ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಉಡುಪಿ ಬಿಜೆಪಿಯ ಕಕ್ಕು೦ಜೆ ನಗರಸಭಾ ವಾರ್ಡಿನ ನ ಸದಸ್ಯ ಡಿ.ಬಾಲಕೃಷ್ಣ ಶೆಟ್ಟಿಯ ಗೂಂಡಾಗಿರಿ-ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ
ಉಡುಪಿ: ಉಡುಪಿ ಬಿ ಜೆ ಪಿಯ ಕಕ್ಕು೦ಜೆ ವಾರ್ಡಿನ ನಗರಸಭಾ ಸದಸ್ಯ ಡಿ.ಬಾಲಕೃಷ್ಣ ಶೆಟ್ಟಿ, ಆತನ ಪತ್ನಿ ಹಾಗೂ ಇತರ ಸಹಚರರೊ೦ದಿಗೆ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಪ್ರಕರಣದ ದೂರುದಾರರಿಗೂ ಹಾಗೂ1 ನೇ ಆರೋಪಿ ಡಿ ಬಾಲಕೃಷ್ಣ ಶೆಟ್ಟಿಗೂ ಸುಮಾರು 4 ವರ್ಷಗಳಿಂದ ಸವಿತಾರ ಮನೆ ಜಾಗ ಹಾಗೂ ಗಂಡನ ಗ್ಯಾರೇಜ್ ವಿಚಾರದಲ್ಲಿ ತಕರಾರು ಇದ್ದು, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ.
ನಿನ್ನೆ ದಿನಾಂಕ: 10/05/2024 ರಂದು ಬೆಳಿಗ್ಗೆ 10:30 ಗಂಟೆಗೆ ಹಾಗೂ ಮಧ್ಯಾಹ್ನ 3:30 ಗಂಟೆಗೆ 2 ಬಾರಿ ಪ್ರಕರಣದ 1 ನೇ ಆರೋಪಿ ಇತರ ಆರೋಪಿಯೊಂದಿಗೆ ದೂರುದಾರರ ಗಂಡನ ಗ್ಯಾರೇಜ್ ನ ಬಳಿ ಹೋಗಿ ಮಣಿಪಾಲ ಠಾಣೆಯಲ್ಲಿ ದಾಖಲಿಸಿದ ಕೇಸ್ ನ್ನು ವಾಪಾಸು ಪಡೆಯುವಂತೆ ಇಲ್ಲದೇ ಇದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೋಗಿರುತ್ತಾರೆ.
ಸಂಜೆ ಸುಮಾರು 7:30 ಗಂಟೆಗೆ ಸವಿತಾ ಹಾಗೂ ಅವರ ಗಂಡ ಮತ್ತು ಮಕ್ಕಳು ಕಕ್ಕುಂಜೆ ನಾರಾಯಣ ನಗರದಲ್ಲಿರುವ ಗ್ಯಾರೇಜ್ ನ ಬಳಿ ಹೋಗಿದ್ದಾಗ 1 ನೇ ಆರೋಪಿ ಡಿ ಬಾಲಕೃಷ್ಣಶೆಟ್ಟಿ ಹಾಗೂ ಇತರ 29 ಜನರೊಂದಿಗೆ ಸವಿತಾ ಅವರ ಗಂಡನ ಗ್ಯಾರೇಜ್ ಬಳಿ ಸ್ಟೀಲ್ ರಾಡ್ ನ್ನು ಹಿಡಿದುಕೊಂಡು ಅಕ್ರಮ ಕೂಟ ಸೇರಿ ನಿಂತುಕೊಂಡಿದ್ದು, ದೂರುದಾರರ ಗಂಡ ಗ್ಯಾರೇಜ್ ನ ಬಳಿ ನಿಂತ ವಿಚಾರದಲ್ಲಿ ಪ್ರಶ್ನಿಸಿದಾಗ ನಾವು ಗ್ಯಾರೇಜ್ ಕೀಳಲು ನಿಂತುಕೊಂಡಿದ್ದೇವೆ.
ನೀನು ಏನು ಮಾಡಿಕೊಳ್ಳುತ್ತೀಯೋ ಮಾಡಿಕೋ ಎಂದು ದೂರುದಾರರ ಗಂಡನನ್ನು ದೂಡಿದ್ದು, ತಡೆಯಲು ಹೋದ ದೂರುದಾರರಿಗೆ ಆರೋಪಿತರಾದ ಡಿ.ಬಾಲಕೃಷ್ಣ ಶೆಟ್ಟಿ,ಆತನ ಪತ್ನಿ ರಕ್ಷಿತಾ ಶೆಟ್ಟಿ, ರಾಜು, ಗಿರೀಶ್ ಎಂಬುವವರು ಸ್ಟೀಲ್ ರಾಡ್ ನಿಂದ ದೂರುದಾರರಿಗೆ ಹಲ್ಲೆ ನಡೆಸಿ ಗಿರೀಶನು ಸೀರೆ ಸೆರಗು ಎಳೆದು ಬಲಕೆನ್ನೆಗೆ ಹೊಡೆದಿರುತ್ತಾರೆ, ಅರುಣನು ಕೈಯಿಂದ ಎಳೆದು ಕೆಳಗೆ ಬೀಳಿಸಿ ಕಾಲಿನಿಂದ ತುಳಿದಿದ್ದು ಹಾಗೂ ಬಿಡಿಸಲು ಬಂದ ದೂರುದಾರರ ಗಂಡನಿಗೂ ಆರೋಪಿ ರಾಜು ಸ್ಟೀಲ್ ರಾಡ್ ನಿಂದ ಹಲ್ಲೆ ನಡೆಸಿರುತ್ತಾರೆ.
ಸವಿತಾ ಹಾಗೂ ಅವರ ಗಂಡ ಆಸ್ಪತ್ರೆಗೆ ಸೇರಲು ಸ್ಕೂಟರ್ ನಲ್ಲಿ ಹೋಗುವಾಗ ಕೂಡಾ ಆರೋಪಿತರು ಸ್ಕೂಟರ್, ಬೈಕ್ ಹಾಗೂ ಕಾರಿನಲ್ಲಿ ದೂರುದಾರರು ಹೋಗುತ್ತಿದ್ದ ಸ್ಕೂಟರ್ ನ್ನು ಹಿಂಬಾಲಿಸಿ ಆಸ್ಪತ್ರೆಗೆ ಹೋಗ ಬಾರದೆಂದು ಕೊಲೆ ಬೆದರಿಕೆ ಹಾಕಿರುತ್ತಾರೆ೦ದು ದೂರುದಾರು ತಿಳಿಸಿದ್ದಾರೆ.
ಗಾಯಗೊ೦ಡವರು ಉಡುಪಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸವಿತಾರವರಿಗೆ ತಲೆಗೆ ಗ೦ಭೀರಗಾಯವಾಗಿದೆ.
ಈ ಹಿ೦ದೆಯು ಇದೇ ನಗರಸಭೆಯ ಡಿ.ಬಾಲಕೃಷ್ಣ ಶೆಟ್ಟಿಯು ಅ೦ಬಾಗಿಲಿನ ಫೋಟೋಗ್ರಾಫರ್ ಒಬ್ಬರಿಗೆ ಉಡುಪಿಯ ಸಿಪಿಐಯವರಿ೦ದ ಪದೇ ಪದೇ ಕಿರುಕುಳನೀಡಿ ನಿಮ್ಮ ಮೇಲೆ ಡಿ.ಬಾಲಕೃಷ್ಣ ಶೆಟ್ಟಿ ದೂರು ನೀಡಿದ್ದಾರೆ೦ದು ಇಲಾಖೆಯ ಅಧಿಕಾರಿಯನ್ನು ದುರುಪಯೋಗ ಪಡಿಸಿಕೊ೦ಡ ಬಗ್ಗೆಯೂ ಆರೋಪಗಳಿವೆ.
ಮಾತ್ರವಲ್ಲದೇ ಉಡುಪಿಯ ಉದ್ದಮಿಯೊಬ್ಬರಿ೦ದ ಲಕ್ಷ ರೂಪಾಯಿಯನ್ನು ಸಾಲಪಡೆದು ಅದನ್ನು ಪ್ರಾಮಾಣಿಕವಾಗಿ ವಾಪಾಸು ಕೇಳಿದ್ದಕ್ಕೆ ಬೆದರಿಕೆಯನ್ನು ಹಾಕಿದ ಬಗ್ಗೆಯೂ ಆರೋಪಗಳಿವೆ.ಅಕ್ರಮಮರದ ವ್ಯಾಪರವನ್ನು ನಡೆಸುತ್ತಿದ್ದರೂ ಅರಣ್ಯ ಇಲಾಖೆಯವರು ಈ ಶೆಟ್ಟಿಯ ವಿರುದ್ಧ ಕ್ರಮಕೊಳ್ಳುತ್ತಿಲ್ಲವೆ೦ಬ ಆರೋಪವೂ ಇದೆ.
ಪೊಲೀಸರರ ಮೇಲೆ ಒತ್ತಡವನ್ನು ಹೇರಿ ಇದೀಗ ಬೇಲ್ ಗಾಗಿ ಪೊಲೀಸರ ಕಣ್ಣು ತಪ್ಪಿಕೊ೦ಡು ತಿರುಗಾಡುತಿದ್ದಾನೆ೦ಬ ಆರೋಪ ಪೊಲೀಸ ಮೇಲಿದೆ.ಕೆಲವು ಪೊಲೀಸರು ಹಾಗೂ ತ್ರಿಸ್ಟಾರ್ ವ್ಯಕಿಗಳು ಇತನ ಛೇಲಾಗಳಾಗಿದ್ದಾರೆ೦ಬ ಆರೋಪಿ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಈ ಬಗ್ಗೆ ಉಡುಪಿ ಪೊಲೀಸ್ ಬ್ಲಾಗ್ ನಲ್ಲಿ ಈ ಸುದ್ದಿಯನ್ನು ಪೊಲೀಸರು ಪ್ರಕಟಿಸದೇ ಇರಲು ಕಾರಣ ವೇನು ಎ೦ಬುವುದು ಸಾರ್ವಜನಿಕರ ವಲಯದಲ್ಲಿ ಚರ್ಚೆ ನಡೆಯುತ್ತಿದೆ ಮಾತ್ರವಲ್ಲದೇ ಎಸ್ಪಿಯವರು ಈ ಘಟನೆಯ ಬಗ್ಗೆ ಕೂಡಲೇ ಕ್ರಮಕೈಕೊಳ್ಳುವ೦ತೆ ಜನರು ವಿನ೦ತಿಸಿದ್ದಾರೆ.
ಈ ಬಗ್ಗೆ ಉಡುಪಿ ಮಹಿಳಾ ಠಾಣೆಯಲ್ಲಿ ಅ.ಕ್ರ: 27/2024 ಕಲಂ: 143,144, 147, 148, 323, 324, 354 (ಬಿ), 341, 506 ಜೊತೆಗೆ 149 ಐ.ಪಿ.ಸಿ ಪ್ರಕರಣ ದಾಖಲಾಗಿದೆ.