ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ನಮ್ಮ ದೇಶದ ಬಡಜನರ ಬಗ್ಗೆ ಕಾರ್ಮಿಕರ ಬಗ್ಗೆ ಮಧ್ಯಮ ವರ್ಗದ ಜನರ ಬಗ್ಗೆ ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲದ ಮೋದಿಯವರ ಅವಶ್ಯಕತೆ ನಮ್ಮ ಭಾರತ ದೇಶಕ್ಕೆ ಇದೆಯಾ, ಸುರೇಶ್ ಶೆಟ್ಟಿ ಬನ್ನಂಜೆ ಪ್ರಶ್ನೆ

ನನಗೆ ಕೇವಲ 100 ದಿವಸ ಅಧಿಕಾರ ನೀಡಿ ನಾನು ನಮ್ಮ ದೇಶವನ್ನು ಹಾಗೂ ನಮ್ಮ ದೇಶದ ಜನಸಾಮಾನ್ಯರನ್ನು ಕೇವಲ 100 ದಿವಸಗಳಲ್ಲಿ ಶ್ರೀಮಂತರನ್ನಾಗಿ ಮಾಡುತ್ತೇನೆ ನಮ್ಮ ದೇಶವನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸುತ್ತೇನೆ ವಿದೇಶದಲ್ಲಿ ಇರುವಂತಹ 16 ಲಕ್ಷ ಕೋಟಿ ಕಪ್ ಹಣವನ್ನು ತಂದು ದೇಶದ ಪ್ರತಿಯೊಬ್ಬರ ಜನಸಾಮಾನ್ಯರು ಬ್ಯಾಂಕ್ ಅಕೌಂಟ್ ಗೆ ₹15 ಲಕ್ಷ ರೂಪಾಯಿ ಹಾಕುತ್ತೇನೆ ಎಂದು ಹೇಳಿ ಬೊಗಳೆ ಬಿಟ್ಟು ನಮ್ಮ ದೇಶದ ಅಧಿಕಾರವನ್ನು ಚುಕ್ಕಾಣೆಯನ್ನು ಹಿಡಿದಂತಹ,ಅಷ್ಟು ಮಾತ್ರವಲ್ಲದೆ ಪಾಕಿ ಸ್ಥಾನವನ್ನು ನಾನು ಬಡಿದೋಡಿಸುತ್ತೇನೆ ಭಯೋತ್ಪಾದಕನೇಯನ್ನು ನಿರ್ಮೂಲ ಮಾಡುತ್ತೇನೆ ಚೀನಾವನ್ನು ಹಿಮೈಟ್ಟಿಸುತ್ತೇನೆ ಎಂದು ಸುಳ್ಳು ಸುಳ್ಳನ್ನು ಹೇಳಿ ನಮ್ಮ ದೇಶದ ಜನಸಾಮಾನ್ಯರನ್ನು ಮೋಸಗೊಳಿಸಿದಂತಹ ನರೇಂದ್ರ ಮೋದಿಯವರು ಹತ್ತು ವರ್ಷದಲ್ಲಿ ಮಾಡಿದಂತಹ ಸಾಧನೆ ಏನು? ಒಂದು ರೀತಿಯಲ್ಲಿ ಕೋವಿಡ್ ಸಂದರ್ಭದಲ್ಲಿಯೂ ದೀಪ ಬೆಳಗಿಸಿ ಗಂಟೆ ಹೊಡೆಯಿರಿ ಎಂದು ಹೇಳಿ ಮೋಸ ಮಾಡಿದ ಕೇವಲ ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸಿ ನಮ್ಮ ದೇಶದ ಜನಸಾಮಾನ್ಯರನ್ನು ಮೋಸಗೊಳಿಸಿ ಅಂಬಾನಿ ಹಾಗೂ ಅದಾನಿ ಹಾಗೂ ಇನ್ನಿತರ ಶ್ರೀಮಂತ ಉದ್ಯಮಿಗಳನ್ನು ಬೆಳೆಸಿ ನಮ್ಮನ್ನೆಲ್ಲ ಕೈ ಬಿಟ್ಟಂತಹ ಕೇವಲ ದೇವರ ಹೆಸರಿನಲ್ಲಿ ಹಾಗೂ ಹಿಂದುತ್ವದ ಹೆಸರಿನಲ್ಲಿ ಅಧಿಕಾರವನ್ನು ಪಡೆಯಲು ಯತ್ನಿಸುತ್ತಿರುವಂತಹ ಮೋದಿಯಂತವರ ಅವಶ್ಯಕತೆ ನಮ್ಮ ದೇಶದ ಜನರಿಗೆ ಖಂಡಿತವಾಗಿಯೂ ಇಲ್ಲ.

ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದರೆ ಮಾತ್ರ ನಮ್ಮ ದೇಶದ ಸಾಮಾನ್ಯ ಜನರು ಬದುಕಿ ಉಳಿಯಬಹುದು ತಮ್ಮ ಬದುಕನ್ನು ಕಟ್ಟಿಕೊಳ್ಳಬಹುದು ಆದುದರಿಂದ ನುಡಿದಂತೆ ನಡೆದಂತ ನಮ್ಮ ಕಾಂಗ್ರೆಸ್ ಪಕ್ಷವನ್ನು ನಮ್ಮ ಉಡುಪಿ ಕ್ಷೇತ್ರದ ಜನಸಾಮಾನ್ಯರು ಬೆಂಬಲಿಸಬೇಕಾಗಿದೆ ಎಂದು ಬನ್ನಂಜೆ ವಾರ್ಡಿನಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಉಡುಪಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರ ಸಭೆಯನ್ನುದ್ದೇಶಿಸಿ ಮಾತನಾಡಿದರು.

No Comments

Leave A Comment