ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
ಕಮಿಷನ್ ಸಿಗದೆ ಕಂಗಾಲದ ಕಮಲ ಪಡೆಯ ನಾಯಕರಿಂದ ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆ ಸುಳ್ಳಿನ ಆಪಾದನೆ: ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಕಂಗೆಟ್ಟು ಹೋದ ಬಿಜೆಪಿಯವರು ಹಿಂದೆ ಅಧಿಕಾರದಲ್ಲಿರುವಾಗ ಎಲ್ಲಾದಕ್ಕೂ ಕೂಡ 40 ಶೇಕಡಕ್ಕಿಂತ ಹೆಚ್ಚು ಕಮಿಷನ್ ಹೊಡೆಯುತ್ತಿದ್ದು ಈಗ ಅಧಿಕಾರ ಕಳೆದುಕೊಂಡು ಸಿಗುತ್ತಿರುವ ಕಮಿಷನ್ ಕೂಡ ಸಿಗದೇ ಕಂಗಾಲಾಗಿ ಕೈ ಕೈ ಹಿಸುಕಿಕೊಳ್ಳುತ್ತಿದ್ದು ಏನು ಮಾಡಲು ತೋಚದೆ ಕಾಂಗ್ರೆಸ್ ಪಕ್ಷದ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡಿ ಸುಳ್ಳು ಸುಳ್ಳು ಹೇಳಿಕೆಗಳನ್ನು ನೀಡಿ ನಮ್ಮ ರಾಜ್ಯದ ದೇಶದ ಜನರನ್ನು ಮೋಸಗೊಳಿಸುತ್ತಿದ್ದಾರೆ.
ನಮ್ಮ ರಾಜ್ಯದ ಜನರು ಮತದಾರರು ಪ್ರಭುದ್ಧರಾಗಿದ್ದು ಈ ಬಿಜೆಪಿಯವರ ಯಾವುದೇ ಸುಳ್ಳು ಹೇಳಿಕೆಗಳಿಗೆ ಕಿವಿಗೊಡದೆ ಕಾಂಗ್ರೆಸ್ ಪಕ್ಷ ನೀಡುತ್ತಿರುವ ಗ್ಯಾರಂಟಿಯ ಯನ್ನು ಪಡೆದುಕೊಳ್ಳುವಲ್ಲಿ ಆತುರರಾಗಿದ್ದು ರಾಜ್ಯದಲ್ಲಿ ಈ ಬಿಜೆಪಿಯನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ ಇದರಿಂದಾಗಿ ಈ ರಾಜ್ಯ ಹಾಗೂ ದೇಶದ ಬಿಜೆಪಿಯ ನಾಯಕರುಗಳಿಗೆ ಮುಂದೆ ನಡೆಯುವ ಎಲ್ಲಾ ಚುನಾವಣೆಗಳಲ್ಲಿ ತಮ್ಮ ಸೋಲು ಖಚಿತವೆಂದು ಮನವರಿ ಕೆ ಯಾಗಿದ್ದು ಮಾತ್ರವಲ್ಲದೆ ಸಿಗುತ್ತಿರುವ ಕಮಿಷನ್ ಕೂಡ ಸಿಗದೇ ಹತಾಶರಾಗಿ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಸುಳ್ಳು ಸುಳ್ಳು ಹೇಳಿಕೆಯನ್ನು ನೀಡಿ ರಾಜ್ಯದ ಜನರನ್ನು ಮೋಸಗೊಳಿಸಲು ಯತ್ನಿಸುತ್ತಿದ್ದಾರೆ.
ಕಳೆದ 9 ವರ್ಷಗಳಿಂದ ನಮ್ಮ ದೇಶದ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಮುಂದಿನ ದಿನಗಳಲ್ಲಿ ನಮ್ಮ ದೇಶವನ್ನು ಹಾಗೂ ದೇಶದ ಜನರನ್ನು ಉಳಿಸಿ ಬೆಳೆಸುತ್ತಿರುವ ಕಾಂಗ್ರೆಸ್ ಪಕ್ಷದ ಬಗ್ಗೆ ಆಪಾದನೆ ಮಾಡುವುದನ್ನು ಈ ಬಿಜೆಪಿಯವರು ನಿಲ್ಲಿಸಿದರೆ ಒ ಳಿತು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ಪ್ರತಿಕ್ರಿಯೆ ನೀಡಿರುತ್ತಾರೆ.