ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ: ವಾರ್ಷಿಕ ದೀಪೋತ್ಸವ ಸ೦ಪನ್ನ
ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿನ ವಾರ್ಷಿಕ ದೀಪೋತ್ಸವವು ಎರಡು ದಿನಗಳ ಕಾಲ ವಿಜೃ೦ಭಣೆಯಿಂದ ನೆಡೆಯಿತು ಶ್ರೀ ದೇವರರಿಗೆ ಪಂಚಾಮೃತ ಅಭಿಷೇಕ , ವಿಶೇಷ ಅಲಂಕಾರ ವನ್ನು ಪ್ರಧಾನ ಅರ್ಚಕ ದಯಾಘನ ಭಟ್ ನೆರವೇರಿಸಿದರು.
ಶ್ರೀದೇವರಿಗೆ ಪಲ್ಲಕಿ ಉತ್ಸವ ,ಧಾತ್ರಿ ವನ ದಲ್ಲಿ ಶ್ರೀದೇವರಿಗೆ ಮಹಾಪೂಜೆ , ಕಾರ್ತಿಕ ದೀಪೋತ್ಸವ ಅಂಗವಾಗಿ ವನ ಭೋಜನ , ಕೆರೆ ದೀಪ , ಬಳಿಕ ರಾತ್ರಿ ಪೇಟೆ ಉತ್ಸವ ಪ್ರಯುಕ್ತ ರಜತ ಲಾಲ್ಕಿ ಉತ್ಸವ ದೇವಳದ ದಿಂದ ಹೊರಟ ಕೊಳದಪೇಟೆ , ರಥಬೀದಿ , ಬೀಡಿನ ಗುಡ್ಡೆ ತನಕ ಸಾಗಿ ಅಲ್ಲಲ್ಲಿ ಕಟ್ಟೆ ಪೂಜೆ , ವಿಶೇಷ ಸುಡುಮದ್ದು ಪ್ರದರ್ಶನ ಜರಗಿತು. ಶುಕ್ರವಾರದ೦ದು ಅವಭ್ರತೋತ್ಸವ ಅಂಗವಾಗಿ ಶ್ರೀದೇವರ ಪೇಟೆ ಉತ್ಸವದಲ್ಲಿ ಭಕ್ತರೂ ಓಕುಳಿ ಕಾರ್ಯಕ್ರಮಜರಗಿತು.
ದೇವಳದ ಮುಕ್ತೇಸರ ಗುಜ್ಜಾಡಿ ಪ್ರಭಾಕರ್ ನಾಯಕ್ , ಅರ್ಚಕ ವಿನಾಯಕ ಭಟ್ , ಗಿರೀಶ್ ಭಟ್ , ಜಿ ಎಸ್ ಬಿ ಯುವಕ ಅಧ್ಯಕ್ಷ ನಿತೇಶ್ ಶೆಣೈ , ಸತೀಶ್ ಕಿಣೆ , ವಿಶಾಲ್ ಶೆಣೈ ನರಹರಿ ಪೈ , ಆಡಳಿತ ಮಂಡಳಿಯ ಸದಸ್ಯರು , ಜಿ ಎಸ್ ಬಿ ಯುವಕ ಹಾಗೂ ಜಿ ಎಸ್ ಬಿ ಮಹಿಳಾ ಮಂಡಳಿಯ ಸದಸ್ಯರು , ನೂರಾರು ಸಮಾಜ ಭಾಂದವರು ಉಪಸ್ಥಿತರಿದ್ದರು.