ್ರನ ಮೇಲೆ ತುಂಬಾ ಚಳಿಯ ದಿನವಾಗಿದೆ. ಆದ್ದರಿಂದ, ಈಗ ದಿನ ಬೆಳಗಾದರೆ ಮತ್ತು ಸೂರ್ಯನ ಬೆಳಕು ಪ್ರಖರವಾದ ನಂತರ ಲ್ಯಾಂಡರ್ ಮತ್ತು ರೋವರ್ ಅನ್ನು ಎಚ್ಚರಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಗ್ರೌಂಡ್ ಸ್ಟೇಷನ್ ಗುರುವಾರ ಅಥವಾ ಶುಕ್ರವಾರದಂದು ಲ್ಯಾಂಡರ್, ರೋವರ್ ಮಾಡ್ಯೂಲ್ ಮತ್ತು ಆನ್-ಬೋರ್ಡ್ ಉಪಕರಣಗಳನ್ನು ಪುನರುಜ್ಜೀವನಗೊಳಿಸುತ್ತದೆ ಎಂದು ಇಸ್ರೋ ಅಧಿಕಾರಿಯೊಬ್ಬರು ಹೇಳಿದ್ದಾರೆ. ಗರಿಷ್ಠ ಸೂರ್ಯನ ಬೆಳಕು ಲಭ್ಯವಾದ ನಂತರ ಮಾಡಲು ಪ್ರಯತ್ನಿಸುತ್ತೇವೆ. ಆದರೆ ಅದು ಮತ್ತೆ ಕೆಲಸ ಮಾಡುವ ಸಾಧ್ಯತೆಗಳು ತುಂಬಾ ಹೆಚ್ಚಿಲ್ಲ. ಆದರೆ ಇದು ಹತಾಶ ಪರಿಸ್ಥಿತಿಯೂ ಅಲ್ಲ. ಲ್ಯಾಂಡರ್ ಅಥವಾ ರೋವರ್ ಮಾಡ್ಯೂಲ್ ಸ್ಲೀಪ್ ಮೋಡ್‌ನಿಂದ ಎಚ್ಚರಗೊಳ್ಳುವ ಸಾಧ್ಯತೆಯಿದೆ. ಆದರೆ ಪೂರ್ಣ ಕಾರ್ಯವನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಲ್ಯಾಂಡರ್ ಮತ್ತು ರೋವರ್ ಮಾಡ್ಯೂಲ್‌ಗಳಲ್ಲಿನ ಎಲೆಕ್ಟ್ರಾನಿಕ್ಸ್ ಚಂದ್ರನ ಮೇಲಿನ ಅತ್ಯಂತ ಶೀತ ರಾತ್ರಿ ತಾಪಮಾನವನ್ನು ತಡೆದುಕೊಳ್ಳಲು ವಿನ್ಯಾಸಗೊಳಿಸಲಾಗಿಲ್ಲ. ಒಂದು ವೇಳೆ ಸ್ಲೀಪ್ ಮೋಡ್‌ನಿಂದ ಇಬ್ಬರೂ ಎಚ್ಚರಗೊಂಡರೆ, ಲ್ಯಾಂಡರ್ ಮತ್ತು ರೋವರ್ ಕನಿಷ್ಠ ಮುಂದಿನ 14 ಭೂಮಿಯ ದಿನಗಳವರೆಗೆ ಕೆಲಸ ಮಾಡುವುದನ್ನು ಮುಂದುವರಿಸಬಹುದು.

ಸದ್ಯ ರೋವರ್ 100 ಮೀಟರ್ ದೂರವನ್ನು ಕ್ರಮಿಸಿದೆ. ಚಂದ್ರನನ್ನು ತಲುಪಿದ ನಂತರ, ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಭೂಮಿಯ ಮೇಲಿನ ವಿಜ್ಞಾನಿಗಳಿಗೆ ಅನೇಕ ಪ್ರಮುಖ ಡೇಟಾವನ್ನು ಕಳುಹಿಸಿವೆ. ಈ ಮಾಹಿತಿಯ ಆಧಾರದ ಮೇಲೆ ಚಂದ್ರನಿಗೆ ಸಂಬಂಧಿಸಿದ ಹಲವು ಮಾಹಿತಿಗಳು ಬೆಳಕಿಗೆ ಬಂದಿವೆ.  ಈ ಹಿಂದೆ ಪ್ರಗ್ಯಾನ್ ರೋವರ್ 100 ಮೀಟರ್ ದೂರ ಕ್ರಮಿಸಿದೆ ಎಂದು ಇಸ್ರೋ ತಿಳಿಸಿತ್ತು. ಈ ದೂರವನ್ನು ಕ್ರಮಿಸಲು ರೋವರ್ ಸುಮಾರು 10 ದಿನಗಳನ್ನು ತೆಗೆದುಕೊಂಡಿತ್ತು.

No Comments

Leave A Comment