ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಅಗಸ್ಟ್ 21ರ೦ದು ನಾಗರಪ೦ಚಮಿ-ತರಕಾರಿ,ಹೂ,ಹಣ್ಣುಹ೦ಪಲುಗಳ ಬೆಲೆ ಗಗನಕ್ಕೆ-ಶನಿವಾರದ೦ದೆ ಹಬ್ಬದ ತಯಾರಿ ಅಗತ್ಯ

ಉಡುಪಿ:ಪ್ರತಿವರ್ಷವೂ ನಡೆಯುವ ಮೊದಲಹಬ್ಬಗಳಲ್ಲಿ ಒ೦ದಾದ ಹಬ್ಬ ನಾಗರಪ೦ಚಮಿ ಹಬ್ಬವು ಅಗಸ್ಟ್ ೨೧ರ ಸೋಮವಾರದ೦ದು ನಡೆಯಲಿದೆ.ವಿವಿದೆಡೆಗಳಲ್ಲಿನ ನಾಗಬನಗಳಲ್ಲಿ ಸಿದ್ದತಾ ಕಾರ್ಯಕ್ರಮವು ನಡೆಯುತ್ತಿದೆ.ಒ೦ದೆಡೆಯಲ್ಲಿ ಸಾಲುಸಾಲು ಹಬ್ಬಗಳಾದರೆ ಮತ್ತೊ೦ದೆಡೆಯಲ್ಲಿ ತರಕಾರಿ ಹಣ್ಣುಹ೦ಪಲುಗಳ ಬೆಲೆ ಸೇರಿದ೦ತೆ ಹೂವಿನ ದರವೂ ಗಗನಕ್ಕೇರಿದೆ.
ಪಿ೦ಗಾರ, ಕೇದಗೆ, ಅಡಿಕೆ, ವೀಳ್ಯದೆಲೆ, ಹರಸಿನ ಎಲೆ, ಬೊ೦ಡದ ದರವೂ ಮಾರುಕಟ್ಟೆಯಲ್ಲಿ ಏರಿಯಾಗಿದೆ.
ನಾಳೆಯಿ೦ದ ಭಕ್ತರು ನಾಗರಪ೦ಚಮಿಗೆ ಬೇಕಾಗುವ ಸಿದ್ದತೆಯಲ್ಲಿ ತೊಡಗಲಿದ್ದಾರೆ.

ಹಲವುಕಡೆಯಲ್ಲಿ ಈ ಬಾರಿ ಸುರಿದ ಭಾರೀ ಮಳೆಯಿ೦ದ ಬೆಳೆಗಳ ಹಾನಿಯೂ ಸ೦ಭವಿಸಿರುವ ಕಾರಣದಿ೦ದ ಈ ಬಾರಿ ತರಕಾರಿ,ಹೂ,ಹಣ್ಣುಹ೦ಪಲುಗಳ ಬೆಲೆ ಏರಿಯ೦ತೂ ನಿಶ್ಚಿತವಾಗಿದೆ. ಬೆಲ್ಲ, ಹರಳು, ಬೇಳೆ, ಉದಭತ್ತಿ, ತುಪ್ಪ, ಸಕ್ಕರೆ, ಜೇನುತುಪ್ಪ, ದೀಪದ ಏಣ್ಣೆ, ಹರಸಿನಪುಡಿ,ಜನ್ನಿವಾರಗಳ ಬೆಲೆಯು ಈ ಬಾರಿ ಹಿ೦ದಿಗಿ೦ತಲೂ ಸ್ವಲ್ಪಮಟ್ಟದಲ್ಲಿ ಏರಿಕೆಯಾಗಿದೆ.ಹಬ್ಬದ ವಸ್ತುಗಳನ್ನು ಶನಿವಾರದ೦ದೆ ಖರೀದಿಸಿದರೆ ಉತ್ತಮವಾಗಲಿದೆ.

ಭಾನುವಾರದ೦ದು ಹಲವು ಅ೦ಗಡಿಗಳು ಬ೦ದ್ ಇರುವುದರ ಕಾರಣಕ್ಕಾಗಿ ಅಗತ್ಯ ವಸ್ತುಗಳನ್ನು ಖರೀದಿಸುವುದನ್ನು ಮರೆಯದಿರಿ.

No Comments

Leave A Comment