ಉಡುಪಿ: ರಸ್ತೆ ಅಪಘಾತದಲ್ಲಿ ಆರ್ಎಸ್ಎಸ್ ಮುಖಂಡ ಸಾವು!....ಅಕ್ಟೋಬರ್ 28ರಂದು ಆಂಧ್ರ ಕರಾವಳಿಗೆ 'ಅರ್ನಾಬ್' ಚಂಡಮಾರುತ, ತೀವ್ರ ಸ್ವರೂಪ, 3 ದಿನ ಮಳೆ ಸಾಧ್ಯತೆ IMD...
ಭಾರತದ ನಾವಿಕ್ ವ್ಯವಸ್ಥೆಗೆ ಬಲ ತುಂಬಿದ ಇಸ್ರೋ: ಎನ್ವಿಎಸ್-03 ಉಪಗ್ರಹ ಯಶಸ್ವಿ ಉಡಾವಣೆ
ಅಮರಾವತಿ, ಅಕ್ಟೋಬರ್ 31: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ತನ್ನ ಮುಂದಿನ ತಲೆಮಾರಿನ ನ್ಯಾವಿಗೇಷನ್ ಉಪಗ್ರಹ ಎನ್ವಿಎಸ್-03 ಅನ್ನು ಜಿಎಸ್ಎಲ್ವಿ-ಎಫ್18 ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಭಾರತದ ಸ್ವತಂತ್ರ ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆಯಾದ ನಾವಿಕ್ (NavIC) ಅನ್ನು ಬಲಪಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ವೇದಿಕೆಯಿಂದ ಶುಕ್ರವಾರ ರಾತ್ರಿ 11.51ಕ್ಕೆ ರಾಕೆಟ್ ಉಡಾವಣೆಗೊಂಡಿದೆ.
ಉಡಾವಣೆಯಾದ 20 ನಿಮಿಷಗಳಿಗೂ ಹೆಚ್ಚು ಸಮಯದ ಬಳಿಕ ಜಿಎಸ್ಎಲ್ವಿ ರಾಕೆಟ್ ಎನ್ವಿಎಸ್-03 ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಸೇರಿಸಿದೆ. ಈ ಕಾರ್ಯಾಚರಣೆಯು ಭಾರತದ ಭೂಸ್ಥಾಯೀ ಉಪಗ್ರಹ ಉಡಾವಣಾ ವಾಹನ (GSLV)ದ 20ನೇ ಹಾರಾಟವಾಗಿದೆ. ಈ ಮೂಲಕ 2,250 ಕೆ.ಜಿ. ತೂಕದ ಉಪಗ್ರಹವನ್ನು ಭೂಸ್ಥಾಯೀ ವರ್ಗಾವಣೆ ಕಕ್ಷೆಗೆ (GTO) ಸೇರಿಸಲಾಗಿದೆ.