Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ವಿಕಿಪೀಡಿಯಾವನ್ನು ಎಡಪಂಥೀಯರು ಹೈಜಾಕ್ ಮಾಡಿದ್ದಾರೆ: ನಟಿ ಕಂಗನಾ ರಣಾವತ್

ಮುಂಬೈ: ನಟಿ ಕಂಗನಾ ರಣಾವತ್ ತಮ್ಮ ಜನ್ಮದಿನ ಮತ್ತು ಹಿನ್ನೆಲೆಯ ಮಾಹಿತಿಯು ವಿರೂಪವಾಗಿರುವುದರಿಂದ ಮಾಹಿತಿ ಆಧಾರಿತ ವೆಬ್‌ಸೈಟ್ ವಿಕಿಪೀಡಿಯಾವನ್ನು ‘ಎಡಪಂಥೀಯರು ಸಂಪೂರ್ಣವಾಗಿ ಹೈಜಾಕ್ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

ಕಂಗನಾ ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಹೇಳಿದ್ದು, ನನ್ನ ಜನ್ಮದಿನವು ಮಾರ್ಚ್ 23 ರಂದು ಬರುತ್ತದೆ. ಆದರೆ, ವೆಬ್‌ಸೈಟ್‌ನಲ್ಲಿ ಮಾರ್ಚ್ 20ರಂದು ಎಂದಿದೆ ಎಂದು ಹೇಳಿದರು.

‘ವಿಕಿಪೀಡಿಯಾವನ್ನು ಎಡಪಂಥೀಯರು ಸಂಪೂರ್ಣವಾಗಿ ಹೈಜಾಕ್ ಮಾಡಿದ್ದಾರೆ. ನನ್ನ ಜನ್ಮದಿನ ಅಥವಾ ನನ್ನ ಎತ್ತರ ಅಥವಾ ಹಿನ್ನೆಲೆಯಂತಹ ನನ್ನ ಬಗೆಗಿನ ಹೆಚ್ಚಿನ ಮಾಹಿತಿಯು ಸಂಪೂರ್ಣವಾಗಿ ತಪ್ಪಾಗಿದೆ… ನಾವು ಅದನ್ನು ಸರಿಪಡಿಸಲು ಎಷ್ಟು ಪ್ರಯತ್ನಿಸಿದರೂ, ಅದು ಮತ್ತೆ ವಿರೂಪಗೊಳ್ಳುತ್ತದೆ….’ ಎಂದು ಆರೋಪಿಸಿದ್ದಾರೆ.

ಆದರೆ, ಅನೇಕ ರೇಡಿಯೋ ಚಾನೆಲ್‌ಗಳು, ಅಭಿಮಾನಿಗಳ ಕ್ಲಬ್‌ಗಳು ಮತ್ತು ಹಿತೈಷಿಗಳು ಮಾರ್ಚ್ 20ಕ್ಕೆ ನನಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸಲು ಪ್ರಾರಂಭಿಸುತ್ತಾರೆ… ಎಂದಿದ್ದಾರೆ.

ಕಂಗನಾ ಈಗಷ್ಟೇ ‘ಚಂದ್ರಮುಖಿ 2’ ಚಿತ್ರೀಕರಣವನ್ನು ಮುಗಿಸಿದ್ದಾರೆ. ‘ಎಮರ್ಜೆನ್ಸಿ’, ‘ತೇಜಸ್’, ‘ಮಣಿಕರ್ಣಿಕಾ ರಿಟರ್ನ್ಸ್: ದಿ ಲೆಜೆಂಡ್ ಆಫ್ ದಿಡ್ಡಾ’ ಮತ್ತು ‘ದಿ ಇನ್ಕಾರ್ನೇಷನ್: ಸೀತಾ’ ಮುಂತಾದ ಚಿತ್ರಗಳು ಕಂಗನಾ ಅವರ ಕೈಯಲ್ಲಿವೆ.

No Comments

Leave A Comment