ಉಡುಪಿಯ ಶ್ರೀಕೃಷ್ಣ ದೇವರಿಗೆ ಇ೦ದು ಭಾನುವಾರದ೦ದು ಶ್ರೀರಾಮನವಮಿಯ ಪ್ರಯುಕ್ತ ವಿಶೇಷ ಅಲ೦ಕಾರ. ಹಾಗೂ ಶ್ರೀಮುಖ್ಯಪ್ರಾಣದೇವರಿಗೆ ವಿಶೇಷ ಅಲ೦ಕಾರವನ್ನು ಮಾಡಲಾಯಿತು.
ರಾಮೇಶ್ವರಂ: ರಾಮೇಶ್ವರಂ ದ್ವೀಪ ಮತ್ತು ಮುಖ್ಯ ಭೂಭಾಗದ ನಡುವೆ ರೈಲು ಸಂಪರ್ಕವನ್ನು ಒದಗಿಸುವ ಪಂಬನ್ ಸಮುದ್ರ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು. ಪಂಬನ್ ಸೇತುವೆಯನ್ನು ತೆರೆದ ನಂತರ, ಪ್ರಧಾನಿ ಮೋದಿ ರಾಮೇಶ್ವರಂ - ತಾಂಬರಂ ಎಕ್ಸ್‌ಪ್ರೆಸ್‌ನಿಂದ ಹೊಸ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿದರು. ರೈಲು ಪಂಬನ್ ಸೇತುವೆಯನ್ನು
ಕೊಲಂಬೋ, ಏಪ್ರಿಲ್ 06: ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಶ್ರೀಲಂಕಾ ಭೇಟಿ ಪೂರ್ಣಗೊಂಡಿದೆ. ಇಂದು ಅನುರಾಧಪುರದಲ್ಲಿ ಮಹೋ-ಅನುರಾಧಪುರ ರೈಲು ಮಾರ್ಗ ಉದ್ಘಾಟಿಸಿದರು. ಶ್ರೀಲಂಕಾ ಪ್ರವಾಸದ ಕೊನೆಯ ದಿನವಾದ ಇಂದು ಬೆಳಗ್ಗೆ ಬೇಗನೆ ಅನುರಾಧಪುರಕ್ಕೆ ಭೇಟಿ ನೀಡಿದ್ದರು. ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರೊಂದಿಗೆ ಜಯ ಶ್ರೀ ಮಹಾ ಬೋಧಿ
ಉತ್ತರ ಕನ್ನಡ, ಏಪ್ರಿಲ್ 06: ವಿಶ್ವಗುರು ಆಗಬೇಕನ್ನುವ ಭಾರತ (India), ವಿವಿಧ ರಂಗದಲ್ಲಿ ತನ್ನದೆ ಆದ ಛಾಪು ಮೂಡಿಸುವುದರ ಮೂಲಕ ಈಡಿ ಜಗತ್ತೆ ತನ್ನತ್ತ ನೋಡುವಂತ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿದೆ. ಅದರ ಮುಂದುವರೆದ ಭಾಗವಾಗಿ ಹಿಂದೂ ಮಹಾಸಾಗರಕ್ಕೆ (Indian Ocean) ಅಂಟಿಕೊಂಡಿರುವ 9 ದೇಶಗಳ ಜೊತೆ ಮೈತ್ರಿ ಮಾಡಿಕೊಂಡು, ನೌಕಾಪಡೆಯಲ್ಲಿ ವಿನೂತನ ಕಾರ್ಯಾಚರಣೆಗೆ ಮುಂದಾಗಿದ್ದು,
ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ಚರ್ಚಾಸ್ಪದ ವಕ್ಫ್ ತಿದ್ದುಪಡಿ ಮಸೂದೆ-2025ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ನಿನ್ನೆ ಶನಿವಾರ ಅಂಕಿತ ಹಾಕಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ, 2025 ಕ್ಕೆ ಸಹ ತಮ್ಮ ಒಪ್ಪಿಗೆ ನೀಡಿದ್ದಾರೆ. ಈ ಮೂಲಕ ಸಂಸತ್ತಿನ ಈ ಕಾಯ್ದೆಗೆ ಏಪ್ರಿಲ್ 5,
ವಾಷಿಂಗ್ಟನ್: ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಡೊನಾಲ್ಡ್ ಟ್ರಂಪ್ ಅವರು ದೇಶದೊಳಗೆ ವಿರೋಧ ಎದುರಿಸಿದ್ದು, ಅವರು ಒಡೆದು ಆಳುವ ನೀತಿ ಹೊಂದಿದ್ದಾರೆ ಎಂದು ಆರೋಪಿಸಿ ಅಮೆರಿಕದ ಪ್ರಮುಖ ನಗರಗಳ ಬೀದಿಗಳಲ್ಲಿ ಹತ್ತಾರು ಸಾವಿರ ಜನರು ಪ್ರತಿಭಟನೆ ನಡೆಸಿದರು. ಸರ್ಕಾರದ ಹಲವು ಇಲಾಖೆಗಳಲ್ಲಿ ಸಿಬ್ಬಂದಿ ಕಡಿತದಿಂದ ಹಿಡಿದು ವ್ಯಾಪಾರ
ಥೈಲ್ಯಾಂಡ್: ಥೈಲ್ಯಾಂಡ್‌ನಲ್ಲಿ ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರೊಂದಿಗಿನ ಪ್ರಧಾನಿ ಮೋದಿ ಅವರ ಭೇಟಿಯ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಾಹಿತಿ ನೀಡಿದ್ದಾರೆ. "ಪ್ರಜಾಪ್ರಭುತ್ವ, ಸ್ಥಿರ, ಶಾಂತಿಯುತ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶಕ್ಕೆ ಭಾರತದ ಬೆಂಬಲವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ" ಎಂದು ವಿಕ್ರಮ್ ಮಿಸ್ರಿ ಹೇಳಿದ್ದಾರೆ. ಬಾಂಗ್ಲಾದೇಶದೊಂದಿಗೆ ಸಕಾರಾತ್ಮಕ
ಚೆನ್ನೈ : ಮಹತ್ವದ ಬೆಳವಣಿಗೆಯೊಂದರಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಅಣ್ಣಾಮಲೈ ಹಿಂದೆ ಸರಿದಿದ್ದಾರೆ. ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರು ಪಕ್ಷದ ಮುಂದಿನ ಬಿಜೆಪಿ ಮುಖ್ಯಸ್ಥರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುವುದು ಮತ್ತು ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳಿದರು. ಕೊಯಮತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ, ನಾನು ಬಿಜೆಪಿ
ಚಂಡೀಗಢ: ಏ.04, 2 ಕೋಟಿ ಮೌಲ್ಯದ ಹೆರಾಯಿನ್ ಜೊತೆ ಪಂಜಾಬ್‌ನ ಮಹಿಳಾ ಕಾನ್‌ಸ್ಟೇಬಲ್ ನ್ನು ಬಂಧಿಸಲಾಗಿದೆ. ಆಕೆಯನ್ನು ಜಿಲ್ಲಾ ನ್ಯಾಯಾಲಯವು ಒಂದು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. 17.71 ಮಿ.ಗ್ರಾಂ ಹೆರಾಯಿನ್ ಜೊತೆ ಮಹಿಳಾ ಕಾನ್‌ಸ್ಟೇಬಲ್ ಅಮನ್‌ದೀಪ್ ಕೌರ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣ ಬೆನ್ನಲ್ಲೇ ಆಕೆಯನ್ನು ಸೇವೆಯಿಂದ ವಜಾಗೊಳಿಸಲಾಗಿದ್ದು,
ಮಂಗಳೂರು:ಏಪ್ರಿಲ್, 4. ಕೇಂದ್ರ ಸರ್ಕಾರವು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆಗೆ ಅನುಮೋದನೆ ಪಡೆದ ಬೆನ್ನಲ್ಲೇ, ಕರ್ನಾಟಕದ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪಾಡಿ ಅವರಿಗೆ ವಿದೇಶಿ ವ್ಯಕ್ತಿಗಳಿಂದ ಬೆದರಿಕೆ ಬಂದಿದೆ. ಈ ವಿಚಾರವಾಗಿ ಅನ್ವರ್ ಮಾಣಿಪ್ಪಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಿದ್ದಾರೆ. ಇಂಟರ್ನೆಟ್ ಆಧಾರಿತ