ದೀಪಾವಳಿಯನ್ನು ಉಡುಪಿಯ ಜನಪ್ರಿಯ ಬಲ್ಲಾಳ್ ಮೊಬೈಲ್ಸ್ ನೊಂದಿಗೆ ಆಚರಿಸಿ: ಗೆಲ್ಲಿರಿ ರೂ.25 ಲಕ್ಷಕ್ಕೂ ಅಧಿಕ ಮೌಲ್ಯದ ಆಕರ್ಷಕ ಬಹುಮಾನ, ವಿವೋ ಗ್ರಾಹಕರಿಗೂ ಕಾದಿದೆ ಬಂಪರ್ ಬಹುಮಾನಗಳ ಸುರಿಮಳೆ....
ಜಗನ್ ಮೋಹನ್ ಕುಟುಂಬದ ಮದುವೆ: ಮತ್ತೆ ಒಟ್ಟಾಗಿ ಕಾಣಿಸಿಕೊಂಡ ಸಿಎಂ ವಿಜಯ್-ನಟಿ ತ್ರಿಷಾ!
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಭಾಗವಹಿಸಿದ್ದರು.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಮನೆಯ ಮದುವೆಯ ಆರತಕ್ಷತೆ ಇಂದು ಸಂಜೆ ಚೆನ್ನೈನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಹಾಗೂ ಮುಖಂಡರು ಭಾಗವಹಿಸಿದ್ದರು.
ಇದೇ ವೇಳೆ ತಮಿಳುನಾಡು ಮುಖ್ಯಮಂತ್ರಿ ವಿಜಯ್, ನಟಿ ತ್ರಿಷಾ ಹಾಗೂ ಮುಖ್ಯಮಂತ್ರಿಗಳ ತಾಯಿ ಶೋಬಾ ಚಂದ್ರಶೇಖರ್ ಕಾರ್ಯಕ್ರಮಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭ ಕೋರಿದರು.
ಇದರ ವಿಡಿಯೋ ಹಾಗೂ ಫೋಟೋಗಳು ಬಿಡುಗಡೆಯಾಗಿದ್ದು, ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಅಲ್ಲದೇ ಈ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಗೌತಮ್ ಅದಾನಿ ಭಾಗವಹಿಸಿದ್ದರು.