ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಉಡುಪಿ-ಪುತ್ತೂರು ಬ೦ಟರ ಸ೦ಘದ ಆಶ್ರಯದಲ್ಲಿ ವಿದ್ಯಾರ್ಥಿಪ್ರೋತ್ಸಾಹ ಧನ ವಿತರಣೆ(31Pic)
ಉಡುಪಿ:ಉಡುಪಿ-ಪುತ್ತೂರು ಬ೦ಟರ ಸ೦ಘದ ಆಶ್ರಯದಲ್ಲಿ ಪಿಯುಸಿ-ಎಸ್ಎಸ್ಎಲ್ ಸಿಯಲ್ಲಿ ಉತ್ತಮ ಅ೦ಕವನ್ನುಗಳಿಸಿದ ಸುಮಾರು 14ಮ೦ದಿ ಬ೦ಟ ಸಮಾಜ ಬಾ೦ಧವರ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಗುರುವಾರದ೦ದು ಅ೦ಬಾಗಿಲಿನ ಪುತ್ತೂರಿನ ಅ೦ಬೇಡ್ಕರ್ ಸಭಾಭವನದಲ್ಲಿ ನಡೆಸಲಾದ “ವಿದ್ಯಾರ್ಥಿಪ್ರೋತ್ಸಾಹಧನ”ವಿತರಣೆ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಸ೦ಘದ ಅಧ್ಯಕ್ಷರಾದ ಶ೦ಕರ್ ಶೆಟ್ಟಿಯವರ ನೇತೃತ್ವದಲ್ಲಿ ನಡೆಸಲಾದ ಈ ಸಮಾರ೦ಭದಲ್ಲಿ ಸ೦ಘದ ಶೈಕ್ಷಣಿಕ ಸ೦ಚಾಲಕರಾದ ಭರತ್ ಶೆಟ್ಟಿ, ಉಪಾಧ್ಯಕ್ಷರಾದ ಮನೋಹರ ಶೆಟ್ಟಿ,ಕೋಶಾಧಿಕಾರಿಗಳಾದ ಶ್ರೀಕಾ೦ತ್ ಶೆಟ್ಟಿ, ಸ೦ಘಟಕನಾ ಕಾರ್ಯದರ್ಶಿಉಮೇಶ್ ಶೆಟ್ಟಿ ಉಪಸ್ಥಿತರಿದರು.
ಸ೦ಘದ ಸ೦ಘಟನಾ ಕಾರ್ಯದರ್ಶಿ ಜಯಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯದರ್ಶಿಗಳಾದ ಈಶ್ವರ ಶೆಟ್ಟಿ ಚಿಟ್ಪಾಡಿಯವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಉಪಾಧ್ಯಕ್ಷರಾದ ಪುರ೦ದರ ಶೆಟ್ಟಿರವರು ವ೦ದಿಸಿದರು.