ಖ್ಯಾತ ಗಾಯಕಿ ಎಸ್ ಜಾನಕಿಗೆ ಪುತ್ರ ಶೋಕ: ಹಠಾತ್ ಹೃದಯಾಘಾತಕ್ಕೆ ಬಲಿಯಾದ ಮುರಳಿ ಕೃಷ್ಣ!......

ನವದೆಹಲಿ: ಜ.27: ಭಾರತ ಮತ್ತು ಯೂರೋಪಿಯನ್ ಯೂನಿಯನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ  ಸಹಿ ಹಾಕಲಾಗಿದೆ. ಭಾರತ ಮತ್ತು ಯೂರೋಪಿಯನ್ ಯೂನಿಯನ್ ಶೃಂಗಸಭೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿರುವುದನ್ನು ಘೋಷಿಸಲಾಗಿದೆ. ಇದರೊಂದಿಗೆ, ಎರಡು ದಶಕಗಳಿಂದ ನಡೆಯುತ್ತಿದ್ದ ಅವಿರತ ಪ್ರಯತ್ನಕ್ಕೆ ಫಲ ಸಿಕ್ಕಿದಂತಾಗಿದೆ. ಐರೋಪ್ಯ ಒಕ್ಕೂಟದ 27 ರಾಷ್ಟ್ರಗಳ ಮಾರುಕಟ್ಟೆ

ನವದೆಹಲಿ: ಭಾರತದ ಎರಡನೇ ಗಗನಯಾತ್ರಿ ಮತ್ತು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಉಳಿದುಕೊಂಡ ದೇಶದ ಮೊದಲ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ದೇಶದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ (highest peacetime gallantry award) ಅಶೋಕ ಚಕ್ರ ನೀಡಿ

ತಿರುವನಂತಪುರಂ: ಜ. 23,ಕೇರಳಕ್ಕೆ ನಿಗದಿಪಡಿಸಲಾದ ಮೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹಸಿರು ನಿಶಾನೆ ತೋರಿದರು. ತಿರುವನಂತಪುರಂ-ತಾಂಬರಂ, ನಾಗರ್‌ಕೋಯಿಲ್-ಮಂಗಳೂರು ಜಂಕ್ಷನ್ ಹಾಗೂ ತಿರುವನಂತಪುರಂ-ಚಾರ್ಲಪಳ್ಳಿ ಮಾರ್ಗಗಳ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಅಧಿಕೃತವಾಗಿ ಚಾಲನೆ ಪಡೆದವು. ಇದರೊಂದಿಗೆ ಗುರುವಾಯೂರ್-ತ್ರಿಶೂರ್ ಪ್ಯಾಸೆಂಜರ್ ರೈಲಿಗೂ ಪ್ರಧಾನಿ

ಸ್ಯಾನ್ ಫ್ರಾನ್ಸಿಸ್ಕೊ: ಜಾಗತಿಕ ಇ-ಕಾಮರ್ಸ್ ದೈತ್ಯ ಅಮೆಜಾನ್ ತನ್ನ ಉದ್ಯೋಗಿಗಳಿಗೆ ಮತ್ತೊಂದು ಶಾಕ್ ನೀಡಿದ್ದು, ಸುಮಾರು 30,000 ಕಾರ್ಪೊರೇಟ್ ಹುದ್ದೆಗಳನ್ನು ತೆಗೆದುಹಾಕುವ ವಿಶಾಲ ಯೋಜನೆಯ ಭಾಗವಾಗಿ ಮುಂದಿನ ವಾರದ ವೇಳೆಗೆ ಸುಮಾರು 14,000 ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ. ಒಟ್ಟು ಉದ್ಯೋಗ ಕಡಿತಗಳ ಸಂಖ್ಯೆಯು ಸುಮಾರು 1.58

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಗುರುವಾರ ಶಸ್ತ್ರಸಜ್ಜಿತ ಸೇನಾ ವಾಹನವು ಸ್ಕಿಡ್ ಆಗಿ 200 ಅಡಿ ಆಳದ ಕಮರಿಗೆ ಉರುಳಿದ ಪರಿಣಾಮ ಹತ್ತು ಮಂದಿ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಮತ್ತು 7 ಮಂದಿ ಗಾಯಗೊಂಡಿದ್ದಾರೆ. ಒಟ್ಟು 17 ಜನರಿದ್ದ ಸೇನಾ ವಾಹನವು ಎತ್ತರದ ಪೋಸ್ಟ್‌ಗೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ

ಗುವಾಹಟಿ: 2023 ರಲ್ಲಿ ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಸಮಯದಲ್ಲಿ ಅಪಹರಣಕ್ಕೊಳಗಾಗಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ 20 ವರ್ಷದ ಕುಕಿ-ಝೋ ಯುವತಿ ಮೂರು ವರ್ಷಗಳ ಬದುಕಿನ ಹೋರಾಟದ ಬಳಿಕ ಜನವರಿ 10, 2026 ರಂದು ಮೃತಪಟ್ಟಿದ್ದಾರೆ. ಸಾಮೂಹಿಕ ಅತ್ಯಾಚಾರದಿಂದ ಮಹಿಳೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲೇ ಇಲ್ಲ ಎಂದು ಕುಕಿ-ಝೋ ಸಂಘಟನೆಗಳು ತಿಳಿಸಿವೆ. ಯುವತಿ

ನವದೆಹಲಿ: ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಮತ್ತು ಚುನಾವಣಾಧಿಕಾರಿ ಕೆ. ಲಕ್ಷ್ಮಣ್ ಅವರು ಸೋಮವಾರ ಪ್ರಕಟಿಸಿದ್ದಾರೆ. ಇತ್ತೀಚಿಗಷ್ಟೇ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಬಿಹಾರ ಬಿಜೆಪಿ ಶಾಸಕ ನಿತಿನ್ ನಬಿನ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಜಮ್ಮು: ಗಡಿಯಲ್ಲಿ ಮತ್ತೆ ಪಾಕಿಸ್ತಾನದ ಕಿರಿಕ್ ಹೆಚ್ಚಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಿಂದ (LOC) ಮಂಗಳವಾರ ಸಂಜೆ ಭಾರತದ ಗಡಿಯೊಳಗೆ ನುಗ್ಗಿದ ಪಾಕಿಸ್ತಾನಿ ಡ್ರೋನ್‌ಗಳತ್ತ ಭಾರತೀಯ ಸೇನಾಪಡೆಗಳು ಗುಂಡಿನ ದಾಳಿ ನಡೆಸಿವೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಹಿಂದಿರುಗುವ

ಢಾಕಾ, ಜನವರಿ 13: ಬಾಂಗ್ಲಾದೇಶದ ಪೊಲೀಸ್ ಕಸ್ಟಡಿಯಲ್ಲಿದ್ದ ಶೇಖ್ ಹಸೀನಾರ ಪಕ್ಷದ ಹಿಂದೂ ನಾಯಕ ಪ್ರಳಯ್ ಚಾಕಿ ಸಾವನ್ನಪ್ಪಿದ್ದಾರೆ. ಜೈಲು ಅಧಿಕಾರಿಗಳು ಅವರಿಗೆ ವೈದ್ಯಕೀಯ ಆರೈಕೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಅವರ ಕುಟುಂಬದಿಂದ ಆರೋಪ ಕೇಳಿಬಂದಿದೆ. ಗಾಯಕರೂ ಆಗಿದ್ದ 60 ವರ್ಷದ ಪ್ರಳಯ್  ಚಾಕಿ, ಅವಾಮಿ ಲೀಗ್‌ನ ಪಬ್ನಾ

ಅಜ್ಮೀರ್: ರಾಜಸ್ಥಾನದ ಪ್ರಸಿದ್ಧ ಅಜ್ಮೀರ್ ದರ್ಗಾ ಮೂಲತಃ "ಶಿವನ ದೇವಸ್ಥಾನವಾಗಿತ್ತು ಎಂದು ಪ್ರತಿಪಾದಿಸುವ ಅರ್ಜಿಯೊಂದನ್ನು ಸೋಮವಾರ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ಸಂಬಂಧ ಬಲಪಂಥೀಯ ಸಂಘಟನೆ ಮಹಾರಾಣಾ ಪ್ರತಾಪ್ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜವರ್ಧನ್ ಸಿಂಗ್ ಪರ್ಮಾರ್ ಅವರು ಅಜ್ಮೀರ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಅಲ್ಲಿ ಪುರಾತತ್ವ ಸಮೀಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.