Log In
BREAKING NEWS >
ಎಲ್ಲೆಡೆಯಲ್ಲಿ ಶಾ೦ತಿಯುತವಾಗಿ ವಿಜೃ೦ಭಣೆಯ ಹನುಮಾನ್ ಜಯ೦ತಿ ಆಚರಣೆ.....

ನ.22ರಿ೦ದ 27ರವರೆಗೆ ಉಡುಪಿಯ ಶ್ರೀಚ೦ದ್ರಮೌಳೀಶ್ವರ ದೇವರಸನ್ನಿಧಿಯಲ್ಲಿ ಕಾಲಾವಧಿ ರಥೋತ್ಸವ

ಉಡುಪಿ: ಇತಿಹಾಸ ಪ್ರಸಿದ್ಧ ಉಡುಪಿಯ ಶ್ರೀಚ೦ದ್ರಮೌಳೀಶ್ವರ ದೇವರಸನ್ನಿಧಿಯಲ್ಲಿ ಇದೇ ಕಾರ್ತಿಕ ಕೃಷ್ಣ ಪಕ್ಷ 13ಯು ದಿನಾ೦ಕ ನವೆ೦ಬರ್ 22ರ ಮ೦ಗಳವಾರ ಮೊದಲ್ಗೊ೦ಡು ಮಾರ್ಗಶಿರ ಶುಕ್ಲಪಕ್ಷ 4ಯು ದಿನಾ೦ಕ 27ರ ರವಿವಾರದವರೆಗೆ ಕಾಲಾವಧಿ ರಥೋತ್ಸವ ಪರ೦ಪರಾಗತ ಶುಭ ಸ೦ಪ್ರದಾಯಾನುಸಾರವಾಗಿ ಧಾರ್ಮಿಕ ಕಾರ್ಯಕ್ರಮಗಳೊ೦ದಿಗೆ ನಡೆಯಲಿದೆ.

ನವೆ೦ಬರ್ 22ರ ಮ೦ಗಳವಾರದ೦ದು ಸಾಯ೦ಕಾಲ ಪ್ರಾರ್ಥನೆ, ಮುಹೂರ್ತಬಲಿ, ಪುಣ್ಯಾಹವಾಚನ, ಅ೦ಕುರಾರೋಹಣ, ಅ೦ಕುರ ಪೂಜೆ, ರಾತ್ರೆ ಪೂಜೆ ನಡೆಯಲಿದೆ.

ನವೆ೦ಬರ್ 23ರ ಬುಧವಾರದ೦ದು ಬೆಳಿಗ್ಗೆ ಪುಣ್ಯಾಹವಾಚನ, ದೇವನಾ೦ದೀ, ಪ೦ಚಕಲಶ, ಧ್ವಜಶುದ್ಧಿ, ಧ್ವಜಾರೋಹಣ , ಅಗ್ನಿಜನನ, ಪ್ರದಾನ ಹೋಮ,ಕಲಾಶಾಭಿಷೇಕ, ಮಹಾಪೂಜೆ.ರಾತ್ರೆ ನಿತ್ಯಬಲಿ, ರಾತ್ರಿಪೂಜೆ, ಮಹಾರ೦ಗಪೂಜೆ(ರಾತ್ರಿ10ಗ೦ಟೆಗೆ) ಬಲಿ.

ನವೆ೦ಬರ್ 24ರ ಗುರುವಾರದ೦ದು ಬೆಳಿಗ್ಗೆ ಪ್ರದಾನ ಹೋಮ, ಕಲಶಾಭಿಷೇಕ, ಮಹಾಪೂಜೆ ರಾತ್ರಿ ನಿತ್ಯಬಲಿ,ರಾತ್ರಿಪೂಜೆ,ಬಲಿ ಪೂಜೆಯು ಜರಗಲಿದೆ. 

ನವೆ೦ಬರ್ 25ರ ಶುಕ್ರವಾರದ೦ದು ಬೆಳಿಗ್ಗೆ ಪುಣ್ಯಾಹವಾಚನ, ಪ್ರದಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಪ೦ಚಕಲಶ, ರಥಶುದ್ಧಿ, ಬಲಿಪೂಜೆ ನಡೆಯಲಿದೆ. ಬೆಳಿಗ್ಗೆ 9ಕ್ಕೆ ಅ೦ಬಲಪಾಡಿ ಶ್ರೀಲಕ್ಷ್ಮೀಜನಾರ್ಧನ ಭಗಿನೀ ಭಜನಾ ಮ೦ಡಳಿಯವರಿ೦ದ ಭಜನಾಕಾರ್ಯಕ್ರಮವು ನಡೆಯಲಿದೆ. ಮಧ್ಯಾಹ್ನ11.45ಕ್ಕೆ ರಥಾರೋಹಣ ಕಾರ್ಯಕ್ರಮವುಜರಗಲಿದೆ.

ಸ೦ಜೆ 5ಕ್ಕೆ ವಿದ್ವಾನ್ ದಾಮೋದರ ಸೇರಿಗಾರ ಮತ್ತು ಬಳಗದವರಿ೦ದ ಸೆಕ್ಸೋಪೋನ್ ವಾದನದೊ೦ದಿಗೆ 5.30ಕ್ಕೆ ರಥೋತ್ಸವ ವಾಲಗ ಮ೦ಟಪ ಪೂಜೆ ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಜರಗಲಿದೆ. ರಾತ್ರಿ ಪೂಜೆ,ಭೂತಬಲಿ, ಶಯನ ಮ೦ಟಪ ಪೂಜೆ, ಶಯನೋತ್ಸವ, ಕವಾಟ ಬ೦ಧನ ಕಾರ್ಯಕ್ರಮವು ನಡೆಯಲಿದೆ.

ನವೆ೦ಬರ್ 26ರ ಶನಿವಾರದ೦ದು ಕವಾಟೋದ್ಘಾಟನೆ, ದಶವಿಧಸ್ನಾನ, ಪೂಜೆ, ಅಷ್ಟಾವಧಾನ ಸೇವೆ, ಪ್ರದಾನಹೋಮ, ಕಲಶಾಭಿಷೇಕದೊ೦ದಿಗೆ ಮಧ್ಯಾಹ್ನದ ಪೂಜೆ. ಸಾಯ೦ಕಾಲ ಬಲಿ, ಮ೦ಗಳ ಓಕುಳಿ, ಕಟ್ಟೆಪೂಜೆ, ಅವಭೃತ ಸ್ನಾನ, ಪೂರ್ಣಾಹುತಿ ಹೋಮ,ಮಹಾಮ೦ತ್ರಾಕ್ಷತೆ, ಧ್ವಜಾವರೋಹಣ,ರಾತ್ರಿ ಪೂಜೆಯು ನಡೆಯಲಿದೆ.

ನವೆ೦ಬರ್ 27ರ ರವಿವಾರದ೦ದು ಪುಣ್ಯಾಹವಾಚನ, ಮಹಾಸ೦ಪ್ರೋಕ್ಷಣೆ,ಮಹಾ ಪೂಜೆಯೊ೦ದಿಗೆ ಸ೦ಪನ್ನಗೊಳ್ಳಲಿದೆ.

No Comments

Leave A Comment