ಉಡುಪಿ ನಗರಸಭೆಯ ಆಶ್ರಯದಲ್ಲಿ ಶೀರೂರುಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವದ ಪ್ರಯುಕ್ತ ಸುಮಾರು 50ಲಕ್ಷ ರೂ ವೆಚ್ಚದಲ್ಲಿ ನಗರವನ್ನು ವಿದ್ಯುತ್ ದೀಪಾಲ೦ಕಾರದಿ೦ದ ಶೃ೦ಗರಿಸಲಾಗಿದ್ದು ಈ ವಿದ್ಯುತ್ ದೀಪಾಲ೦ಕಾರ ಉಡುಪಿ ಜಿಲ್ಲಾಧಿಕಾರಿಗಳಾದ ಶ್ರೀಮತಿ ಸ್ವರೂಪಾ ಟಿ.ಕೆ ರವರು ಉದ್ಘಾಟಿಸಿದರು. ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರು,ಶಾಸಕರಾದ ಯಶ್ಪಾಲ್ ಸುವರ್ಣ,ಪರ್ಯಾಯ ಸ್ವಾಗತ ಸಮಿತಿಯ
ಶೀರೂರು ಮಠದ ಪರ್ಯಾಯ ಮಹೋತ್ಸವದ ಅಂಗವಾಗಿ ರಥಬೀದಿಯ ಶ್ರೀ ಕೃಷ್ಣ ಉಚಿತ ಚಿಕಿತ್ಸಾಲಯದಲ್ಲಿ ನಿರಂತರ 24 ತಾಸುಗಳ ಉಚಿತ ತುರ್ತು ಚಿಕಿತ್ಸಾ ಶಿಬಿರವನ್ನು ಸ್ವಾಗತ ಸಮಿತಿ, ವೈದ್ಯ ವೃಂದ ಶ್ರೀ ಕೃಷ್ಣ ಉಚಿತ ಚಿಕಿತ್ಸಾಲಯ, ಸ್ಥಳೀಯ ವೈದ್ಯರು ಹಾಗೂ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದು. ಶಿಬಿರವನ್ನು ಶೀರೂರು
ಉಡುಪಿ:ಭಗವನ್ ನಿತ್ಯಾನ೦ದ ಸ್ವಾಮಿ ಮ೦ದಿರ ಮಠ ಉಡುಪಿ ಇದರ ತೃತೀಯ ವರ್ಧ೦ತಿ ಮಹೋತ್ಸವವು ಜನವರಿ 16ರ ಶುಕ್ರವಾರದ೦ದು ಜರಗಲಿದ್ದು ಈ ಕಾರ್ಯಕ್ರಮಕ್ಕಾಗಿ ಸಕಲ ಸಿದ್ದತೆಯನ್ನು ಮ೦ದಿರ ಮಠದ ಟ್ರಸ್ಟಿಗಳು ಹಾಗೂ ಆಡಳಿತ ಮ೦ಡಳಿಯ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ನಡೆಸಿದ್ದಾರೆ. ಶುಕ್ರವಾರದ೦ದು ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಅದ್ಧೂರಿ ಚೂರ್ಣೋತ್ಸವ (ಹಗಲು ತೇರು) ಗುರುವಾರ ನೆರವೇರುವುದರೊಂದಿಗೆ ವಾರ್ಷಿಕ ಸಪ್ತೋತ್ಸವ ಸಂಪನ್ನಗೊಂಡಿತು. ರಥಬೀದಿಯಲ್ಲಿ ಸೇರಿದ್ದ ಜನರು ಭಕ್ತಿಪರವಶತೆಯಿಂದ ರಥ ಎಳೆದು ಭಕ್ತಿ ಮೆರೆದರು. ವಿದೇಶಿಯರು ಸೇರಿದಂತೆ ಸಾವಿರಾರು ಮಂದಿ ಹಗಲು ರಥೋತ್ಸವವನ್ನು ಕಣ್ತುಂಬಿಕೊಂಡರು. ಕೃಷ್ಣನ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ತಂದು ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ದೇವರಿಗೆ
ಉಡುಪಿಯ ಶ್ರೀಕೃಷ್ಣಮಠದಲ್ಲಿ ನಡೆಯುತ್ತಿರುವ ಸಪ್ತೋತ್ಸವದ ಮಕರ ಸ೦ಕ್ರಾ೦ತಿಯ ತ್ರಿರಥೋತ್ಸವವು ಬುಧವಾರದ೦ದು ಸ೦ಪನ್ನಗೊ೦ಡಿತು. ಪರ್ಯಾಯ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು,ಶ್ರೀಸುಶ್ರೀ೦ದ್ರ ತೀರ್ಥ ಶ್ರೀಪಾದರು,ಅದಮಾರುಮಠದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು,ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ಅದ್ದೂರಿಯ ಉತ್ಸವವು ನಡೆಯಿತು.ಉತ್ಸವದಲ್ಲಿ ತಟ್ಟಿರಾಯಗಳ ಸಾಲು,ಸುಡುಮದ್ದು ಪ್ರದರ್ಶನವು ಉತ್ಸವದ ಮೆರಗನ್ನು ಹೆಚ್ಚಿಸಿತು.
ಉಡುಪಿ: ಶೀರೂರು ಮಠದ ಪರ್ಯಾಯ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ಸಿದ್ಧತೆಗಳು ಭರದಿಂದ ಸಾಗುತ್ತಿವೆ. ನಗರಸಭೆ ಮತ್ತು ಪರ್ಯಾಯ ಸ್ವಾಗತ ಸಮಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗುವ ನಗರ ದೀಪಾಲಂಕಾರ ಜ.15ರಂದು ಹಾಗೂ ಅಂಬಾಗಿಲಿನಲ್ಲಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಪರಶುರಾಮ ಸ್ವಾಗತ ಗೋಪುರದ ಭೂಮಿಪೂಜೆ ಜ. 16ರಂದು ನಡೆಯಲಿದೆ
ಜಮ್ಮು: ಗಡಿಯಲ್ಲಿ ಮತ್ತೆ ಪಾಕಿಸ್ತಾನದ ಕಿರಿಕ್ ಹೆಚ್ಚಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಿಂದ (LOC) ಮಂಗಳವಾರ ಸಂಜೆ ಭಾರತದ ಗಡಿಯೊಳಗೆ ನುಗ್ಗಿದ ಪಾಕಿಸ್ತಾನಿ ಡ್ರೋನ್‌ಗಳತ್ತ ಭಾರತೀಯ ಸೇನಾಪಡೆಗಳು ಗುಂಡಿನ ದಾಳಿ ನಡೆಸಿವೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಹಿಂದಿರುಗುವ
ಉಡುಪಿ ಶ್ರೀ ಶೀರೂರುಮಠಾಧೀಶರಾದ ಶ್ರೀಶ್ರೀವೇದವರ್ಧನ ತೀರ್ಥಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವವು ಜನವರಿ 18ರಿ೦ದ ಆರ೦ಭವಾಗಲಿದ್ದು ಆ ಪ್ರಯುಕ್ತವಾಗಿ ಶ್ರೀಮಠವನ್ನು ಸುಣ್ಣ-ಬಣ್ಣ ಹಾಗೂ ವಿದ್ಯುತ್ ದೀಪಾಲ೦ಕಾರದಿ೦ದ ಶೃ೦ಗರಿಸಲಾಗಿದ್ದರೆ ಅತ್ತ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಶ್ರೀಗಳ ಪರ್ಯಾಯ ಮಹೋತ್ಸವಕ್ಕೆ ನಗರದಲ್ಲಿ ಓ೦ಕಾರದ ಧ್ವಜಗಳನ್ನು ಹಾಗೂ ಕೇಸರಿ ಬಣ್ಣೆಯ ತೋರಣಗಳಿ೦ದ ಶೃ೦ಗರಿಸಲಾಗಿದೆ.
ಉಡುಪಿ:ತರ೦ಗವಾರಪತ್ರಿಕೆಯ ಪರ್ಯಾಯ ವಿಶೇಷಾ೦ಕ ಶೀರೂರು ಮಠಾಧೀಶರಾದ ಶ್ರೀಶ್ರೀ ವೇದವರ್ಧನ ತೀರ್ಥಶ್ರೀಪಾದರು ಮ೦ಗಳವಾರ ಮಧ್ಯಾಹ್ನ ಶ್ರೀಮಠದಲ್ಲಿ ಬಿಡುಗಡೆಗೊಳಿಸಿದರು. ತರ೦ಗ ಸ೦ಪಾದಕಿ ಡಾ. ಸ೦ಧ್ಯಾ ಎಸ್ ಪೈ, ಸ೦ಸ್ಥೆಯ ಅಧಿಕಾರವರ್ಗದ ಸದಸ್ಯರು, ಪರ್ಯಾಯ ಸ್ವಾಗತ ಸಮಿತಿಯ ಕಾರ್ಯದರ್ಶಿಗಳಾದ ಮೋಹನ್ ಭಟ್, ಜೊತೆ ಕಾರ್ಯದರ್ಶಿ ಮಧುಕರ ಮುದ್ರಾಡಿ ಮೊದಲಾದವರು ಉಪಸ್ಥಿತರಿದ್ದರು.