ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಬೆಂಗಳೂರು: ವಿಧಾನಪರಿಷತ್ ಸದಸ್ಯರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಫೋಟೋ ಶೂಟ್ ಮಾಡಿಸಿದ್ದಾರೆ. ವಿಧಾನಸೌಧದ ಮುಂಭಾಗ ನಡೆದ ಈ ಫೋಟೋ ಶೂಟ್ ನಲ್ಲಿ ಪಕ್ಷ ಬೇಧ ಮರೆತು ಎಲ್ಲಾ ಪಕ್ಷಗಳ ಸದಸ್ಯರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಸಚಿವರಾದ ಮಧು ಬಂಗಾರಪ್ಪ, ಬೋಸರಾಜು, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಪಕ್ಷ ನಾಯಕ ಕೋಟಾ ಶ್ರೀನಿವಾಸ

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರಿಗೂ ಸಂಬಳ ಕೊಡಲು ಕಷ್ಟವಾಗುವ ಸ್ಥಿತಿ ಬಂದಿದೆ. ಶ್ರೀಮಂತ ದೇವಾಲಯಕ್ಕೆ ಸರಕಾರ ಕನ್ನ ಹಾಕಲು ಮುಂದಾಗಿದೆ. ದೇವಾಲಯಕ್ಕೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಒಂದು ಹುಂಡಿ ಇಟ್ಟು ಬಿಡಿ. ದಾನಿಗಳು ಅಲ್ಲೇ ಬಂದು ದಾನ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಈಗಾಗಲೇ ಜೆಡಿಎಸ್ ರಂಗ ತಾಲೀಮು ಆರಂಭಿಸಿದೆ. ಆದರೆ ಕ್ಷೇತ್ರ ಹಂಚಿಕೆ ಮಾತ್ರ ಅಂತಿಮವಾಗಿಲ್ಲ ಹೀಗಾಗಿ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ದಿಢೀರ್ ದೆಹಲಿ ಪ್ರವಾಸ ಮಾಡಿದ್ದಾರೆ. ದೆಹಲಿಯಲ್ಲಿ ಹೆಚ್​ಡಿ ಕುಮಾರಸ್ವಾಮಿ ಮತ್ತು ಅಮಿತ್ ಶಾ ಮಾತು ಕತೆ ನಡೆಸಿದ್ದಾರೆ. ಈ ವೇಳೆ

ಉಡುಪಿ: ಉಡುಪಿನಗರದ ಗು೦ಡಿಬೈಲಿನಲ್ಲಿರುವ ಅಧಿಕೃತ ಯಮಹಾ "ಬ್ಲೂಸ್ಪೇರ್ ಯಮಹಾ ಡೀಲರ್" ಉಡುಪಿ ಮೋಟಾರ್ಸ್ ಯಮಹಾ ಫ್ಯಾಸಿನೊ ಮತ್ತು ರೇಝರ್ ಸ್ಕೂಟರ್ ಮೈಲೇಜ್ ಚಾಲೆ೦ಜ್ ಕಾರ್ಯಕ್ರಮವನ್ನು ಹಮ್ಮಿಕೊ೦ಡಿರುತ್ತಾರೆ. ವಿಶ್ವದ ಪ್ರಪ್ರಥಮ ಹೈಬಿಡ್ ಸ್ಕೂಟರನ್ನು ಪ್ರಸ್ತುತ ಪಡಿಸಿದ ಯಮಹಾ ಕ೦ಪನಿಯ ಫ್ಯಾಸಿನೊ ಮತ್ತು ರೇಝರ್ ಸ್ಕೂಟರ್ ಗಳು ಸ್ಕೂಟರ್ ವಿಭಾಗದಲ್ಲಿ ಅತ್ಯಧಿಕ ಮೈಲೇಜ್

ಮಂಗಳೂರು: ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಖ್ಯಾತ ಕಾದಂಬರಿಕಾರ ಕೆ.ಟಿ.ಗಟ್ಟಿ(86) ನಿಧನರಾಗಿದ್ದಾರೆ. ಮೂಲತ ಕಾಸರಗೋಡಿನ ಕೂಡ್ಲುವಿನವರಾದ ಕೂಡ್ಲು ತಿಮ್ಮಪ್ಪ ಗಟ್ಟಿ ಪ್ರಾಧ್ಯಾಪಕರಾಗಿ ದುಡಿದವರು. ಪತ್ರಿಕಾ ಕಾದಂಬರಿಗಳ ಮೂಲಕ ಹೆಸರುವಾಸಿಯಾಗಿದ್ದರು. ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ 22 ಜುಲೈ 1938ರಲ್ಲಿ ಜನನ. ತಂದೆ ಧೂಮಪ್ಪ ಗಟ್ಟಿ.

ಪಡುಬಿದ್ರಿ: ಫೆ 18: ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಇದರ ನೂತನ ನವೀಕೃತ ಹವಾನಿಯಂತ್ರಿತ ಹೆಜಮಾಡಿ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಭಾನುವಾರ ಪೂರ್ವಾಹ್ನ 10 ಗಂಟೆಗೆ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ವೈ ಸುಧೀರ್‌ ಕುಮಾರ್  ವಹಿಸಿದ್ದರು. ಹೆಜಮಾಡಿ ಪೇಟೆಯಿಂದ ಹೆಜಮಾಡಿ ಶಾಖೆಯಯವರೆ ಗಣ್ಯರನ್ನು ಮೆರವಣಿಗೆಯಲ್ಲಿ ಕರೆ

ರಾಯಚೂರು:ಮು೦ಗ್ಲಿ ಪ್ರಾಣದೇವ ಸೇವಾ ಸಮಿತಿ ಮತ್ತು ಯುವ ವಿಪ್ರ ವೃಂದ ರಾಯಚೂರು ಇವರಿಂದ ಚಾಂದ್ರಮಧ್ವನವಮಿ ಪ್ರಯುಕ್ತ ರಾಯಚೂರುನಲ್ಲಿ ಭಾವಿಪರ್ಯಾಯ ಪೀಠಾಧೀಶರಾದ ಶೀರೂರು ಶ್ರೀವೇದವರ್ಧನ ತೀರ್ಥರು ಭೇಟಿ ನೀಡಿದರು. ಈ ಸ೦ದರ್ಭದಲ್ಲಿ ಶ್ರೀಗಳವರನ್ನು ಸ್ವಾಗತಿಸಿ ಭವ್ಯ ಮೆರವಣಿಗೆಯಲ್ಲಿ ಪುರಪ್ರವೇಶವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಊರಿನ ಮುಖ್ಯಸ್ಥರಾದ ರಾಮರಾವ್ ದೇಸಾಯಿ, ಜಯ ಕುಮಾರ್

ರಾಜನಂದಗಾಂವ್:ಫೆ 18: ಹಿರಿಯ ಜೈನ ಧರ್ಮಗುರು ಆಚಾರ್ಯ ವಿದ್ಯಾಸಾಗರ ಮಹಾರಾಜ ಅವರು ಇಂದು ಛತ್ತೀಸ್ಗಢದ ಡೊಂಗರಗಢದಲ್ಲಿ ಚಂದ್ರಗಿರಿ ತೀರ್ಥದಲ್ಲಿ ನಿಧನರಾಗಿದ್ದಾರೆ. ಆಚಾರ್ಯ ವಿದ್ಯಾಸಾಗರ ಮಹಾರಾಜ ಅವರು ಸಲ್ಲೇಖನ ವೃತಕೈಗೊಂಡಿದ್ದರು.ಸಲ್ಲೇಖನ ಎಂಬುದು ಜೈನ ಧಾರ್ಮಿಕ ಆಚರಣೆಯಾಗಿದ್ದು, ಆಧ್ಯಾತ್ಮಿಕ ಶುದ್ಧೀ ಕರಣಕ್ಕಾಗಿ ಸ್ವಯಂಪ್ರೇರಿತ ಉಪವಾಸ ಎಂದು ತೀರ್ಥರ ಹೇಳಿಕೆ ತಿಳಿಸಿದೆ. ಆಚಾರ್ಯ ವಿದ್ಯಾಸಾಗರ

ಬೆಂಗಳೂರು: ಜನವರಿ 1 ರಂದು ಕಪ್ಪು ಕುಳಿಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳನ್ನು ಅಧ್ಯಯನ ಮಾಡಲು ಉಪಗ್ರಹ ಉಡಾವಣೆ ಮಾಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಶನಿವಾರ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಇಸ್ರೋ ಇಂದು ಸಂಜೆ ಭಾರತದ ವಿಶೇಷ ಹವಾಮಾನ ಉಪಗ್ರಹವಾದ INSAT-3DS ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಉಪಗ್ರಹವು ಅಸ್ತಿತ್ವದಲ್ಲಿರುವ

ಬಾಗಲಕೋಟೆ: ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ವಿವಾದಕ್ಕೆ ಸಂಬಂಧಿಸಿದಂತೆ ರಂಭಾಪುರಿ ಶ್ರೀಗಳ ವಿರುದ್ಧ ಮಠದ ಭಕ್ತರು ಪ್ರತಿಭಟನೆ ನಡೆಸಿದ್ದು, ಅವರ ಕಾರಿಗೆ ಚಪ್ಪಲಿ ಎಸೆದಿದ್ದಾರೆ. ಬಾಗಲಕೋಟೆ ತಾಲೂಕಿನ ಕಲಾದಗಿಯಲ್ಲಿ ಈ ಘಟನೆ ನಡೆದಿದೆ. ಉದಗಟ್ಟಿ ಗ್ರಾಮಕ್ಕೆ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಶ್ರೀಗಳ ಕಾರನ್ನು ಅಡಗಟ್ಟಿದ್ದ ಭಕ್ತರು, ವಿವಾದ ಕೋರ್ಟ್‌ನಲ್ಲಿದ್ದಾಗಲೇ ಗಂಗಾಧರ