Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಶ್ರದ್ಧಾ ಹತ್ಯೆ ಪ್ರಕರಣ: ಆಫ್ತಾಬ್ ಗೆ ನಾರ್ಕೋ ಪರೀಕ್ಷೆ ನಡೆಸಲು ಕೋರ್ಟ್ ಅನುಮತಿ

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ಧಾಳ ಕೊಲೆ ಆರೋಪಿ ಆಫ್ತಾಬ್ ಅಮೀನ್ ಪೂನಾವಾಲಾನನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಿಸಿಕೊಳ್ಳಲು ದೆಹಲಿಯ ನ್ಯಾಯಾಲಯವೊಂದು ಗುರುವಾರ ಅನುಮತಿ ನೀಡಿದೆ.

ಆರೋಪಿಯನ್ನು ಮಾದಕ ದ್ರವ್ಯ ಸೇವನೆ (ನಾರ್ಕೋ) ಪರೀಕ್ಷೆಗೆ ಒಳಪಡಿಸಲು ಅವಕಾಶ ನೀಡಿದೆ. ಈ ಸಂಬಂಧ ಪೊಲೀಸರ ಮನವಿಗೆ ಸಮ್ಮತಿಸಿ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಅವಿರಾಲ್ ಶುಕ್ಲಾ ಈ ಆದೇಶ ಹೊರಡಿಸಿದ್ದಾರೆ.

ಇಪ್ಪತ್ತೆಂಟರ ಹರೆಯದ ಪೂನಾವಾಲಾ ಶ್ರದ್ಧಾಳನ್ನುಕೊಲೆ ಮಾಡಿ. ಬಳಿಕ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಮಾಡಿ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ನಿವಾಸದ  ಫ್ರಿಡ್ಜ್‌ನಲ್ಲಿ ಸುಮಾರು ಮೂರು ವಾರಗಳ ಕಾಲ ಇರಿಸಿದ್ದ ಆರೋಪಿ ಮಧ್ಯರಾತ್ರಿಯಲ್ಲಿ ದೇಹದ ತುಂಡುಗಳನ್ನು ಮೆಹ್ರೋಲಿಯ ಅರಣ್ಯದಲ್ಲಿ ಬಿಸಾಡಿದ್ದಾನೆ.

ಪ್ರಿಯತಮೆ ಶ್ರದ್ಧಾಳ ನಡುವೆ ಆಗಾಗ್ಗೆ ಜಗಳವಾಗುತಿತ್ತು. ಇದೇ ಕಾರಣದಿಂದ ಪೂನಾವಾಲಾ ಮೇ 18 ರ ಸಂಜೆ 27 ವರ್ಷದ ಶ್ರದ್ಧಾಳನ್ನು ಕೊಂದಿರುವುದಾಗಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರೆದಿದ್ದು, ಪ್ರತಿದಿನ ಭಯಾನಕ ಸತ್ಯಗಳು ಹೊರಬರುತ್ತಿವೆ.

No Comments

Leave A Comment