Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಚೆನ್ನೈ: ಭಾರತದ ಮೊದಲ ಖಾಸಗಿ ಉಡಾವಣಾ ವಾಹನ ವಿಕ್ರಮ್-ಎಸ್ ಶುಕ್ರವಾರ ಚೆನ್ನೈಯಿಂದ 100 ಕಿಲೋ ಮೀಟರ್ ದೂರದಲ್ಲಿರುವ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ(ಇಸ್ರೋ) ಮತ್ತು ಹೈದರಾಬಾದ್ ನ ಅಂತರಿಕ್ಷ ತಾಂತ್ರಿಕ ಕಂಪೆನಿ ಸ್ಕೈರೂಟ್ ಏರೋಸ್ಪೇಸ್ ಮಿಷನ್ ಪ್ರಾರಂಭ ಯಶಸ್ವಿಯಾಗಿದೆ ಎಂದು ಖುಷಿಯಿಂದ ಹೇಳಿಕೊಂಡಿವೆ.

ಉಡುಪಿ: ಇತಿಹಾಸ ಪ್ರಸಿದ್ಧ ಉಡುಪಿಯ ಶ್ರೀಚ೦ದ್ರಮೌಳೀಶ್ವರ ದೇವರಸನ್ನಿಧಿಯಲ್ಲಿ ಇದೇ ಕಾರ್ತಿಕ ಕೃಷ್ಣ ಪಕ್ಷ 13ಯು ದಿನಾ೦ಕ ನವೆ೦ಬರ್ 22ರ ಮ೦ಗಳವಾರ ಮೊದಲ್ಗೊ೦ಡು ಮಾರ್ಗಶಿರ ಶುಕ್ಲಪಕ್ಷ 4ಯು ದಿನಾ೦ಕ 27ರ ರವಿವಾರದವರೆಗೆ ಕಾಲಾವಧಿ ರಥೋತ್ಸವ ಪರ೦ಪರಾಗತ ಶುಭ ಸ೦ಪ್ರದಾಯಾನುಸಾರವಾಗಿ ಧಾರ್ಮಿಕ ಕಾರ್ಯಕ್ರಮಗಳೊ೦ದಿಗೆ ನಡೆಯಲಿದೆ. ನವೆ೦ಬರ್ 22ರ ಮ೦ಗಳವಾರದ೦ದು ಸಾಯ೦ಕಾಲ ಪ್ರಾರ್ಥನೆ, ಮುಹೂರ್ತಬಲಿ,

ಬಂಟ್ವಾಳ, ನ 17. ಬೈಕ್ ಸ್ಕಿಡ್ ಆಗಿ ರಸ್ತೆ ಬದಿಯ ಡಿವೈಡರ್ ಗೆ ಢಿಕ್ಕಿ ಹೊಡೆದು ತಲೆಗೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಸವಾರನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನ.೧೬ರ ಗುರುವಾರ ನಡೆದಿದೆ. ಕಳ್ಳಿಗೆ ನಿವಾಸಿ ಮುಜಾಮಿಲ್ (18) ಮೃತಪಟ್ಟ ಯುವಕ. ನ. 9 ರಂದು ರಾತ್ರಿ ವೇಳೆ

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ಧಾಳ ಕೊಲೆ ಆರೋಪಿ ಆಫ್ತಾಬ್ ಅಮೀನ್ ಪೂನಾವಾಲಾನನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಿಸಿಕೊಳ್ಳಲು ದೆಹಲಿಯ ನ್ಯಾಯಾಲಯವೊಂದು ಗುರುವಾರ ಅನುಮತಿ ನೀಡಿದೆ. ಆರೋಪಿಯನ್ನು ಮಾದಕ ದ್ರವ್ಯ ಸೇವನೆ (ನಾರ್ಕೋ) ಪರೀಕ್ಷೆಗೆ ಒಳಪಡಿಸಲು ಅವಕಾಶ ನೀಡಿದೆ. ಈ ಸಂಬಂಧ ಪೊಲೀಸರ ಮನವಿಗೆ ಸಮ್ಮತಿಸಿ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಅವಿರಾಲ್

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಅನ್ ಲೈನ್ ಅಥವಾ VHA(Voter Helpline App) ಮುಖೇನಾ ಅರ್ಜಿಗಳನ್ನು ಸಲ್ಲಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಿರ್ವಹಿಸಲು ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಅನುಮತಿ ನೀಡಲಾಗಿತ್ತು. ಆದರೆ, ಸದರಿ ಸಂಸ್ಥೆಯು ಪತ್ರದಲ್ಲಿ ವಿಧಿಸಲಾಗಿದ್ದ ಷರತ್ತುಗಳನ್ನು

ಅಕೋಲ: ಕಾಂಗ್ರೆಸ್ ಮಿತ್ರ ಪಕ್ಷದ ಭಾಗವಾಗಿರುವ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ತಾವು ಸಾವರ್ಕರ್ ವಿಷಯದಲ್ಲಿ ರಾಹುಲ್ ಗಾಂಧಿ ಅವರ ನಿಲುವುಗಳನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟನೆ ನೀಡಿರುವುದರ ನಡುವೆ ರಾಹುಲ್ ಗಾಂಧಿ ಸಾವರ್ಕರ್ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿರುವ ರಾಹುಲ್ ಗಾಂಧಿ "ವಿನಾಯಕ ದಾಮೋದರ್

ಲಂಡನ್: ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಅವರು ಪ್ರಾರಂಭಿಸಿರುವ ಹೊಸ ಬ್ರಿಟನ್-ಭಾರತ ಯುವ ವೃತ್ತಿಪರರ ವೀಸಾ ಯೋಜನೆಯನ್ನು ಉದ್ಯಮ ವಲಯ ಮತ್ತು ವಿದ್ಯಾರ್ಥಿ ವಲಯ ಸ್ವಾಗತಿಸಿದ್ದು, ಮಾರುಕಟ್ಟೆಗಳ ನಡುವೆ ಉನ್ನತ ಪ್ರತಿಭೆಗಳ ಸುಗಮ ಚಲನೆಯನ್ನು ಖಾತ್ರಿಪಡಿಸುವಲ್ಲಿ ಇದು ಉತ್ತಮ ಹೆಜ್ಜೆ ಎಂದು ಪ್ರಶಂಸಿಸಿದ್ದಾರೆ. ಬುಧವಾರದಂದು ಘೋಷಣೆ ಮಾಡಲಾದ ಈ

ಮಂಡ್ಯ: ನಾನು ಮಂಡ್ಯ ಬಿಟ್ಟು  ಹೋಗುತ್ತೇನೆ ಎಂದು ಕೆಲವರು ಹಗಲುಗನಸು ಕಾಣುತ್ತಿದ್ದಾರೆ. ಆದರೆ  ರಾಜಕೀಯ ಬಿಡುತ್ತೇನೆಯೇ ಹೊರತು  ಮಂಡ್ಯವನ್ನಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ. ಮದ್ದೂರಿನಲ್ಲಿ ಮಾತನಾಡಿದ ಅವರು, ರಾಜಕೀಯ ಬಿಟ್ಟರೂ ನಾನು ಮಂಡ್ಯ ಬಿಡಲ್ಲ

ಮಂಡ್ಯ: ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ಮಂಡ್ಯದಲ್ಲಿ (Mandya) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಅಣಕು ಶವಯಾತ್ರೆ ಮಾಡಿದರು. ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಸಂಜಯ ವೃತ್ತದವರೆಗೆ ಶವಯಾತ್ರೆ ನಡೆಸಿದರು. ಸಂಜಯ ವೃತ್ತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಧರಣಿ ಕೂತರು. ಹೆದ್ದಾರಿಯಲ್ಲಿ