ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.
ಉಡುಪಿ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿವಿಧ ಸ್ಪರ್ಧೆ
ಉಡುಪಿ: ಪರ್ಯಾಯ ಶ್ರೀ ಕೃಷ್ಣಾಪುರ ಮಠ, ಕೃಷ್ಣ ಮಠದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವ್ಯಕ್ತಿಗತ ಸ್ಪರ್ಧೆ, ಹುಲಿವೇಷ ಕುಣಿತ, ಜಾನಪದ ಸ್ಪರ್ಧೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ಆ. 27ರ ಬೆಳಗ್ಗೆ 8.30ಕ್ಕೆ ಕನಕ ಮಂಟಪದಲ್ಲಿ ರಸಪ್ರಶ್ನೆ ಅನ್ನಬಹ್ಮ ಸಭಾಂಗಣದಲ್ಲಿ ಸಾಂಪ್ರದಾಯಿಕ ಚುಕ್ಕಿರಂಗವಲ್ಲಿ, ಸೆ. 2ರ ಅಪರಾಹ್ನ 2.30ರಿಂದ ಅನ್ನಬ್ರಹ್ಮ, ಮಧ್ವಮಂಟಪ, ರಾಜಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ಸ್ಪರ್ಧೆ ನಡೆಯಲಿದೆ. ಸೆ. 2ರ ಅಪರಾಹ್ನ 2.30ಕ್ಕೆ ಮಧ್ವಮಂಟಪದಲ್ಲಿ ಶಂಖ ಊದುವ ಸ್ಪರ್ಧೆ, ಸೆ. 3ಕ್ಕೆ ಬೆಳಗ್ಗೆ 10.30ರಿಂದ ಮಧ್ವಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಸ್ಪರ್ಧೆ ನಡೆಯಲಿದೆ.
ಸೆ. 6ಕ್ಕೆ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಬೆಳಗ್ಗೆ 9.30ರಿಂದ ಕೃಷ್ಣ್ಣ ವೇಷ ಸ್ಪರ್ಧೆ ಆಯೋಜಿಸಲಾಗಿದೆ. ಮಧ್ವಾಂಗಣದಲ್ಲಿ ಮುದ್ದು ಕೃಷ್ಣ, ಭೋಜನ ಶಾಲೆ ಮಾಳಿಗೆಯಲ್ಲಿ ಬಾಲಕೃಷ್ಣ , ಅನ್ನಬ್ರಹ್ಮದಲ್ಲಿ ಕಿಶೋರ ಕೃಷ್ಣ ಸ್ಪರ್ಧೆ, ಸೆ. 7ರಂದು ವಿಟ್ಲಪಿಂಡಿ ಉತ್ಸವ ಬಳಿಕ ರಾತ್ರಿ 7.30ರಿಂದ ರಾಜಾಂಗಣದಲ್ಲಿ ಜಾನಪದ ಹುಲಿವೇಷ ಕುಣಿತ ಸ್ಪರ್ಧೆ ನಡೆಯಲಿದೆ.
ಆಸಕ್ತರು ಕೃಷ್ಣ್ಣಮಠದ ಬಡಗು ಮಾಳಿಗೆ ಕಚೇರಿ ಯಲ್ಲಿ ಸ್ಪರ್ಧಾದಿನದ ಹಿಂದಿನ ದಿನ ಸಾಯಂಕಾಲ 6 ಗಂಟೆ ಒಳಗೆ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ 0820&2520598 ಸಂಪರ್ಕಿಸಬಹುದು.