ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್‌ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...

ಆಪ್ರಿಕಾ, ಜೂ 15 :7ನೇ ಸಂಸತ್ತಿನ ರಾಷ್ಟ್ರೀಯ ಅಸೆಂಬ್ಲಿಯ ಮೊದಲ ಅಧಿವೇಶನದಲ್ಲಿ ಶುಕ್ರವಾರದಂದು ದಕ್ಷಿಣ ಆಫ್ರಿಕಾದ ಸಂಸತ್ತು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್‌ನ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರನ್ನು ಅಧ್ಯಕ್ಷರಾಗಿ ಮರು ಆಯ್ಕೆ ಮಾಡಿತು. ಎರಡು ವಾರಗಳ ಹಿಂದೆ ನಡೆದ ಚುನಾವಣೆಯಲ್ಲಿ ಎಎನ್‌ಸಿ ತನ್ನ 30 ವರ್ಷಗಳ ಬಹುಮತವನ್ನು ಕಳೆದುಕೊಂಡ ನಂತರ

ಕುವೈತ್​ನಲ್ಲಿ ಮಲಯಾಳಿ ಉದ್ಯಮಿಗೆ ಸೇರಿದ ಕಟ್ಟಡವೊಂದರಲ್ಲಿ ಅಗ್ನಿ ಅವಘಡ  ಸಂಭವಿಸಿದ್ದು, 43 ಮಂದಿ ಸಜೀವದಹನವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಮೃತರಲ್ಲಿ ನಾಲ್ವರು ಭಾರತೀಯರಾಗಿದ್ದಾರೆ. ದಕ್ಷಿಣ ಕುವೈತ್‌ನ ಮಂಗಾಫ್ ನಗರದಲ್ಲಿ ಕಟ್ಟಡದಲ್ಲಿ ಅವಘಡ ಸಂಭವಿಸಿದೆ, ಈ ಕಟ್ಟಡದಲ್ಲಿರುವವರು ಹೆಚ್ಚಿನವರು ಮಲಯಾಳಿಗಳು ಎನ್ನಲಾಗಿದೆ. ಮೃತರಲ್ಲಿ ಇಬ್ಬರು ತಮಿಳುನಾಡು ಮತ್ತು ಉತ್ತರ ಭಾರತದವರು ಎನ್ನಲಾಗಿದೆ. ಕುವೈತ್

ಮಲಾವಿ, ಜೂ. 11:ಮಲಾವಿ ದೇಶದ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಹಾಗೂ ಇತರ ಒಂಬತ್ತು ಜನರನ್ನು   ಪ್ರಯಾಣಿಸುತ್ತಿದ್ದ ವಿಮಾನ ನಿಗದಿತ ಸಮಯವಾದ ಸೋಮವಾರ ಲ್ಯಾಂಡಿಂಗ್ ಆಗದೆ ನಾಪತ್ತೆಯಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಮಲಾವಿ ರಾಜಧಾನಿ ಲಿಲಾಂಗ್ವೆನಿಂದ ರಕ್ಷಣಾ ಪಡೆಯ ವಿಮಾನದಲ್ಲಿ ಉಪಾಧ್ಯಕ್ಷ ಚಿಲಿಮಾ ಹಾಗೂ ಇತರ ಒಂಬತ್ತು ಮಂದಿ ಪ್ರಯಾಣಿಕರು ಪ್ರಯಾಣಿಸಿದ್ದರು ಎಂದು

ಮಳೆಗಾಲದಲ್ಲಿ  ಯೊಂದಿಗೆ ಗುಡುಗು ಮಿಂಚುಗಳು ಬರುವುದು ಸಾಮಾನ್ಯ. ಆದರೆ ಗಾಳಿ ಮಳೆಯೊಂದಿಗೆ ಬರುವ ಭಯಾನಕ ಗುಡುಗು ಮಿಂಚುಗಳು ಎದೆಯಲ್ಲಿ ನಡುಕ ಹುಟ್ಟಿಸುವುದು ಮಾತ್ರವಲ್ಲದೆ, ಅನೇಕ ಪ್ರಾಣ ಹಾನಿಯನ್ನೂ ಕೂಡಾ ಉಂಟುಮಾಡುತ್ತದೆ. ಹೀಗೆ ಸಿಡಿಲು ಬಡಿದು ಪ್ರಾಣಿ-ಪಕ್ಷಿಗಳು, ಮನುಷ್ಯರು ಸಾವನ್ನಪ್ಪಿದ ಅನೇಕ ಘಟನೆಗಳು ಈ ಹಿಂದೆಯೂ ನಡೆದಿದೆ. ಇದೀಗ ಅಂತಹದೇ ಭೀಕರ

ನ್ಯೂಯಾರ್ಕ್‌, ಮೇ.31: ಹಷ್‌ ಮನಿ ಕೇಸ್‌ಗೆ ಸಂಬಂಧಪಟ್ಟಂತೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ದೋಷಿ ಎಂದು ನ್ಯೂಯಾರ್ಕ್‌ ನ ಕೋರ್ಟ್‌ ತೀರ್ಪುನೀಡಿದೆ. ಅಪರಾಧ ಪ್ರಕರಣವೊಂದರಲ್ಲಿ ಶಿಕ್ಷೆಗೊಳಗಾದ ಮೊದಲ ಯುಎಸ್‌ ಮಾಜಿ ಅಧ್ಯಕ್ಷ ಎನ್ನಲಾಗಿದೆ. ಪ್ರಕರಣದಲ್ಲಿ ಎಲ್ಲಾ 34 ಆರೋಪಗಳಲ್ಲಿಯೂ ಟ್ರಂಪ್‌ ದೋಷಿ ಎಂದು ನ್ಯೂಯಾರ್ಕ್‌ ನ್ಯಾಯಾಧೀಶರು ಆದೇಶ

ವಾಷಿಂಗ್ಟನ್, ಮೇ 29: ಹವಾಮಾನದಲ್ಲಿ ಉಂಟಾದ ಭಾರೀ ವೈಪರಿತ್ಯದಿಂದಾಗಿ ಡಲ್ಲಾಸ್ ಫೋರ್ಟ್ ವರ್ತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕಳೆದ 24 ಗಂಟೆಯಲ್ಲಿ 250ಕ್ಕೂ ಹೆಚ್ಚಿನ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ. ಹಾಗೂ 500ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬವಾಗಿದೆ ಎಂದು ವರದಿಯಾಗಿದೆ. ಟೆಕ್ಸಾಸ್‌ನತ್ತ ಬೀಸುತ್ತಿದ್ದ ಚಂಡಮಾರುತ ಹಾಗೂ ಬಿರುಗಾಳಿಯ ವಾತಾವರಣವು ಡಿಎಫ್‌ಡಬ್ಲ್ಯೂನ

ಪೋರ್ಟ್ ಮೊರ್‌ಸ್ಬಿ, ಮೇ 27: ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭಯಾನಕ ಭೂಕುಸಿದಿಂದ 2,000ಕ್ಕೂ ಅಧಿಕ ಮಂದಿ ಮಣ್ಣಿನಲ್ಲಿ ಹಾಗೂ ಅವಶೇಷಗಳ ಅಡಿಯಲ್ಲಿ ಜೀವಂತ ಸಮಾಧಿ ಆಗಿದ್ದಾರೆ. ಭಾನುವಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರವು ಸುಮಾರು 670 ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿತ್ತು. ಆದರೀಗ ಇಂದು ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ

ಗಾಜಾ, ಮೇ 27 : ಇಸ್ರೇಲ್ ಗಾಜಾದ ನಿರಾಶ್ರಿತರ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಮಕ್ಕಳು ಸೇರಿ 35 ಜನ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ತೀನಿಯನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಹಮಾಸ್ ರಾಕೆಟ್ ದಾಳಿ ನಡೆಸಿದ ಬಳಿಕ ಇಸ್ರೇಲ್ ರಾಫಾ ಮೇಲೆ ದೊಡ್ಡ ವೈಮಾನಿಕ ದಾಳಿ ನಡೆಸಿದೆ. ಇಸ್ರೇಲಿ

ದುಬೈ, ಯುನೈಟೆಡ್ ಅರಬ್ ಎಮಿರೇಟ್ಸ್(UAE): ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನವಾಗಿದ್ದು ಅದರಲ್ಲಿದ್ದವರು ಯಾರೂ ಬದುಕುಳಿದಿಲ್ಲ ಎಂದು ಸರ್ಕಾರಿ ಮಾಧ್ಯಮ ದೃಢಪಡಿಸಿದೆ. ಹೆಲಿಕಾಪ್ಟರ್ ಪತನಕ್ಕೀಡಾದ ಪ್ರದೇಶ ಕಡಿದಾದ ಕಣಿವೆಯಲ್ಲಿದೆ. ರಕ್ಷಕರು ಅಲ್ಲಿಗೆ ತಲುಪಲು ಇನ್ನೂ ಸಾಧ್ಯವಾಗಿಲ್ಲ. ಇಂದು ಸೂರ್ಯ ಉದಯಿಸುತ್ತಿದ್ದಂತೆ, ರಕ್ಷಕರು ಹೆಲಿಕಾಪ್ಟರ್ ನ್ನು ಸುಮಾರು

ಸಿಂಗಾಪುರ, ಮೇ. 19: ದಿನದಿಂದ ದಿನಕ್ಕೆ ಸಿಂಗಾಪುರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಒಂದು ವಾರಕ್ಕೆ ಸುಮಾರು 26 ಸಾವಿರ ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆ ಜನರಿಗೆ ಮಾಸ್ಕ್ ಧರಿಸುವಂತೆ ಸಿಂಗಾಪುರ ಸರ್ಕಾರ ಆದೇಶ ಹೊರಡಿಸಿದೆ. ಕೇವಲ ಒಂದು ವಾರದಲ್ಲಿ 25,900 ಜನರಿಗೆ ಕೊರೊನಾ ಸೋಂಕು ತಗುಲಿದೆ.