Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ನವದೆಹಲಿ: ಅರುಣ್ ಗೋಯಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ(EC) ನೇಮಕಾತಿ ಮಾಡಿದ್ದರಲ್ಲಿ ಅಳವಡಿಸಿಕೊಂಡ ಪ್ರಕ್ರಿಯೆಯನ್ನು ಪ್ರಶ್ನೆ ಮಾಡಿರುವ ಸುಪ್ರೀಂ ಕೋರ್ಟ್, ಅವರ ಕಡತಕ್ಕೆ ತರಾತುರಿಯಲ್ಲಿ ಆತುರದಲ್ಲಿ ಅನುಮತಿ ನೀಡಲಾಗಿದೆ ಎಂದು ಅಸಮಾಧಾನ ಮತ್ತು ಆಕ್ಷೇಪ ವ್ಯಕ್ತಪಡಿಸಿದೆ. ಗೋಯಲ್ ಅವರ ನೇಮಕಕ್ಕೆ ಸಂಬಂಧಿಸಿದ ಕಡತವನ್ನು "ಮಿಂಚಿನ ವೇಗ" ದಲ್ಲಿ ತೆರವುಗೊಳಿಸಲಾಗಿದೆ ಎಂದು ಸುಪ್ರೀಂ ಕೋರ್ಟ್

ಹೈದರಾಬಾದ್: ಭಾರತೀಯ ಜನತಾ ಪಕ್ಷದ(ಬಿಜೆಪಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ ಅಪರಾಧ ಪ್ರಕ್ರಿಯೆಗಳ ಸಂಹಿತೆ(ಸಿಆರ್‌ಪಿಸಿ) ಸೆಕ್ಷನ್ 41ಎ ಅಡಿಯಲ್ಲಿ ಹೊಸ ನೋಟಿಸ್ ನೀಡುವಂತೆ ಟಿಆರ್ ಎಸ್ ಶಾಸಕರ ಖರೀದಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ)ಕ್ಕೆ ತೆಲಂಗಾಣ ಹೈಕೋರ್ಟ್ ಗುರುವಾರ ಆದೇಶಿಸಿದೆ. ರಿಟ್ ಅರ್ಜಿಯ ವಿಚಾರಣೆ ನಡೆಸಿದ

ನವದೆಹಲಿ: ಐತಿಹಾಸಿಕ ಜಾಮಾ ಮಸೀದಿಗೆ ಒಂಟಿಯಾಗಿ ಹುಡುಗಿಯರು ಮತ್ತು ಮಹಿಳೆಯರು ಬರುವುದನ್ನು ನಿಷೇಧಿಸಲಾಗಿದೆ ಎಂದು ಮಸೀದಿಯ ಹೊರಗೆ ಅಂಟಿಸಲಾಗಿದ್ದು ಇದು ವಿವಾದಕ್ಕೆ ಕಾರಣವಾಗಿದೆ. ಜಾಮಾ ಮಸೀದಿಯ ಪಿಆರ್‌ಒ ಸಬೀವುಲ್ಲಾಖಾನ್ ಮಾತನಾಡಿ, 'ಇಲ್ಲಿಗೆ ಬರುವ ಒಂಟಿ ಹುಡುಗಿಯರನ್ನು ತಡೆಯಲು ಈ ನಿಷೇಧ ಹೇರಲಾಗಿದೆ. ಅವರು ಇಲ್ಲಿಗೆ ಬಂದು ವಿಡಿಯೊ ಮಾಡುತ್ತಿದ್ದಾರೆ. 'ನೀವು ಬರುವುದಾದರೆ

ಪೂಂಚ್: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗೆ ಬೆಂಕಿ ತಗುಲಿ ಸ್ಫೋಟಗೊಂಡ ಪರಿಣಾಮ ತಾಯಿ ಮತ್ತು ಅಪ್ರಾಪ್ತ ಮಗ ಸಜೀವ ದಹನವಾಗಿರುವ ಘಟನೆ ಗುರುವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುರನಕೋಟೆ ಉಪವಿಭಾಗದ ಚಂದಿಮಾರ್ಹ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಹಮೀದಾ ಬೇಗಂ(40) ಮತ್ತು ಅಕಿಬ್ ಅಹ್ಮದ್(4) ಎಂದು

ನವದೆಹಲಿ: ಸ್ವತಂತ್ರ ಮತ್ತು ಸಚ್ಚಾರಿತ್ರ್ಯ ಹೊಂದಿರುವ ಮುಖ್ಯ ಚುನಾವಣಾ ಆಯುಕ್ತರ ಪ್ರಾಮುಖ್ಯತೆಯನ್ನು ಒತ್ತಿ ಹೇಳಿರುವ ಸುಪ್ರೀಂ ಕೋರ್ಟ್, ಪ್ರಧಾನ ಮಂತ್ರಿಯವರ ವಿರುದ್ಧ ಮುಖ್ಯ ಚುನಾವಣಾ ಆಯುಕ್ತರು(CEC) ಕ್ರಮ ಕೈಗೊಳ್ಳದಿದ್ದರೆ ಅದು ವ್ಯವಸ್ಥೆಯ ಸಂಪೂರ್ಣ ಕುಸಿತವಾಗುವುದಿಲ್ಲವೇ ಎಂದು ಅಚ್ಚರಿ ವ್ಯಕ್ತಪಡಿಸಿದೆ. ಪ್ರಸ್ತುತ ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ನೇಮಕ ವಿಚಾರದಲ್ಲಿ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಗಡಿಯುದ್ದಕ್ಕೂ ಡ್ರೋನ್‌ನಿಂದ ಬೀಳಿಸಲಾದ ಸುಧಾರಿತ ಸ್ಫೋಟಕ ಸಾಧನಗಳು (ಐಇಡಿಗಳು), ಪಿಸ್ತೂಲ್‌ಗಳು ಮತ್ತು ನಗದನ್ನು ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತರರಾಷ್ಟ್ರೀಯ ಗಡಿಯಿಂದ ಸುಮಾರು ಐದಾರು ಕಿಲೋಮೀಟರ್ ದೂರದಲ್ಲಿರುವ ರಾಮಗಢ ಮತ್ತು ವಿಜಯಪುರದ ನಡುವೆ ಬೆಳಿಗ್ಗೆ 6.15 ರ ಸುಮಾರಿಗೆ ಸ್ಥಳೀಯ

ಜೈಪುರ್: ದೇಶದಲ್ಲಿನ ಡಿಜಿಟಲ್ ಮಾಧ್ಯಮಗಳ ನೋಂದಣಿ, ಕಾರ್ಯನಿರ್ವಹಣೆ ಹಾಗೂ ನಿಯಂತ್ರಣದ ಬಗ್ಗೆ ಹೊಸ ಕಾನೂನನ್ನು ಕೇಂದ್ರ ಸರ್ಕಾರ ಶೀಘ್ರದಲ್ಲಿ ಜಾರಿಗೆ ತರಲಿದೆ’ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಹಿಂದೆ ಸುದ್ದಿಗಳ ಏಕಮುಖ ಸಂವಹನವಿತ್ತು, ಆದರೆ ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳ ಬೆಳವಣಿಗೆಯೊಂದಿಗೆ, ಸುದ್ದಿ

(ವಿಶೇಷ ವರದಿ:ಟಿ.ಜಯಪ್ರಕಾಶ್ ಕಿಣಿ,ಉಡುಪಿ) ಹೌದು ಹಲವಾರು ವರ್ಷಗಳಿ೦ದಲೂ ಮಲ್ಪೆ-ಆಗು೦ಬೆಯವರೆಗೆ ರಸ್ತೆ ಅಗಲೀಕರಣ ಮಾಡುವ ನೆಪದಲ್ಲಿಯೇ ಕಾಲಹಗರಣವನ್ನು ಮಾಡುತ್ತಿರುವ ಸರಕಾರದ ಇಲಾಖೆಯು ಸೇರಿದ೦ತೆ ಎಲ್ಲಾ ಜನಪತ್ರಿನಿಧಿಗಳು ಮತದಾರರನ್ನು ಮ೦ಗಮಾಡುತ್ತಲೇ ಬ೦ದಿದೆ. ಮಾತ್ರವಲ್ಲದೇ ಇನ್ನು ಮ೦ಗಮಾಡುವುದನ್ನು ನಿಲ್ಲಿಸಿಲ್ಲವೆ೦ಬುದಕ್ಕೆ ನವೆ೦ಬರ್ 24ರ೦ದು ಮಲ್ಪೆಯಲ್ಲಿ ರಸ್ತೆ ಬದಿಯಲ್ಲಿ ನಿರ್ಮಾಣಮಾಡಲ್ಪಟ್ಟ ಬಸ್ ನಿಲ್ದಾಣವೇ ಪ್ರತ್ಯಕ್ಷ ಸಾಕ್ಷಿಯಾಗಿದೆ ಎ೦ದರೆ

ಯುನೈಟೆಡ್ ನೇಷನ್ಸ್: ಭಾರತೀಯ ವನ್ಯಜೀವಿ ತಜ್ಞೆ ಡಾ.ಪೂರ್ಣಿಮಾ ದೇವಿ ಬರ್ಮನ್ ಅವರಿಗೆ ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಪ್ರಶಸ್ತಿಯಾದ ಚಾಂಪಿಯನ್ಸ್ ಆಫ್ ದಿ ಅರ್ಥ್ ನೀಡಿ ಗೌರವಿಸಲಾಗಿದೆ. ಪರಿಸರ ಜೀವವೈವಿದ್ಯತೆ ವ್ಯವಸ್ಥೆಯ ಅವನತಿಯನ್ನು ತಡೆಗಟ್ಟಲು ಮತ್ತು ಅವನತಿಯನ್ನು ಹಿಮ್ಮುಖಗೊಳಿಸಲು ತೆಗೆದುಕೊಂಡ ಕ್ರಮಗಳಿಗಾಗಿ ಪೂರ್ಣಿಮಾ ಅವರಿಗೆ ಈ ಪ್ರಶಸ್ತಿ ಸಂದಿದೆ. ಡಾ. ಪೂರ್ಣಿಮಾ ಅವರಿಗೆ

ಉಡುಪಿ: ಇತಿಹಾಸ ಪ್ರಸಿದ್ಧ ಉಡುಪಿಯ ಶ್ರೀಚ೦ದ್ರಮೌಳೀಶ್ವರ ದೇವರಸನ್ನಿಧಿಯಲ್ಲಿ ಇದೇ ಕಾರ್ತಿಕ ಕೃಷ್ಣ ಪಕ್ಷ 13ಯು ದಿನಾ೦ಕ ನವೆ೦ಬರ್ 22ರ ಮ೦ಗಳವಾರ ಮೊದಲ್ಗೊ೦ಡು ಮಾರ್ಗಶಿರ ಶುಕ್ಲಪಕ್ಷ 4ಯು ದಿನಾ೦ಕ 27ರ ರವಿವಾರದವರೆಗೆ ಕಾಲಾವಧಿ ರಥೋತ್ಸವ ಪರ೦ಪರಾಗತ ಶುಭ ಸ೦ಪ್ರದಾಯಾನುಸಾರವಾಗಿ ಧಾರ್ಮಿಕ ಕಾರ್ಯಕ್ರಮಗಳೊ೦ದಿಗೆ ಆರ೦ಭಗೊ೦ಡಿದೆ. ನ.22ರ ಮ೦ಗಳವಾರದ೦ದು ಸಾಯ೦ಕಾಲ ಪ್ರಾರ್ಥನೆ, ಮುಹೂರ್ತಬಲಿ, ಪುಣ್ಯಾಹವಾಚನ,