ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಮುಂಬೈ: ಮುಂಬೈನ ವಸಾಯಿಯಲ್ಲಿ ಪ್ರಿಯಕರನೊಬ್ಬ ತನ್ನ ಪ್ರೇಯಸಿಗೆ ನಡುರಸ್ತೆಯಲ್ಲೇ ಕಬ್ಬಿಣದ ಸ್ಪ್ಯಾನರ್ ನಿಂದ ತಲೆಗೆ 15 ಬಾರಿ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮಂಗಳವಾರ ಬೆಳಗ್ಗೆ 8.30ರ ಸುಮಾರಿಗೆ ವಸಾಯಿ ಪೂರ್ವದ ಚಿಂಚ್ಪಾಡಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಕೃತ್ಯವನ್ನು ಸಾರ್ವಜನಕರು ನೋಡುತ್ತಾ ನಿಂತಿದ್ದರೆ ಹೊರತು ಯಾರು ಯುವತಿಯ ಸಹಾಯಕ್ಕೆ

ಇನ್ನಮುಂದೆ ಪಬ್​ ಹಾಗೂ ಬಾರ್​ಗಳಲ್ಲಿ ಮದ್ಯ ಸೇವಿಸಲು ಮಾಡಲು ಸರ್ಕಾರಿ ಗುರುತಿನ ಚೀಟಿ ಇರಲೇಬೇಕೆಂದು ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ. ಮದ್ಯ ಪ್ರಿಯರಿಗಾಗಿ ಸರಕಾರ ಈಗ ನಿಯಮ ರೂಪಿಸಿದೆ. ಸರ್ಕಾರದಂತೆಯೇ ಪಬ್, ಬಾರ್ ಮಾಲೀಕರೂ ಕೂಡ ಮುತುವರ್ಜಿ ವಹಿಸಿದ್ದಾರೆ. ಕೆಲವು ದಿನಗಳ ಹಿಂದೆ ಪುಣೆ ನಗರದಲ್ಲಿ ನಡೆದ ಪೋರ್ಷೆ ಕಾರು

ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ ಡಾ.ರೊನಾಲ್ಡ್ ಕೊಲಾಸೊ, ತುಂಬೆ ಗ್ರೂಪ್ ಸ್ಥಾಪಕಾಧ್ಯಕ್ಷ ಡಾ.ತುಂಬೆ ಮೊಯ್ದಿನ್ ಹಾಗೂ ಎಂ.ಆರ್.ಜಿ. ಗ್ರೂಪ್ ಸ್ಥಾಪಕಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿಯವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಈ ಬಾರಿಯ ಗೌರವ ಡಾಕ್ಟರೇಟ್​ ಘೋಷಿಸಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ 42ನೇ ವಾರ್ಷಿಕ ಘಟಿಕೋತ್ಸವವು ಜೂ.15ರಂದು ಮಧ್ಯಾಹ್ನ 12.15 ಕ್ಕೆ ವಿವಿ ಆವರಣದಲ್ಲಿ

ಶಿರ್ವ : ಕಾರು ಡಿಕ್ಕಿ ಹೊಡೆದು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ  ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆಳ್ಳೆ ಗ್ರಾಮದ ಪಾಜಕ ಕ್ಷೇತ್ರದ ದ್ವಾರದ ಬಳಿ ಗುರುವಾರ ಸಂಭವಿಸಿದೆ. ಮೃತ ಮಹಿಳೆಯನ್ನು ಸುರೇಶ್‌ ಎಂಬವರ ಅಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಆಗ್ನೇಸ್‌ ನೊರೊನ್ಹಾ (76) ಎಂದು ಗುರುತಿಸಲಾಗಿದೆ.  ಆಗ್ನೇಸ್‌ ನೊರೊನ್ಹಾ  ತಮ್ಮ ಅಕ್ಕನ ಮಗಳಾದ ಜೆಸಿಂತಾ ಮೆನೇಜಸ್‌

ಕಾಸರಗೋಡು,ಜೂ 13 ,ವಿಷ ಸೇವನೆಯಿಂದ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಉಪ್ಪಳದಲ್ಲಿ ನಡೆದಿದೆ. ಉಪ್ಪಳ ಐಲ ಕುದುಪುಳು ವಿನ ಸುರೇಶ್ ರವರ ಪುತ್ರಿ ಧನ್ಯಶ್ರೀ ( 19) ಮೃತಪಟ್ಟವರು. ಮಂಗಳೂರು ಕಾಲೇಜಿನ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಳು. ಹನ್ನೆರಡು ದಿನಗಳ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ

ಕೊಚ್ಚಿ: ಕುವೈತ್‌ನಲ್ಲಿ ಅಗ್ನಿ ಅವಘಡದಲ್ಲಿ ಬಲಿಯಾದ 45 ಭಾರತೀಯರ ಪಾರ್ಥಿವ ಶರೀರವನ್ನು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡು ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಿ ಇಂದು ಶುಕ್ರವಾರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟ ಭಾರತೀಯರ ಪಾರ್ಥಿವ ಶರೀರವನ್ನು ಹೊತ್ತ ಭಾರತೀಯ ವಾಯುಪಡೆಯ ವಿಶೇಷ ವಿಮಾನ ಇಂದು ಬೆಳಗ್ಗೆ

ಮಣಿಪಾಲ: ಉಡುಪಿಯ ಮೊದಲ ಮಾನವ ಎದೆಹಾಲು ನಿಧಿ (ಹ್ಯೂಮನ್ ಬ್ರೆಸ್ಟ್ ಮಿಲ್ಕ್ ಬ್ಯಾಂಕ್) “ಮಣಿಪಾಲ ಮಾತೃ-ಅಮೃತ್ ಮಿಲ್ಕ್ ಬ್ಯಾಂಕ್” ಅನ್ನು ಜೂನ್ 11 ರಂದು ಉಡುಪಿ ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಜಿ ಎಸ್ ಅವರು ಉದ್ಘಾಟಿಸಿದರು. ಉಡುಪಿ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಐ.ಪಿ.ಗಡಾದ್ ಅವರು ಕಾರ್ಯಕ್ರಮದ

ದಕ್ಷಿಣ ಕನ್ನಡ, ಜೂ.11: ಬಿಜೆಪಿ ವಿಜಯೋತ್ಸವ  ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ‘ಸಿಸಿಟಿವಿ ವಿಡಿಯೋ ಆಧಾರದಲ್ಲಿ 20 ಜನರನ್ನು ವಶಕ್ಕೆ ಪಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಆರು ಮಂದಿಯನ್ನು ಬಂಧಿಸಿದ್ದೇವೆ. ಮೂರು ತಂಡದ ಮೂಲಕ ತನಿಖೆ

ಉಳ್ಳಾಲ, ಜೂ. 09: ನೇಪಾಳ ಮೂಲದ ಅಪ್ರಾಪ್ತ ಬಾಲಕಿಯೊಬ್ಬಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ತೊಕ್ಕೊಟ್ಟು, ಚೆಂಬುಗುಡ್ಡೆಯ ಬಾಡಿಗೆ ಮನೆಯಲ್ಲಿ ಶನಿವಾರ ನಡೆದಿದೆ. ನೇಪಾಳ ಮೂಲದ ರಬೀನ ಬಿ.ಕೆ (16)ಮೃತ ಅಪ್ರಾಪ್ತೆ. ತೊಕ್ಕೊಟ್ಟು ವೃಂದಾವನ ಹೊಟೇಲಿನ ಪಕ್ಕದಲ್ಲಿ ಫಾಸ್ಟ್ ಫುಡ್ ಕಮ್ ಕ್ಯಾಂಟೀನ್ ನಡೆಸುತ್ತಿದ್ದ ನೇಪಾಳ ಮೂಲದ ರಾಮ್ ಶರಣ್

ಕಾಪು: ಕಾಪು ಬೀಚ್‌ನಲ್ಲಿ ಯುವಕನೋರ್ವ ದ್ವಿಚಕ್ರ ವಾಹನ, ಮೊಬೈಲ್‌ ಜೊತೆಗೆ ಬೆಲೆಬಾಳುವ ವಸ್ತುಗಳನ್ನು ಬಿಟ್ಟು ನಾಪತ್ತೆಯಾಗಿದ್ದು, ನಿನ್ನೆಯಿಂದ ಅವನಿಗಾಗಿ ಬೀಚ್‌ನುದ್ದಕ್ಕೂ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ನಾಪತ್ತೆಯಾಗಿರುವ ಯುವಕನನ್ನು ಕಾಪು ಪಡುಗ್ರಾಮ ನಿವಾಸಿ ತುಳಸಿ ಸಾಲ್ಯಾನ್‌ ಎಂಬವರ ಪುತ್ರ 20ರ ಹರೆಯದ ಕರಣ್‌ ಸಾಲ್ಯಾನ್‌ ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿಯಿಂದ ಕರಣ್