ಉಡುಪಿ: ಶ್ರೀಕೃಷ್ಣ-ಮುಖ್ಯಪ್ರಾಣದೇವರಿಗೆ ಮು೦ದಿನ ಎರಡು ವರುಷಗಳ ಕಾಲ ತಮ್ಮ ಕರಕಮಲಗಳಿ೦ದ ಪೂಜೆಯನ್ನು ನೆರವೇರಿಸಲಿರುವ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ತಮ್ಮ ಶಿಷ್ಯರಾದ ಶ್ರೀಸುಶ್ರೀ೦ದ್ರ ತೀರ್ಥಪಾದರೊ೦ದಿಗೆ ಎಲ್ಲಾ ತೀರ್ಥಕ್ಷೇತ್ರ ಸ೦ದರ್ಶನ ಮುಗಿಸಿ ಇ೦ದು (ಸೋಮವಾರದ೦ದು) ಸಾಯ೦ಕಾಲ ಉಡುಪಿ ನಗರಕ್ಕೆ ಆಗಮಿಸುವುದರೊ೦ದಿಗೆ ಪುರಪ್ರವೇಶವನ್ನು ಗೈದರು. ಉಡುಪಿಗೆ ಆಗಮಿಸಿದ ಯತಿದ್ವಯರನ್ನು ಜಿಲ್ಲಾಧಿಕಾರಿಗಳು,ಪರ್ಯಾಯ ಸ್ವಾಗತ ಸಮಿತಿಯವರು,ಜಿಲ್ಲಾ
ಉಡುಪಿ:ಕಳೆದ ಏಪ್ರಿಲ್ ತಿಂಗಳಿನಿಂದ ಉಡುಪಿ ನಗರಸಭೆಯಲ್ಲಿ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಡಳಿತ ನಡೆಸುತ್ತಿದ್ದು, ನಗರ ಸಭೆಯ ಚುನಾಯಿತ ಸದಸ್ಯರ ಕೌನ್ಸಿಲ್ ಅಧಿಕಾರ ನಡೆಸುತ್ತಿಲ್ಲ. ಈ ಬಗ್ಗೆ ಮಾಹಿತಿ ಇಲ್ಲದ ಪ್ರಸಾದ್ ಕಾಂಚನ್ ರವರು ಉಡುಪಿ ನಗರ ಸಭೆ ಬಿಜೆಪಿ ಆಡಳಿತ ನಡೆಸುತ್ತಿದೆ ಎಂಬ ಬಾಲಿಶ ಹೇಳಿಕೆಯಿಂದ ತಮ್ಮ ರಾಜಕೀಯ
ಮಂಗಳೂರು: ಉಡುಪಿಯಲ್ಲಿ ಚತುರ್ಥ ಬಾರಿಗೆ ಪರ್ಯಾಯ ಸರ್ವಜ್ಞ ಪೀಠಾರೋಹಣಗೈಯ್ಯಲಿರುವ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ರವಿವಾರ ಮಂಗಳೂರಿನಲ್ಲಿ ಪೌರ ಸಮ್ಮಾನ ನೆರವೇರಲಿದೆ ಎಂದು ತಿಳಿಯಲಾಗಿದೆ. ಅಪರಾಹ್ನ 3ಕ್ಕೆ ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಶರವು ದೇಗುಲದಿಂದ ಮೆರವಣಿಗೆ ನಡೆದು ಸಂಜೆ 4ಕ್ಕೆ ರಾಧಾಕೃಷ್ಣ ಮಂದಿರದಲ್ಲಿ ಮೇಯರ್ ಸುಧೀರ್
ಉಡುಪಿ:ಲೋಕಸಭೆಯಲ್ಲಿ ಏಕಕಾಲಿಕ ವ್ಯಾಖ್ಯಾನಕಾರ (ಕನ್ಸಲ್ಟೆಂಟ್ ಇಂಟರ್‌ಪ್ರಿಟರ್ ) ಹುದ್ದೆಗೆ ಪತ್ರಕರ್ತೆ ಸುಪ್ರೀತಾ ಹೆಬ್ಬಾರ್ ನೇಮಕಗೊಂಡಿದ್ದಾರೆ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಶಿವಪುರದ ಇವರು ಸುಮಾರು 15 ವರ್ಷ ವಿವಿಧ ರಾಜ್ಯಮಟ್ಟದ ಸುದ್ದಿಸಂಸ್ಥೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಆಟೊಮೊಬೈಲ್ ಪತ್ರಕರ್ತೆಯಾಗಿ, "ಡ್ರೈವ್ ದಿ ಫೇಮ್” ಎಂಬ ಹೆಸರಿನ ಆಟೊಮೊಬೈಲ್ ಯೂಟ್ಯೂಬ್ ಚಾನೆಲ್
ಉಡುಪಿ: ಜ.4: ಜಿಲ್ಲೆಯ ಹಿರಿಯ ಬಿಜೆಪಿ ಮುಖಂಡರಾಗಿದ್ದ ಹಾಗೂ ಹೊಟೇಲ್ ಉದ್ಯಮವನ್ನು ನಡೆಸುತ್ತಿದ್ದ ಖ್ಯಾತ ಉದ್ಯಮಿಗಳಾಗಿ ಜನಾನುರಾಗಿಯಾಗಿದ್ದ ಬಿ.ಸುಧಾಕರ್ ಶೆಟ್ಟಿ(72) ಇಂದು (ಗುರುವಾರದ೦ದು)ಬೆಳಗ್ಗೆ ಹೃದಯಾಘಾತದಿ೦ದಾಗಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕರಾವಳಿ ಬೈಪಾಸ್ ನಲ್ಲಿರುವ ಶಾರದಾ ಇಂಟರ್ ನ್ಯಾಶನಲ್ ಹೊಟೇಲ್ ಮಾಲಕರಾಗಿದ್ದ ಬಿ.ಸುಧಾಕರ್ ಶೆಟ್ಟಿ ಹಲವು ವರ್ಷಗಳಿಂದ ಹೊಟೇಲ್ ಉದ್ಯಮ
ಕವರಟ್ಟಿ(ಲಕ್ಷದ್ವೀಪ): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬುಧವಾರ ಕವರಟ್ಟಿಯಲ್ಲಿ 1,156 ಕೋಟಿ ರೂಪಾಯಿಗಳ ಮೌಲ್ಯದ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ನಂತರ ಇಂದು ಕೇರಳದ ತ್ರಿಶೂರ್ ನಲ್ಲಿ ಭಾರತೀಯ ಜನತಾ ಪಕ್ಷದ ಮಹಿಳಾ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಪ್ರಧಾನ ಮಂತ್ರಿಯವರನ್ನು ಸ್ವಾಗತಿಸಲು ತ್ರಿಶೂರ್
ಉಡುಪಿ: ಉಡುಪಿಯ ಅಷ್ಟಮಠಗಳಲ್ಲಿ ಒ೦ದಾದ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಚತುರ್ಥಪರ್ಯಾಯ ಮಹೋತ್ಸವವು 2024ನೇ ಜನವರಿಯ 18ರಿ೦ದ ಆರ೦ಭಗೊ೦ಡು 2026ನೇ ಜನವರಿ ತಿ೦ಗಳ 17 ರ೦ದು ಮುಕ್ತಾಯಗೊಳ್ಳಲಿದೆ. ಶ್ರೀಪಾದರ ನಾಲ್ಕನೇ ಪರ್ಯಾಯವು ಬಹಖ ಮಹತ್ವವನ್ನು ಪಡೆದಿದೆ.ವಿಶ್ವಗೀತಾ ಪರ್ಯಾಯವೆ೦ದು ಘೋಷಿಸಲಾಗಿದೆ. ಈಗಾಗಲೇ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯಕ್ಕೆ ಸಕಲ ಸಿದ್ದತೆಯನ್ನು ಉಡುಪಿಯಲ್ಲಿ ಮಾಡಲಾಗಿದೆ.ದಿನದಿ೦ದ ದಿನಕ್ಕೆ
ಉಡುಪಿ:ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ,ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾ ಮಂಡಲ(ರಿ) ಉಡುಪಿ ಇದರ ಅಂಗಸಂಸ್ಥೆ ತುಷಿಮಾಮ ಕಡಿಯಾಳಿ ಇವರ ನೇತೃತ್ವದಲ್ಲಿ ಭಾನುವಾರ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಮತ್ತು ಉಡುಪಿ ಜಿಲ್ಲೆಯ ಸಮಸ್ತ ಬ್ರಾಹ್ಮಣ ವಲಯ ಹಾಗೂ ಬ್ರಾಹ್ಮಣ ಬಂಧುಗಳ ಸಹಕಾರದೊಂದಿಗೆ ಪೊಡವಿಗೊಡೆಯ ಶ್ರೀಕೃಷ್ಣದೇವರಿಗೆ ವಿಷ್ಣುಸಹಸ್ರ
ಮುಂಬೈ: ಮಹಾರಾಷ್ಟ್ರದ ಗ್ಲೌಸ್ ಕಾರ್ಖಾನೆಯೊಂದರಲ್ಲಿ ಭಾನುವಾರ ಬೆಳ್ಳಂಬೆಳಿಗ್ಗೆ ಸಂಭವಿಸಿರುವ ಭಾರೀ ಅಗ್ನಿ ಅವಘಡದಲ್ಲಿ ಆರು ಸಜೀವ ದಹನವಾಗಿರುವ ಘಟನೆ ನಡೆದಿದೆ. ಇಂದು ಬೆಳಗಿನ 2 ಗಂಟೆಯ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ಈ ವೇಳೆ ಕಾರ್ಖಾನೆಯ ಒಳಗೆ ಸಿಲುಕಿದ್ದ 6 ಜನ ಸಾವಿಗೀಡಾಗಿದ್ದಾರೆ. ಕೂಡಲೇ ಆವರಣದೊಳಗೆ ಮಲಗಿದ್ದ ಕಾರ್ಮಿಕರು ಅಗ್ನಿಶಾಮಕ ದಳಕ್ಕೆ