ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಇರಾನ್ ಮಣಿಸಿ 7ನೇ ಬಾರಿಗೆ ಏಷ್ಯನ್ ಕಬಡ್ಡಿ ಚಾಂಪಿಯನ್​ಶಿಪ್ ಗೆದ್ದ ಭಾರತ..!

ಸೌತ್ ಕೊರಿಯಾದಲ್ಲಿ ನಡೆದ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ 2023 (Asian Kabaddi Championship 2023)ರ ಫೈನಲ್ ಪಂದ್ಯದಲ್ಲಿ ಇರಾನ್ ತಂಡವನ್ನು 32- 42 ಅಂತರದಿಂದ ಮಣಿಸಿದ ಭಾರತ ಕಬಡ್ಡಿ ತಂಡ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಇದರೊಂದಿಗೆ ಇದುವರೆಗೆ ನಡೆದಿರುವ 11 ಆವೃತ್ತಿಗಳಲ್ಲಿ ಭಾರತ ಒಂದೇ ಬರೋಬ್ಬರಿ 7 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಪವನ್ ಸೆಹ್ರಾವತ್ (Pawan Sehrawat) ನೇತೃತ್ವದಲ್ಲಿ ಚಾಂಪಿಯನ್​ಶಿಪ್​ಗೆ ಎಂಟ್ರಿಕೊಟ್ಟಿದ ಭಾರತ ಆಡಿದ 6 ಪಂದ್ಯಗಳಲ್ಲಿ ಒಂದೇ ಒಂದು ಸೋಲು ಕಾಣದಿರುವುದು ಇಲ್ಲಿ ವಿಶೇಷ. ಅಲ್ಲದೆ ಭಾರತ ಆಟಕ್ಕೆ ಯಾವ ಎದುರಾಳಿ ತಂಡವೂ ನಿಕಟ ಹೋರಾಟ ನೀಡಲು ಸಾಧ್ಯವಾಗಲಿಲ್ಲ. ಆದರೆ ಇರಾನ್ ತಂಡ ಮಾತ್ರ ಎರಡು ಮುಖಾಮುಖಿಯಲ್ಲಿ ಕಡಿಮೆ ಅಂತರದ ಸೋಲನ್ನು ಎದುರಿಸುವಲ್ಲಿ ಕೊಂಚ ಸಫಲವಾಯಿತು.

ಮೊದಲ ದಿನವೇ ಎರಡು ಗೆಲುವು

ಪಂದ್ಯಾವಳಿ ಆರಂಭವಾದ ಮೊದಲ ದಿನದಂದು ಅಂದರೆ ಜೂನ್ 27 ರಂದು ಎರಡು ತಂಡಗಳನ್ನು ಎದುರಿಸಿದ್ದ ಭಾರತ, ಎರಡೂ ತಂಡಗಳನ್ನು ಹೀನಾಯವಾಗಿ ಸೋಲಿಸಿತ್ತು. ಆಡಿದ ಮೊದಲ ಪಂದ್ಯದಲ್ಲಿ ಆತಿಥೇಯ ಕೊರಿಯಾ ತಂಡವನ್ನು 76-13 ಅಂತರಗಳಿಂದ ಹೀನಾಯವಾಗಿ ಸೋಲಿಸಿದ್ದ ಭಾರತ, ಅದೇ ದಿನ ತನ್ನ 2ನೇ ಪಂದ್ಯದಲ್ಲಿ ಚೈನೀಸ್ ತೈಪೆ ತಂಡವನ್ನು 53-20 ಅಂತರದಿಂದ ಸೋಲಿಸಿತ್ತು.

ಕೊಂಚ ಹೋರಾಟ ನೀಡಿದ ಇರಾನ್

ಆ ಬಳಿಕ ತನ್ನ ಮೂರನೇ ಪಂದ್ಯದಲ್ಲಿ ಜೂನ್ 28 ರಂದು ಜಪಾನ್ ತಂಡವನ್ನು ಎದುರಿಸಿದ್ದ ಭಾರತ 62- 17 ರಿಂದ ಜಪಾನ್ ತಂಡವನ್ನು ಮಣಿಸಿತ್ತು. ಆ ಬಳಿಕ ಜೂನ್ 29 ರಂದು ಪಂದ್ಯಾವಳಿಯ ಪ್ರಮುಖ ಎದುರಾಳಿಯಾಗಿದ್ದ ಇರಾನ್ ತಂಡವನ್ನು ನಿಕಟ ಹೋರಾಟದಲ್ಲಿ 33-28 ರಿಂದ ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಅಂತಿಮವಾಗಿ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಹಾಂಗ್​ ಕಾಂಗ್ ತಂಡವನ್ನು 64- 20 ರಿಂದ ಸೋಲಿಸಿದ್ದ ಭಾರತ ಅಜೇಯರಾಗಿ ಫೈನಲ್​ಗೆ ಎಂಟ್ರಿಕೊಟ್ಟಿತ್ತು.

ಭಾರತಕ್ಕೆ ಚಿನ್ನದ ಪದಕ

ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಗೆದ್ದ ವಿಜೇತ ತಂಡಕ್ಕೆ ಬಹುಮಾನವಾಗಿ ಚಿನ್ನದ ಪದಕವನ್ನು ನೀಡಲಾಗುತ್ತದೆ. ಇದರರ್ಥ ಭಾರತಕ್ಕೆ ಇದೀಗ ಚಿನ್ನದ ಪದಕ ಸಿಕ್ಕಿದೆ. ಹಾಗೆಯೇ ರನ್ನರ್ ಅಪ್ ತಂಡದವಾದ ಇರಾನ್​ಗೆ ಬೆಳ್ಳಿ ಪದಕ ಸಿಗಲಿದೆ. 5 ಪಂದ್ಯಗಳಲ್ಲಿ 3 ಪಂದ್ಯ ಗೆದ್ದ ಚೈನೀಸ್ ತೈಪೆ ಕಂಚಿನ ಪದಕವನ್ನು ಪಡೆಯಲ್ಲಿದೆ.

ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಇತಿಹಾಸ

ಇನ್ನು ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಬಗ್ಗೆ ಹೇಳಬೇಕೆಂದರೆ ಮೊದಲ ಬಾರಿಗೆ ಈ ಪಂದ್ಯಾವಳಿಯನ್ನು 1980 ರಲ್ಲಿ ಪ್ರಾರಂಭಿಸಲಾಯಿತು. ಈ ಪಂದ್ಯಾವಳಿಯಲ್ಲಿ ಹೆಸರೇ ಸೂಚಿಸಿರುವಂತೆ ಏಷ್ಯಾ ಖಂಡದ ವಿವಿಧ ದೇಶಗಳು ಭಾಗವಹಿಸುತ್ತವೆ. ಇದುವರೆಗೆ ಈ ಚಾಂಪಿಯನ್​ಶಿಪ್​ನಲ್ಲಿ 11 ಆವೃತ್ತಿಗಳು ನಡೆದಿದ್ದು, ಇದರಲ್ಲಿ ಏಳು ಬಾರಿ ಭಾರತ ಚಿನ್ನದ ಪದಕಗಳನ್ನು ಗೆದ್ದ ದಾಖಲೆ ಬರೆದಿದೆ.

6 ತಂಡಗಳ ನಡುವೆ ಪೈಪೋಟಿ

ಹಾಗೆಯೇ ಈ ಆವೃತ್ತಿಯ ಬಗ್ಗೆ ಹೇಳುವುದಾದರೆ, ಜೂನ್ 27 ರಿಂದ ಆರಂಭವಾದ ಈ ಪಂದ್ಯಾವಳಿ ನಾಲ್ಕು ದಿನಗಳ ಕಾಲ ಅಂದರೆ, ಜೂನ್ 30ರವರೆಗೆ ನಡೆಯಿತು. ಒಟ್ಟು ಆರು ತಂಡಗಳು ಪಂದ್ಯಾವಳಿಗೆ ಪ್ರವೇಶಿಸಿದ್ದವು. ಇವುಗಳಲ್ಲಿ ಭಾರತ, ಇರಾನ್, ಸೌತ್ ಕೊರಿಯಾ, ಜಪಾನ್, ಹಾಂಗ್​ ಕಾಂಗ್, ಚೈನೀಸ್ ತೈಪೆ ತಂಡಗಳು ಸೇರಿದ್ದವು. ಲೀಗ್ ಹಂತದಲ್ಲಿ ಭಾರತ ಆಡಿದ 5 ರಲ್ಲಿ ಐದು ಪಂದ್ಯಗಳನ್ನು ಗೆದ್ದು ಫೈನಲ್​ಗೆ ಎಂಟ್ರಿಕೊಟ್ಟಿತ್ತು. ಇತ್ತ ಇರಾನ್ ಕೂಡ ಒಟ್ಟು ಐದು ಪಂದ್ಯಗಳನ್ನು ಆಡಿದ್ದು, ನಾಲ್ಕರಲ್ಲಿ ಗೆದ್ದು ಫೈನಲ್ ತಲುಪಿತ್ತು.

kiniudupi@rediffmail.com

No Comments

Leave A Comment