ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಡಬ್ಲ್ಯುಪಿಎಲ್ 2023: ಕೊನೆಗೂ ಗೆಲುವಿನ ಖಾತೆ ತೆರೆದ ಆರ್ ಸಿಬಿ, ಯುಪಿ ವಿರುದ್ಧ 5 ವಿಕೆಟ್ ಗಳ ಜಯ

ನವಿ ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್-2023) ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್ ಸಿಬಿ ಕೊನೆಗೂ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.

ನವಿ ಮುಂಬೈ ನಲ್ಲಿ ನಡೆದ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡದ ವಿರುದ್ಧ ಆರ್ ಸಿಬಿ 5 ವಿಕೆಟ್ ಗಳ ಜಯ ಗಳಿಸಿದೆ. ಆರ್ ಸಿಬಿ ಈ ವರೆಗೂ ಟೂರ್ನಿಯಲ್ಲಿ 5 ಪಂದ್ಯಗಳನ್ನು ಸೋತಿದ್ದು ಒಂದು ಪಂದ್ಯವನ್ನು ಗೆದ್ದಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆರ್ ಸಿಬಿ ತಂಡದ ಬೌಲರ್ ಗಳು ಪಂದ್ಯದ ಮೇಲೆ ಉತ್ತಮ ಹಿಡಿತ ಸಾಧಿಸಿದರು. ಪರಿಣಾಮ 19.3 ಓವರ್ ಗಳಲ್ಲಿ ಉತ್ತರ ಪ್ರದೇಶ ತಂಡ 135 ರನ್ ಗಳಿಗೆ ಸರ್ವಪತನ ಕಂಡಿತು.

ಬ್ಯಾಟಿಂಗ್ ವಿಭಾಗದಲ್ಲಿ ಆರ್ ಸಿಬಿಯ ಆರಂಭಿಕ ಆಟಗಗಾರರು ಎಡವಿದರಾದರೂ ಮಧ್ಯಮ ಕ್ರಮಾಂಕದ ಕನಿಕಾ ಅಹುಜಾ (30 ಎಸೆತಗಳಲ್ಲಿ 46 ರನ್) ಬ್ಯಾಟಿಂಗ್ ಪರಿಣಾಮ ಆರ್ ಸಿಬಿ ಸುಲಭವಾಗಿ ಗೆಲುವನ್ನು ದಕ್ಕಿಸಿಕೊಂಡಿತು. ರಿಚಾ ಘೋಷ್ ಅವರೊಂದಿಗಿನ ಅಹುಜಾ ಅವರ 60 ರನ್ ಗಳ ಜೊತೆಯಾಟ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.

ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ (WPL 2023) ಸತತ 5 ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ಆರ್‌ಸಿಬಿ ತಂಡ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ.

No Comments

Leave A Comment